June 8, 2023

Bhavana Tv

Its Your Channel

ಅನಾವಶ್ಯಕ ಅನುಮತಿ ಪತ್ರಕ್ಕಾಗಿ ಬರಬೇಡಿ ಉಡಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ.

ಉಡುಪಿ ; ಕರೋನಾ ಮಹಾಮಾರಿ ತಡೆಗಟ್ಟಲು ಉಡುಪಿ ಜಿಲ್ಲೆಯಾದ್ಯಂತ ನಿಷೇಧಾಜ್ನೆ ಜಾರಿಯಾಲ್ಲಿದ್ದು ಅದರಂತೆ ಸಾರ್ವಜನಿಕರು ಹೊರಗಡೆ ಸಂಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿಕೊಂಡಿದ್ದಾರೆ.
ಸಣ್ಣಪುಟ್ಟ ಕಾರಣಕ್ಕೆ ಅನುಮತಿ ಪತ್ರ ಕೋರಿ ಪ್ರತಿದಿನ ಜಿಲ್ಲಾಧಿಕಾರಿ ಕಚೇರಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸರ್ಕಾರದ ಆದೇಶ ಉಲ್ಲಂಘನೆ ಯಾಗುತ್ತಿದೆ.
ಆದ್ದರಿಂದ ಸಾರ್ವಜನಿಕರು ಉಡುಪಿ ಜಿಲ್ಲಾಧಿಕಾರಿ ಅನುಮತಿ ಪಡೆಯಲು ಎಪ್ರಿಲ್ 14ರವರೆಗೆ ಬರುವುದನ್ನು ನಿಷೇಧಿಸಲಾಗಿದೆ. ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆ ನೆಲೆಯಲ್ಲಿ ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ತೆರಳುವ ವೈದ್ಯಕೀಯ ಧೃಡಿಕರಣ ಪತ್ರದೊಂದಿಗೆ ಸಾರ್ವಜನಿಕರಿಗೆ ಅನುಮತಿ ಪಡೆಯಲು ಮಾತ್ರ ಅವಕಾಶ ನೀಡಲಾಗಿದ್ದು ಇದರ ಹೊರತು ಬೇರೆ ಯಾವುದೇ ಅನುಮತಿಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸದಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

About Post Author

error: