September 17, 2024

Bhavana Tv

Its Your Channel

ಲಾಕ್ ಡೌನ್ ಹಿನ್ನೆಲೆಯಲ್ಲಿ ಪಿಗ್ಮಿ ಸಂಗ್ರಹಕರ ಜೀವನ ಬೀದಿಗೆ: ದೇಶದಾಧ್ಯಂತ ಪಿಗ್ಮಿ ಸಂಗ್ರಾಹಕರಿoದ ಜನಪ್ರತಿನಿದಿಗಳಿಗೆ ಮನವಿ

ಭಟ್ಕಳ: ಕೊರೊನಾ ಮಹಾಮಾರಿಯಿಂದ ಇಡಿ ದೇಶವೆ ಲಾಕ್ ಡೌನ್ ಗೆ ಒಳಗಾಗಿದ್ದು ಪಿಗ್ಮಿ ಸಂಗ್ರಹಣೆಯಿoದ ಬರುವ ಪುಡಿಗಾಸಿನಿಂದ ಜಿವನ ನಡೆಸುತ್ತಿದ್ದ ಪಿಗ್ಮಿ ಸಂಗ್ರಹಕಾರರ ಜೀವನ ಯಾವುದೆ ಆದಾಯವಿಲ್ಲದೆ ಬೀದಿಗೆ ಬಂದಿದೆ ಈ ಬಗ್ಗೆ ತಮ್ಮ ಜಿವನ ನಿರ್ವಹಣೆಗೆ ಸಹಾಯ ಮಾಡುವಂತೆ ದೇಶದಾಧ್ಯಂತ ಪಿಗ್ಮಿ ಸಂಗ್ರಹಕಾರರು ಅಧಿಕಾರಿಗಳಲ್ಲಿ ಮತ್ತು ಜನಪ್ರತಿ ನಿದಿಗಳಲ್ಲಿ ತಮ್ಮ ಗೊಳನ್ನು ತೊಡಿಕೊಳ್ಳುತ್ತಿದ್ದಾರೆ.

ಇಡಿ ದೇಶವೆ ಕೊರೊನಾ ಸೊಂಕಿನಿAದ ಲಾಕ್ ಡೌನ್ ಆಗಿ ಆರ್ಥಿಕ ಅಧಃಪತನದತ್ತ ಸಾಗುತ್ತಿದ್ದೆ ಎಷ್ಟೊ ಅಮಾಯಕ ಬಡವರ ಜೀವನ ಈಗಾಗಲೆ ಬೀದಿಗೆ ಬಂದಿದೆ ಇದರಲ್ಲಿ ಬಡ ಪಿಗ್ಮಿ ಸಂಗ್ರಹಕಾರರು ಒಬ್ಬರಾಗಿದ್ದಾರೆ ಈ ಪಿಗ್ಮಿ ಸಂಗ್ರಹಕಾರರು ತಮ್ಮ ಜೀವನ ನಿರ್ವಹಣೆಗಾಗಿ ಪಿಗ್ಮಿ ಸಂಗ್ರಹಣೆಯನ್ನು ನಂಬಿ ಬದುಕುತ್ತಿದ್ದು ಮೊದಲೆ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಇವರಿಗೆ ಗಾಯದ ಮೇಲೆ ಉಪ್ಪು ಸವರಿದಂತೆ ಕೊರೊನಾ ವೈರಸ್ಸ ಹಿನ್ನೆಲೆಯಲ್ಲಿ ಯಾವುದೆ ಆದಾಯವು ಇಲ್ಲದೆ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.

ಭ್ಯಾಂಕಿನ ಸಿಬ್ಬಂದಿಗಳಿಗೆ ವೇತನಗಳು ಬರುತ್ತಿದೆ ಆದರೆ ವರ್ಷದ ೩೬೫ ದಿನಗಳು ಬ್ಯಾಂಕಿನ ಆದಾಯಕ್ಕಾಗಿ ದುಡಿಯುವ ಪಿಗ್ಮಿ ಸಂಗ್ರಹಕಾರರನ್ನು ಯಾರು ಕೇಳುವವರೆ ಇಲ್ಲವಾಗಿದ್ದಾರೆ ಮೊದಲೆ ಇವರರನ್ನು ಬ್ಯಾಂಕಿನ ಸಿಬ್ಬಂದಿ ಎಂದು ಪರಿಗಣಿಸಲಾಗುತ್ತಿಲ್ಲಾ ಈಗಾಗಲೆ ಇಂತಹ ಪಿಗ್ಮಿ ಸಂಗ್ರಹಕಾರರಿಗೆ ಭ್ಯಾಂಕಿನ ಯಾವುದೆ ಸಹಾಯ ಧನ ಒದಗಿಸಲಾಗುವುದಿಲ್ಲಾ ಎಂಬ ಮಾತುಗಳು ಕೆಲವು ಬ್ಯಾಂಕ್ ಹಾಗು ಸಹಕಾರಿ ಸಂಘಗಳು ಹೇಳುತ್ತಿದ್ದು ಪಿಗ್ಮಿ ಸಂಗ್ರಹಕಾರರ ಜೀವನ ಸಂಪೂರ್ಣ ಅತಂತ್ರವಾಗಿದೆ

ಈ ಬಗ್ಗೆ ಭಟ್ಕಳ ತಾಲೂಕಿನ ಶಿರಾಲಿ ಮಾರುತಿ ಪತ್ತಿನ ಸಹಕಾರಿ ಸಂಘದ ಪಿಗ್ಮಿ ಸಂಗ್ರಹಕಾರರಾದ ಉಲ್ಲಾಸ್ ಶಾನಬಾಗ್ ಅವರು ಎಸ್ .ಟಿ ಸೊಮಶೇಕರ್ ಸಹಕಾರ ಸಚಿವರಿಗೆ ಹಾಗು ಶಿವರಾಮ್ ಹೆಬ್ಬಾರ್ ಕಾರ್ಮಿಕ ಸಚಿವರು ,ಜಿಲ್ಲಾ ಉಸ್ತುವಾರಿ ಸಚಿವರಿಗೆ ದಿನಗೂಲಿ ಅಥವಾ ಜೀವನಾಂಶವನ್ನು ಪಿಗ್ಮಿ ಸಂಗ್ರಹಕಾರರಿಗೆ ನೀಡ ಬೇಕು ಎಂದು ಮನವಿಯನ್ನು ಸಲ್ಲಿಸಿದ್ದಾರೆ.

ಇನ್ನಾದರು ಇದ್ದಕ್ಕೆ ಸಂಬAದಿಸಿದ ಇಲಾಖೆ ಜಿನಪ್ರತಿನಿದಿಗಳು ಗಮನಹರಿಸಿ ಪಿಗ್ಮಿ ಸಂಗ್ರಹಕಾರರಿಗೆ ಸೂಕ್ತ ನೇರವನ್ನು ಒದಗಿಸಿಯಾರೆ ಎಂದು ಕಾದು ನೊಡಬೇಕಾಗಿದೆ.

error: