December 22, 2024

Bhavana Tv

Its Your Channel

ಲಾಕ್ ಡೌನ್ ಇದ್ದರೂ ಅನಾವಶ್ಯಕ ವಾಹನದಲ್ಲಿ ಓಡಾಡುವವರ ದ್ವೀಚಕ್ರ ವಾಹನಗಳ ಮೇಲೆ ಕೇಸ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ ಹೊನ್ನಾವರ ಪೋಲಿಸರು.

ಮಾರ್ಚ್ ೨೪ರಿಂದ ಭಾರತ ಲಾಕ್ ಡೌನ ಇದ್ದು ಹೊನ್ನಾವರ ತಾಲೂಕಿನಲ್ಲಿಯೂ ಪೋಲಿಸ್ ಇಲಾಖೆ ಪಟ್ಟಣ ಪಂಚಾಯತ್, ತಾಲೂಕ ಆಡಳಿತ ಕಟ್ಟುನಿಟ್ಟಾಗಿ ಪಾಲಿಸಲು ಅನಾವಶ್ಯಕವಾಗಿ ರಸ್ತೆಗೆ ಇಳಿಯದಂತೆ ಪೋಲಿಸ್ ಇಲಾಖೆ ಹಲವು ಬಾರಿ ಸಾರ್ವಜನಿಕರಿಗೆ ತಿಳಿ ಹೇಳುವ ಕಾರ್ಯ ಮಾಡಿತ್ತು. ಲಾಠಿ ಬೀಸುವ ಮೂಲಕವು ಬುದ್ದಿ ಹೇಳಿತ್ತು. ಕೆಲವು ಮಂದಿ ಇದರಿಂದ ಬುದ್ದಿ ಕಲಿತಿದ್ದರೂ ಇನ್ನು ಹಲವರು ತಮ್ಮದೇ ಹಳೆ ಚಾಳಿ ಮುಂದುವರೆಸಿದ್ದರು. ಶುಕ್ರವಾರ ಬೆಳಿಗ್ಗೆಯಿಂದಲೇ ರಸ್ತೆಗೆ ಇಳಿದು ಅಡ್ಡಾಡುವ ಸುಮಾರು ೭೦ಕ್ಕೂ ಅಧಿಕ ವಾಹನವನ್ನು ಠಾಣಿಯಲ್ಲಿ ವಶಪಡಿಸಿಕೊಂಡು ದಾಖಲಾತಿ ಪರಿಶೀಲನೆ ನಡೆಸಿದರು. ಮೆಡಿಕಲ್ ತೆಗೆದುಕೊಂಡು ಹೊಗಲು ಬಂದ ೭೬ ವಾಹನಗಳಿಗೆ ಪರಿಶೀಲನೆ ನಡೆಸಿ ಸೂಕ್ತ ದಾಖಲಾತಿ ಇರದ ವಾಹನಗಳಿಗೆ ದಂಡ ಹಾಕಿ ಮುಂದೆ ಅನಾವಶ್ಯಕ ರಸ್ತೆಗೆ ಬರಬೇಡಿ ಕರೋನಾ ನಿಯಂತ್ರಣಕ್ಕೆ ತರಲು ಪ್ರತಿಯೊರ್ವರಿಗೂ ಮನೆಯಲ್ಲಿಯೇ ಇರುವಂತೆ ಮನವರಿಕೆ ಮಾಡಿದರು. ಇನ್ನು ಅನಾವಶ್ಯಕ ಅಡ್ಡಾಡುವ ೪೬ ವಾಹನಗಳ ಮೇಲೆ ಕೇಸ್ ಮಾಡಿ ಲೌಕ್ ಡೌನ ಬಳಿಕ ನೀಡುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈಗಲೂ ಗ್ರಾಮೀಣ ಭಾಗದಲ್ಲಿಯೂ ಕ್ರೀಕೆಟ್ ಆಡುವವರು ಹಾಗೂ ರಸ್ತೆ ಪಕ್ಕ ಕುಳಿತು ಹರಟೆ ಹೊಡೆಯುವದಕ್ಕೂ ನಿಯಂತ್ರಣಕ್ಕೆ ತರಲು ಬೀಟ್ ಪೋಲಿಸರು ಕಾರ್ಯಪ್ರವೃತ್ತರಾಗಿದ್ದು ಅಲ್ಲಿಯೂ ಲಾಠಿ ಬಳಸಿ ಬುದ್ದಿ ಕಲಿಸಲು ಮುಂದಾಗುತ್ತಿದ್ದಾರೆ..

ಈ ಮಧ್ಯೆ ತಾಲೂಕು ಆಡಳಿತ ದಿನನಿತ್ಯ ವಸ್ತು ತರಕಾರಿ ತರಲು ಪಾಸ್ ವಿತರಣೆ ಮಾಡಿದ್ದು ಪಾಸ್ ಪಡೆದವರು ದುರ್ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ಎರಡು ಜನರಿಗೆ ನೀಡಲಾಗಿದ್ದ ಪಾಸ್ ರದ್ದು ಪಡಿಸುವ ಮೂಲಕವು ಇತರರಿಗೆ ಎಚ್ಚರಿಕೆ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ದಿನಸಿ, ತರಕಾರಿ ವಿತರಣೆಯಲ್ಲಿ ಸಮಸ್ಯೆಯಾಗದಂತೆ ಪ್ರತಿ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾಲೂಕಿನಲ್ಲಿ ಸರ್ಕಾರದ ಆದೇಶ ಕಟ್ಟುನಿಟ್ಟಾಗಿ ಸರ್ವರೂ ಪಾಲಿಸುವಂತೆ ತಹಶೀಲ್ದಾರ ವಿವೇಕ ಶೆಣ್ವೆ ತಿಳಿಸಿದ್ದು ಮುಂದಿನ ಆದೇಶವರೆಗೂ ಲಾಕ್ ಡೌನ ಮುಂದುವರೆಯಲಿದೆ. ಈ ಮಧ್ಯೆ ತಾಲೂಕಿನ ಪೆಟ್ರೂಲ್ ಬಂಕ್ ನಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಆದೇಶವಿದ್ದರೂ ವಾಹನ ಸಂಚಾರ ನಡೆಯುತ್ತಿದೆ. ಅಲ್ಲದೇ ಪಾಸ್ ಇರುವವರ ಮೇಲೂ ನಿಗಾವಹಿಸಿ ಪೆಟ್ರೂಲ್ ಹಾಕಿಸಿಕೊಳ್ಳುವ ಮಾಹಿತಿ ಪಡೆಯಲು ತಿರ್ಮಾನಿಸಿದ್ದಾರೆ. ಅವಶ್ಯವೆನಿಸಿದ್ದಲ್ಲಿ ಬಂಕ್ ನಲ್ಲಿರುವ ಸಿಸಿಕ್ಯಾಮರ್ ಪರಿಶೀಲನೆ ನಡೆಸಲು ತಿರ್ಮಾನಿಸಿದ್ದಾರೆ. ನೀಡಲಾದ ಪಾಸ್ ಹೊಂದಿದವರು ದುರ್ಬಳಕೆ ಮಾಡಿಕೊಂಡಲ್ಲಿ ತಕ್ಷಣ ಪಾಸ್ ರದ್ದುಪಡಿಸಿಕೊಂಡು ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

error: