December 6, 2024

Bhavana Tv

Its Your Channel

ಕರೋನಾ ವೈರಸ್ ತಡೆಗಟ್ಟಲು ಪಿ.ಎನ್ ಹೆಗಡೆ ಧಾರೇಶ್ವರ ನಾಟಿ ವೈದ್ಯರು ಮನೆ ಔಷಧಿ

ಕರೋನ ವೈರಸ್ ಕುರಿತು ಮಾತನಾಡಿದ ಅವರು ಸರ್ವರೋಗಕ್ಕೂ ತುಳಸಿಯೇ ಮಹಾ ಔಷಧಿ ಎಂಬ ಆಯುರ್ವೇದಿಕ್ ನಿಘಂಟಿನಲ್ಲಿ ಇದೆ ಕರೋನಾ ರೋಗ ತಗುಲಿದರೆ ತುಳಸಿಯ ೫ ಎಲೆಯನ್ನು ಕೈಯಲ್ಲಿ ತಿಕ್ಕಿ ರಸವನ್ನು ಮೂಸುತ್ತ ಇರಬೇಕು ಇದರಿಂದ ವೈರಾಣು ನಾಶವಾಗುತ್ತದೆ. ಈ ರೋಗ ಬಾರದಿದ್ದವರು ದಿನದಲ್ಲಿ ಮೂರು ನಾಲ್ಕು ಬಾರಿ ತುಳಸಿ ತಿಕ್ಕಿ ಮೂಸುತ್ತಾ ಇರಬೇಕು.ರೋಗ ತಗುಲುವುದಿಲ್ಲ.ರೋಗ ತಗಲಿದರು ಎರಡು ತಾಸಿಗೆ ಒಮ್ಮೆ ತಿಕ್ಕಿ ಮೂಸುತ್ತಾ ಇರಬೇಕು ಹರಡುವಿಕೆ ಕಡಿಮೆಯಾಗುತ್ತದೆ ಎಂದ ಅವರು,
೧) ತುಳಸಿ ಎಲೆ ರಸ
೨) ಅಡುಸೊಗೆ ರಸ
೩) ಶುಂಠಿ ರಸ
೪) ಲಿಂಬೆ ರಸ
೫) ಮೆಣಸಿನ ಕಾಳು
೬) ಜೇಷ್ಟ ಮದ್ದಿನ ಪೌಡರ
೭) ಇಪ್ಪಲಿ ಕರೆ ಪೌಡರ
೮) ಇರುಳ್ಳಿ ರಸ
೯) ಬೆಳ್ಳುಳ್ಳಿ ರಸ
೧೦) ವಾಯುವಿಳಂಗ ಕಾಳು

ಇವೆಲ್ಲವನ್ನು ಮಿಕ್ಸಿಯಲ್ಲಿ ಸೇರಿಸಿ ಅರೆದು ಕುದಿಸಬೇಕು. ತಣ್ಣಗಾದಾ ಮೇಲೆ ಶುದ್ಧ ಜೇನುತುಪ್ಪವನ್ನು ೪ ಚಮಚ ಸೇರಿಸಿ ಪ್ರತಿದಿನ ಆಹಾರದ ನಂತರ ಬೆಳಗ್ಗೆ ಒಂದು ಚಮಚ, ಮಧ್ಯಾಹ್ನ ಆಹಾರದ ನಂತರ ಒಂದು ಚಮಚ, ರಾತ್ರಿ ಆಹಾರದ ನಂತರ ಒಂದು ಚಮಚ ಸೇವಿಸಬೇಕು. ಪ್ರತಿ ಸಲ ಔಷಧ ಸೇವಿಸಿದ ೧೦ ನಿಮಿಷದ ನಂತರ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು ಎಂದು ತಿಳಿಸಿದರು.

error: