December 22, 2024

Bhavana Tv

Its Your Channel

ಬಡವರ ಪಾಲಿಗೆ ಬೆಳಕಾದ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್

ಕೃಷ್ಣರಾಜಪೇಟೆ ತಾಲ್ಲೂಕಿನ ಆನೆಗೊಳ ಗ್ರಾಮದ ಶ್ರೀಮತಿ ಲಾವಣ್ಯ ಮಂಜುನಾಥ್ ರವರ ಪುತ್ರ ಹಾಗೂ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷರಾದ ಬಿ ಎಂ ಕಿರಣ್‌ರವರು ತಮ್ಮದೇ ಆದ ಸಮಾಜ ಸೇವೆಯಲ್ಲಿ ದಿನದಿಂದ ದಿನಕ್ಕೆ ವಿಭಿನ್ನ ಕೆಲಸಗಳನ್ನು ಮಾಡುತ್ತಾ ಬಡವರ ಮನೆ ಮಗನಾಗಿದ್ದಾರೆ.

ಒಂದು ತಿಂಗಳ ಹಿಂದೆ ಆನೆಗೊಳ ಗ್ರಾಮದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಿ ಕಣ್ಣು ಕಾಣದ ಸುಮಾರು ೨೦ ವೃದ್ದರಿಗೆ ಶಸ್ತ್ರ ಚಿಕಿತ್ಸೆ ನೀಡಿಸಿದರು ಅಲ್ಲದೆ ೧೫೦ಕ್ಕೂ ಹೆಚ್ಚು ಸಾರ್ವಜನಿಕರಿಗೆ ಉಚಿತ ಕನ್ನಡಕ ವಿತರಣೆ ಮಾಡಿ ಬಡವರಪಾಲಿಗೆ ಬೆಳಕಾದರು.. ಅಲ್ಲದೆ ಉಳ್ಳವರು ತಮ್ಮನ್ನು ಅಭಿವೃದ್ಧಿ ಮಾಡಿಕೊಳ್ಳುವುದರಲ್ಲಿ ಹೋರಾಟ ಮಾಡುತ್ತಿದ್ದಾರೆ ಆದರೆ ಇಲ್ಲಿಯ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿ ಎಂ ಕಿರಣ್ ರವರು ಸಮಾಜ ಸೇವೆಗೆ ಹಾಗೂ ಸಮಾಜದ ಕುಂದು ಕೊರತೆಯನ್ನು ನೀಗಿಸಲು ಕಛೇರಿ ತೆರೆಯಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಇದುವರೆಗೆ ಸುಮಾರು ಆರು ಬಡ ರೋಗಿಗಳಿಗೆ ಹೃದಯ ಶಸ್ತ್ರ ಚಿಕಿತ್ಸೆ, ಹಾಗೂ ಹೊಟ್ಟೆಯ ಹುಣ್ಣಿನ ಶಸ್ತ್ರ ಚಿಕಿತ್ಸೆ, ಗರ್ಭಕೋಶದ ಶಸ್ತ್ರ ಚಿಕಿತ್ಸೆ, ಸೇರಿದಂತೆ ಹಲವು ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ಂಅಡಿಸುವ ಮೂಲಕ ಬಡವರ ಪಾಲಿನ ಬಂದು ಹಾಗೂ ಮನೆಯ ಮಗನಾಗಿ ಸಮಾಜ ಸೇವೆಯಲ್ಲಿ ತಮ್ಮ ಶ್ರೇಯಸ್ಸು ಕಾಣುತ್ತಿದ್ದಾರೆ..

ಬಿ.ಎಂ ಕಿರಣ್ ರವರು ಮೂಲತ ಬೆಂಗಳೂರಿನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡು ಉತ್ನತ ಮಟ್ಟಕ್ಕೆ ಬೆಳದು ಬಂದಿದ್ದು ಸಾರ್ವಜನಿಕರ ಮೇಲೆ ಇರುವ ಅಪಾರವಾದ ಪ್ರೀತಿ ವಿಶ್ವಾಸ ಮಂದೆ ಚುನಾವಣೆಯಲ್ಲಿ ಸ್ಪರ್ಧಿಸಿP ಜನರ ಸೇವೆ ಮಾಡಬೇಕು ಎಂಬುದು ಸ್ಥಳಿಯ ಜನರ ಒತ್ತಾಯವು ಕೇಳಿ ಬರುತ್ತಿದೆ..

ತಾಯಿ ಲಾವಣ್ಯ, ಮತ್ತು ತಂದೆ ಮಂಜುನಾಥ್ ರವರು ತಮ್ಮ ಗೌತಮ್ಮ ರವರು ಬಿ ಎಂ ಕಿರಣ್ ಮಾಡುತ್ತಿರು ಸಾಮಾಜಿಕ ಕಾರ್ಯಗಳಿಗೆ ಬೆನ್ನಲುಬವಾಗಿ ನಿಂತಿದ್ದಾರೆ..

ಇAತಹ ಸಮಾಜ ಸೇವಕರಾದ ಬಿ.ಎಂ ಕಿರಣ್ ರವರ ಕೈ ಬಲ ಪಡಿಸಿ ಇನ್ನು ಹೆಚ್ಚಿನ ಶಕ್ತಿಯನ್ನು ದೇವರು ನೀಡಬೇಕು ಎಂದು ಸ್ಥಳಿಯರ ಅಭಿಪ್ರಾಯವಾಗಿದೆ.

error: