ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆಗೆ ಇಡೀ ದೇಶವೇ ಒಗ್ಗೂಡಿದೆ.. ಇಂದು ರಾತ್ರಿ 9 ಗಂಟೆಗೆ ದೀಪ ಹಚ್ಚುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದ್ದರು.ಅಂತೆಯೇ ದೇಶದ ಜನತೆ ದೀಪ ಹಚ್ಚುವ ಮೂಲಕ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.
ಮಹಾಮಾರಿ ಕರೊನಾ ವಿರುದ್ಧದ ಹೋರಾಟದಲ್ಲಿ ಯಾರು ಏಕಾಂಗಿಯಲ್ಲ. ನಾವೆಲ್ಲರೂ ಒಂದೇ ಎಂದು ಸಾರಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದ ದೀಪ ಬೆಳಗುವ ಸಂಕಲ್ಪಕ್ಕೆ ಇಡೀ ರಾಷ್ಟ್ರದ ಜನತೆ ಭರ್ಜರಿ ಬೆಂಬಲ ನೀಡಿದರು. ಅದರಂತೆ ಉತ್ತರಕನ್ನಡ ಜಿಲ್ಲೆಯ ಜನತೆಯೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ ಮನೆ ಹೊರಗಡೆ ದೀಪವನ್ನು ಬೆಳಕಿನಲ್ಲಿ ಕರೊನಾ ಅಂಧಕಾರವನ್ನು ತೊಲಗಿಸಲು ಮುಂದಾದರು
ಕೆಲವರ ವ್ಯಂಗ್ಯ, ಟೀಕೆ-ಟಿಪ್ಪಣಿಗಳು ನಡುವೆಯೂ ಪ್ರಧಾನಿ ಮಾತಿಗೆ ಭಾವನಾತ್ಮಕವಾಗಿ ಬೆಸೆದುಕೊಂಡ ಜನತೆ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಬೆಳಗಿಸಿದರು. ಮೊಬೈಲ್ ಫ್ಲ್ಯಾಶ್ ಲೈಟ್, ಮೇಣದ ಬತ್ತಿ ಹಾಗೂ ಎಣ್ಣೆ ದೀಪಗಳನ್ನು ಹಿಡಿದು ಮನೆಯಿಂದ ಆಚೆ ಬಂದು ಬೆಳಕು ಉಕ್ಕಿಸಿ, ಏಕತೆಯ ಮಂತ್ರ ಸಾರಿದರು. ಮನೆಯ ಮಹಡಿಗಳ ಮೇಲೆ ಜನರು ದೀಪ ಕ್ರಾಂತಿ ಮಾಡಿದ್ದು ಎಲ್ಲಡೆ ದೀಪಗಳ ಸಾಲು ಸಾಲು ಕಾಣುತ್ತಿತ್ತು.
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಬಲ ತುಂಬಲು ಹಾಗೂ 21 ದಿನಗಳ ಲಾಕ್‌ಡೌನ್‌ನಿಂದ ಕಂಗೆಟ್ಟ ಜನರಿಗೆ ಆತ್ಮಸ್ಥೈರ್ಯ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ದೀಪ ಅಭಿಯಾ’ ಭರ್ಜರಿ ಯಶಸ್ಸು ಕಂಡಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.