December 21, 2024

Bhavana Tv

Its Your Channel

ಲಾಕ್ ಡೌನ್ ಸ್ಥಿತಿಯಲ್ಲೇ ತೆರಿಗೆಹೆಚ್ಚಳ_ಹೊರೆ !??

ಜಗತ್ತೇ ಸ್ಥಬ್ಧವಾಗಿ ಸಂಕಷ್ಟದಲ್ಲಿರುವ ಇಂತಹ ವಿಷಮಪರಿಸ್ಥಿತಿಯಲ್ಲಿ, ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯ ಅಧಿಸೂಚನೆಯೊಂದು ಆಘಾತಮೂಡಿಸಿದೆ.
ಹೌದು..ದೇಶ-ಕೋಶಗಳಿಗೀಗ ಸಂಕಷ್ಟದ ಸಮಯ! ಪ್ರಧಾನಿ ಮೋದಿಯವರ ಕರೆಯಂತೆ ದೇಶವಾಸಿಗಳೆಲ್ಲ ಮನೆಯೊಳಗೆ ಬಂಧಿಯಾಗಿ ಜವಾಬ್ಧಾರಿಯಿಂದ ವರ್ತಿಸುತ್ತಿದ್ದಾರೆ. ಆಘಾತಕಾರಿಯಾದರೂ..ಅನಿವಾರ್ಯವಿದು. ಸಹಜವಾಗಿ..
ಬಹುತೇಕ ಉದ್ಯಮಗಳು ನೆಲಕಚ್ಚಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಇದಕ್ಕೆ ಹೊರತಲ್ಲ. ಬಹುತೇಕ ಖಾಸಗೀ ವಾಹನಸಾಗಾಟ ಸಂಸ್ಥೆಗಳು ನಷ್ಟದ ಹೊರೆಯಲ್ಲಿ ಮುಂಬರುವ ದಿನಗಳ ಬಗ್ಗೆ ಚಿಂತಿತವಾಗಿವೆ.

ಎಲ್ಲ ಉದ್ಯಮಗಳೂ.. ಮುಂಬರುವ ದಿನಗಳಲ್ಲಿ ..ಕೆಲಮಟ್ಟಿನ ರಿಯಾಯತಿಗಳನ್ನೇ ಎದುರು ನೋಡಬೇಕಾದ ಸ್ಥಿತಿಯಲ್ಲಿರುವಾಗ ಕರ್ನಾಟಕದ ಸಾರಿಗೆ ಸಚಿವಾಲಯ, ಇಂದಿನಿAದಲೇ ಅನ್ವಯಿಸುವಂತೆ ದೊಡ್ಡಪ್ರಮಾಣದಲ್ಲಿ
ಟ್ಯಾಕ್ಸ್ ಏರಿಸಿ ಅಧಿಸೂಚನೆ ಹೊರಡಿಸಿದೆ.!

ಟೆಂಪೋ/ಮಿನಿಬಸ್/ಬಸ್ ಮಾಲಕರಿಗಿದು ತೀವ್ರ ಆಘಾತಕಾರಿ.

ನಿಂತಲ್ಲೇ ನಿಂತಿರುವ ವಾಹನಗಳನ್ನು ನೋಡುತ್ತಾ ಚಿಂತೆಯಲ್ಲಿ ಕುಳಿತಿರುವ ಮಧ್ಯಮ ಮತ್ತು ಬೃಹತ್ ವಾಹನಗಳ ಮಾಲಕರಿಗಿದು ಇಂತಹ ಕಷ್ಟದದಿನಗಳಲ್ಲೇ ಬಂದಿರುವ ಭಾರೀಹೊಡೆತ. ಈಗಾಗಲೇ ಹೆಚ್ಚಿರುವ ಕರ ಮತ್ತಿತರ ನಿರ್ವಹಣಾ ಖರ್ಚುವೆಚ್ಚಗಳನ್ನು ಸರಿದೂಗಿಸಲು ಕಸರತ್ತು ಮಾಡುತ್ತಾ ಹಲವಾರು ಬಾರಿ ಹೆಚ್ಚಿನ ದರಕ್ಕಾಗಿ..ಪ್ರಯಾಣಿಕರ ಬೈಗುಳಕ್ಕೆ ತುತ್ತಾಗುತ್ತಾ ಏಗುತ್ತಿರುವ ಸಾರಿಗೆ ಸಂಸ್ಥೆಗಳಿಗೆ…(ಮತ್ತು ಪರೋಕ್ಷವಾಗಿ ಸಾರ್ವಜನಿಕರಿಗೂ)
ಈ ಅಧಿಸೂಚನೆ ದೊಡ್ಡಹೊರೆ ಯಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ.
ವಾಹನ ಸಂಚಾರ ಸ್ಥಬ್ಧವಾಗಿದ್ದು ತಟಸ್ಥವಾಗಿ ನಿಂತಿರುವ ವಾಹನಗಳ ಮೆಂಟೆನನ್ಸ್ ಕೂಡ ಹೆಚ್ಚಿನ ಹೊರೆಯೆಂದೇ ಯೋಚಿಸುತ್ತಿರುವವರಿಗೆ ಪ್ರತಿವಾಹನಗಳ ಮೇಲೆ ಲಕ್ಷಾಂತರ ರೂಪಾಯಿಗಳ ಹೆಚ್ಚುವರಿ ತೆರಿಗೆ ಕಂಗೆಡಿಸುತ್ತಿದೆ.
ಗಾಯದ ಮೇಲೆ ಬರೆ ಎಳೆದಂತೆ ಬಂದಿರುವ ಆದೇಶವನ್ನು ಸಾರ್ವಜನಿಕ ಪ್ರಯಾಣಿಕರ ಮತ್ತು ವಾಹನಮಾಲೀಕರ ಸಂಕಷ್ಟ ಮನಗಂಡು ಸಂಬAಧಪಟ್ಟವರು ಪುನರ್ಪರಿಶೀಲಿಸಿ ಎಂದು ಶ್ರೀಕುಮಾರ್ ಸಮೂಹ ಸಂಸ್ಥೆಯ ಮಾಲಕರಾದ ವೆಂಕಟ್ರಮಣ ವಿ ಹೆಗಡೆ ಹೊನ್ನಾವರ ಇವರು ಆಗ್ರಹಿಸಿದ್ದಾರೆ.

error: