ಹೊನ್ನಾವರ ಪಟ್ಟಣದ ನಾಮಧಾರಿ ಸಮುದಾಯ ಭವನದಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿ ಶ್ರೀ ರಾಮಕ್ಷೇತ್ರವು ಈ ಹಿಂದಿನಿAದಲೂ ಹಲವು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದು ಉಜಿರೆಯ ಶ್ರೀ ರಾಮ ಭಗವಾನ್ ನಿತ್ಯಾನಂದ ದೇವರ ಸನ್ನಿದಿಯಲ್ಲಿ ಮಾರ್ಚ ೨೬ರಿಂದ ಒಂದು ವಾರಗಳ ಕಾಲ ೬೦ನೇ ವರ್ಷದ ರಾಮತಾರಕ ಮಂತ್ರ ಸಪ್ತಾಹ ಕಾರ್ಯಕ್ರಮ ಪ್ರತಿಷ್ಟಾ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಮಹಾ ಬ್ರಹ್ಮರಥೋತ್ಸವ ನಡೆಯಲಿದೆ. ಶ್ರೀಗಳ ಮಾರ್ಗದರ್ಶನ ಮತ್ತು ದಿವ್ಯ ಸಾನಿಧ್ಯದಲ್ಲಿ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ಪ್ರತಿದಿನ ಸಾಯಂಕಾಲ ವಿವಿಧ ಸಾಂಸ್ಕçತಿಕ ಕಾರ್ಯಕ್ರಮಗಳು ನಡೆಯಲಿದೆ. ಏಪ್ರೀಲ್ ೨ರ ರಾಮನವಮಿಯಂದು ವಿಷ್ಣು ಸಹಸ್ರನಾಮ, ರಾಮತಾರಕ ಮಂತ್ರ ಯಜ್ಞ, ಸಾಯಂಕಾಲ ೭ ಗಂಟೆಗೆ ಮಹಾ ಬ್ರಹ್ಮರಥೋತ್ಸವ ನಡೆಯಲಿದೆ. ಈ ಕಾರ್ಯಕ್ರಮ ಸಚೀವರು, ಶಾಸಕರು, ವಿವಿಧ ಮಠಾಧೀಶರು ಗಣ್ಯರು ಆಗಮಿಸಲಿದ್ದಾರೆ. ಸಾರ್ವಜನಿಕರು ಸಮಾಜ ಭಾದಂವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ವಿಯಾಗಲು ಸಹಕರಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ವಾಮನ ನಾಯ್ಕ, ಟಿ.ಟಿ.ನಾಯ್ಕ,ರಾಮಪ್ಪ ನಾಯ್ಕ, ಜಗದೀಶ ನಾಯ್ಕ, ವಿನಾಯಕ ನಾಯ್ಕ ಮೂಡ್ಕಣಿ, ಮಂಜುನಾಥ ನಾಯ್ಕ ಗೇರುಸೊಪ್ಪಾ, ಐ.ವಿ.ನಾಯ್ಕ ಮುಗ್ವಾ, ಲಂಬೋದರ ನಾಯ್ಕ, ಕೆ.ಎಂ.ನಾಯ್ಕ, ಮುಂತಾದವರು ಉಪಸ್ಥಿತರಿದ್ದರು
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.