March 30, 2023

Bhavana Tv

Its Your Channel

ತರಕಾರಿ ಬೆಳೆಗಾರರಿಂದ ನೇರವಾಗಿ ತರಕಾರಿ ಖರೀದಿಸಿ ಉಚಿತವಾಗಿ ವಿತರಿಸುವ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿದ ಎಸ್.ಆರ್.ಎಲ್ ಸಮೂಹ.

ಹೊನ್ನಾವರ ತಾಲೂಕಿನ ಎಸ್,ಆರ್.ಎಲ್ ಗ್ರೂಪ್ ತಾಲೂಕಿನ ಜನತೆಗೆ ಹಲವು ಬಾರಿ ಸಹಾಯಹಸ್ತ ನೀಡುತ್ತಾ ನೊಂದವರಿಗೆ ಧನಸಹಾಯ ವಸ್ತುರೂಪದ ಕೊಡುಗೆ ನೀಡುತ್ತಾ ಈ ಹಿಂದಿನಿAದಲೂ ಸಾಮಾಜಿಕ ಕಾರ್ಯ ನಡೆಸುತ್ತಾ ಬಂದಿದೆ. ಇಂದು ದೇಶದೆಲ್ಲಡೆ ಕರೋನಾದಿಂದ ಸಂಕಷ್ಟದಲ್ಲಿ ಇದ್ದಾಗ ರೈತರು ಬೆಳೆದ ತರಕಾರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗಬಾರದೆಂದು ಎಂದು ಮನಗಂಡು ನೇರವಾಗಿ ತರಕಾರಿ ಖರೀದಿಸಿ ಅದನ್ನು ಕವಲಕ್ಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದವರಿಗೆ ಉಚಿತವಾಗಿ ನೀಡಲು ತಿರ್ಮಾನಿಸುವ ಮೂಲಕ ಒಂದು ಕಡೆ ರೈತರಿಗೆ ನೆರವಾಗಿದಲ್ಲದೆ ಇನ್ನೊಂದಡೆ ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಮೀಣ ಭಾಗದವರಿಗೂ ತರಕಾರಿ ಪೂರೈಕೆ ಮಾಡಲು ಮುಂದಾಗಿದ್ದಾರೆ. ಅದರಲ್ಲೂ ಶೇಖರಣೆ ಮಾಡಿ ಇಡಲು ಸಾದ್ಯವಾಗದ ಗೆಣಸು, ಮತ್ತು ಬದನೆಕಾಯಿಯನ್ನು ಖರೀದಿ ಮಾಡಿ ಅದನ್ನು ಮನೆಬಾಗಿಲಿಗೆ ತಲುಪಿಸಲು ತಿರ್ಮಾನಿಸಿ ರವಿವಾರದಿಂದಲೇ ಖರೀದಿಸಿ ಪ್ರತಿ ಮನೆ ಬಾಗಿಲಿಗೆ ಅವರ ಅಭಿಮಾನಿಗಳ ಮೂಲಕ ತಲುಪಿಸುತ್ತಿದ್ದಾರೆ.


ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಆರ್.ಎಲ್ ಗ್ರೂಪಿನ ಮಾಲೀಕರಾದ ವೆಂಕ್ರಮಣ ಹೆಗಡೆ ನಮ್ಮ ಜಿಲ್ಲೆಯ ಗೊಕರ್ಣ ಭಾಗದ ರೈತರು ತರಕಾರಿ ಬೆಳೆಯುತ್ತಿದ್ದರು. ಅದರಲ್ಲಿಯೂ ಅವರು ಬೆಳೆದ ಗೆಣಸು ರಾಜ್ಯವಲ್ಲದೆ ಮಹರಾಷ್ಟçದವರೆಗೂ ಸರಬರಾಜಾಗುತ್ತಿತ್ತು. ಅವರಿಗೆ ನೈತಿಕವಾಗಿ ಬೆಂಬಲ ನೀಡಲು ಅವರಿಂದ ಸುಮಾರು ೫೦ ಕ್ವಿಂಟಲ್ ಗೆಣಸು ಮತ್ತು ಬದನೆಕಾಯಿ ಖರಿದಿಸಿ ಮನೆಯ ಬಾಗಿಲಿಗೆ ಉಚಿತವಾಗಿ ನೀಡಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ನಮ್ಮ ಗ್ರಾಮದ ಯುವಕರ ಮೂಲಕ ಮನೆಬಾಗಿಲಿಗೆ ತಲುಪಿಸಲು ಮುಂದಾಗಿದ್ದು ಇಂದು ಕವಲಕ್ಕಿ ಕಣ್ಣಿಮಣೆ, ಗುಡ್ಡೆಬಾಳ, ನಾಳೆ ಅರೇಅಂಗಡಿ, ಕೆರೆಕೋಣ, ಬಾಳೆಗದ್ದೆಯಂತಹ ಸುತ್ತಮುತ್ತಲಿನ ಗ್ರಾಮಗಳಿಗೆ ನೀಡಲು ತಿರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪತ್ನಿ ಗೀತಾ ಹೆಗಡೆ, ಮಗ ಶಶಾಂಕ ಸೇರಿದಂತೆ ಕುಟುಂಬಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು.

About Post Author

error: