December 22, 2024

Bhavana Tv

Its Your Channel

ಹೊನ್ನಾವರದಲ್ಲಿ ವಿಭಿನ್ನ ಕಳ್ಳತನ, ಕಳ್ಳತನ ದ್ರಶ್ಯಾವಳಿ ಸಿಸಿ ಕ್ಯಾಮಾರಾದಲ್ಲಿ ಸೆರೆ

ಅಂಗಡಿಯೆದುರು ಇಟ್ಟ ಹಾಲು,ಮೊಸರು,ಮಜ್ಜಿಗೆ ಪ್ಯಾಕೆಟ್ ಗಳನ್ನು ವ್ಯಕ್ತಿಯೊರ್ವ ಕದ್ದೊಯ್ದ ಘಟನೆ ಹೊನ್ನಾವರ ತಾಲೂಕಿನ ಹಳದಿಪುರದ ಚಿಪ್ಪಿಹಕ್ಕಲ ಕ್ರಾಸ್ ಬಳಿ ನಡೆದಿದೆ.
ಅಂದಾಜು ೩೦ ರಿಂದ ೩೫ ವರ್ಷ ವಯಸ್ಸಿನ ವ್ಯಕ್ತಿ ಬೆಳಗಿನ ಜಾವ ಸುಮಾರು ೪:೦೦ ಗಂಟೆಗೆ ಸುಮಾರಿಗೆ ಅಂಗಡಿ ಎದುರು ಇಟ್ಟು ಹಾಲು ಮೊಸರು ಮಜ್ಜಿಗೆ ಪ್ಯಾಕೆಟ್ ಗಳನ್ನು ಕದಿಯುತ್ತಿರುವ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆ ಆಗಿದೆ.
ವಾರದಲ್ಲಿ ಎರಡು ಬಾರಿ ಕಳ್ಳತನ ನಡೆಸಿದ ದೃಶ್ಯ ದಾಖಲಾಗಿದೆ.ಗೀತಾ ಕೊಲ್ಡ್ರಿಂಕ್ಸ್ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು ಅಂಗಡಿಯ ಮಾಲೀಕ ಚಂದ್ರಕಾAತ್ ಭಂಡಾರಿ ಹೇಳುವ ಪ್ರಕಾರ ಒಂದೆರಡು ಹಾಲಿನ ಪ್ಯಾಕೆಟ್ ಕಳ್ಳತನ ಪ್ರಕರಣಗಳು ಆಗಾಗ ನಡೆಯುತ್ತಿರುತ್ತದೆ. ಆದರೆ ಈ ಬಾರಿ ಅತಿ ಹೆಚ್ಚಿನ ಮೊತ್ತದ ಹಾಲಿನ ಪ್ಯಾಕೆಟ್ ಕದ್ದೊಯ್ದಿದ್ದಾರೆ. ಕಳ್ಳತನ ನಡೆಸಿದ ವ್ಯಕ್ತಿ ಸ್ಥಳೀಯ ಎಂದು ಗುರುತಿಸಲು ಸಾಧ್ಯವಾಗದಿದ್ದರೂ ಅಪರಿಚಿತನಂತೆ ಕಂಡು ಬಂದಿದ್ದಾನೆ.ಸ್ಥಳೀಯರಿಗೆ ಈತನ ಮುಖಚಹರೆಯ ಬಗ್ಗೆ ಮಾಹಿತಿ ಇಲ್ಲವಾಗಿದೆ ಎನ್ನಲಾಗಿದೆ. ಕರ್ಕಿ,ಹಳದಿಪುರ ಸುತ್ತಮುತ್ತ ಅನೇಕ ಅಂಗಡಿ ಮುಂಗಟ್ಟು,ಮನೆ ಕಳ್ಳತನ ನಡೆಸಿ ಹಣ,ಕೆಲವು ಬೆಲೆಬಾಳುವ ಪರಿಕರ ಕದ್ದೊಯ್ದ ಘಟನೆಗಳು ನಡೆದಿದ್ದವು.ಇದೀಗ ವಿಭಿನ್ನ ರೀತಿ ಅಂದರೆ ಹಾಲು-ಮೊಸರು ಪ್ಯಾಕೆಟ್ ಗಳಿಗೆ ಕಳ್ಳರು ಕೈಚಳಕ ತೋರಿಸಿರುವುದು ವಿಪರ್ಯಾಸವೇ ಸರಿ. ಈ ಕುರಿತು ಚಂದ್ರಕಾOತ್ ಭಂಡಾರಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಪರಿಚಿತ ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ.

error: