ಹೊನ್ನಾವರದ ಹಳದೀಪುರ ಮತ್ತು ಕರ್ಕಿ ವ್ಯಾಪ್ತಿಯಲ್ಲಿ ಕೊರೋನಾ ಮಹಾಮಾರಿಯ ವಿರುದ್ಧ ಜನತೆಯ ರಕ್ಷಣೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು,ಪಂಚಾಯತ್ ಸಿಬ್ಬಂದಿಗಳಾದ ೭0ಕ್ಕೂ ಹೆಚ್ಚಿನ ಜನರಿಗೆ ಕುಮುಟಾ ಹೊನ್ಬಾವರ ಕ್ಷೇತ್ರದ ಮಾಜಿ ಶಾಸಕಿಯಾದ ಶಾರದಾ ಮೋಹನ್ ಶೆಟ್ಟಿ ತಮ್ಮ ಮುಂದಾಳತ್ವದ ದಿ.ಮೋಹನ್ ಕೆ.ಶೆಟ್ಟಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು..ಈ ಸಂದರ್ಭದಲ್ಲಿ ಹಳದೀಪುರ ಪಂಚಾಯತ್ ಅಧ್ಯಕ್ಷರಾದ ಗುಣಮಾಲಾ ಜೈನ್ ಆರೋಗ್ಯಾಧಿಕಾರಿಗಳು,ಪಕ್ಷದ ಮುಖಂಡರಾದ ರವಿಕುಮಾರ್ ಎಂ.ಶೆಟ್ಟಿ, ವಿನಾಯಕ ಶೇಟ್, ದಾಮೋದರ್ ನಾಯ್ಕ, ರವಿ ಮೊಗೇರ, ಮಂಜುನಾಥ್ ಶಾನಭಾಗ, ಜನಾರ್ಧನ ನಾಯ್ಕ, ನಾಗವೇಣಿ ಗೌಡ,ಮಂಜುಳಾ ನಾಯ್ಕ, ಇಸ್ಮಾಯಿಲ್, ಮನೋಜ ನಾಯಕ, ಸಂಶೀರ್ ಸಾಬ್ ಮುಂತಾದವರು ಹಾಜರಿದ್ದರು..
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.