December 22, 2024

Bhavana Tv

Its Your Channel

ಭಟ್ಕಳದಲ್ಲಿ ಇದುವರೆಗೆ ಕರೋನಾ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವರ ಸಂಖ್ಯೆ ೨ಕ್ಕೆ .

ಭಟ್ಕಳ: ತಾಲ್ಲೂಕಿನಲ್ಲಿ ಕರೋನಾ ವೈರಸ್ ಶಂಕಿತ ವ್ಯಕ್ತಿಯೋರ್ವ ಶನಿವಾರದಂದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಇವರಿಗೆ ಕರೋನಾ ವೈರಸ್ ಸೋಂಕು ನೆಗೆಟಿವ್ ಎಂದು ವರದಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಭಾನವಾರದಂದು ಓರ್ವ ಮಹಿಳೆ ಕರೋನಾ ಶಂಕೆಯ ಹಿನ್ನೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು ಭಟ್ಕಳದಲ್ಲಿ ಇದುವರೆಗೆ ಕರೋನಾ ಕೊಠಡಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವರ ಸಂಖ್ಯೆ ೨ಕ್ಕೆ ಇರಿದೆ. ಆದರೆ ಇದುವರೆಗೂ ಭಟ್ಕಳದಲ್ಲಿ ಯಾವುದೇ ಕರೋನಾ ವೈರಸ್ ಇರುವ ವ್ಯಕ್ತಿಗಳು ಪತ್ತೆಯಾಗಿಲ್ಲವಾಗಿದೆ

ಈ ಮಹಿಳೆ ವಾರದ ಹಿಂದಷ್ಟೇ ವಿದೇಶದಿಂದ ಭಟ್ಕಳಕ್ಕೆ ವಾಪಸ್ಸಾಗಿದ್ದು ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈಕೆಯ ಗಂಟಲಿನ ದ್ರವ್ಯ ಲೇಪನ ಪರೀಕ್ಷೆಗಾಗಿ ಶಿವಮೊಗ್ಗೆ ಕಳುಹಿಸಿಕೊಡಲಾಗಿದ್ದು ಈಕೆಗೆ ಕರೋನಾ ವೈರಸ್ ಇದೆಯೋ ಇಲ್ಲವೆಂದು ವರದಿ ಬಂದ ಮೇಲೆಯೇ ತಿಳಿದು ಬರಬೇಕಿದೆ

ಈ ನಡುವೆ ಕರೋನಾ ಭಯದಿಂದ ಶನಿವಾರವಷ್ಟೇ ಕರೋನ ಕೊಠಡಿ ಸೇರಿದ ನಲವತ್ತು ವರ್ಷದ ಪ್ರಾಯದ ವ್ಯಕ್ತಿ ರಕ್ತ ಗಂಟಲಿನ ದ್ರವ ಲೇಪನ ವರದಿ ನೆಗೆಟಿವ್ ಅಂಶ ಪತ್ತೆಯಾಗಿದ್ದು ಇಲ್ಲಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ ಆದರೆ ಇದನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಲು ರಕ್ತ ಹಾಗೂ ಗಂಟಲಿನÀ ದ್ರವ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವೈದ್ಯಾಧಿ ಮೂಲಗಳು ತಿಳಿಸಿವೆ

error: