ಭಟ್ಕಳ ; ಬೆಳಗಾವಿ ಜಿಲ್ಲೆಯ ಎಸ್‌ಪಿ ತಮ್ಮ ಪೊಲೀಸ್ ಇಲಾಖೆಯ ತಪ್ಪನ್ನು ಮರೆಮಾಚಿಸಲು, ಡಿಕ್ಟೆಟೆಡ್ ಸ್ಟೇಟ್ ಮೆಂಟ್ ಕೊಡುವುದರ ಮೂಲಕ ಯೋಧನನ್ನು ಅಮಾನವೀಯವಾಗಿ ನಡೆಸಿಕೊಂಡ ರೀತಿಯನ್ನು ಸಮರ್ಥಿಸಿಕೊಂಡು ತಮ್ಮ ಇಲಾಖೆ ಹಾಗೂ ಸಿಬ್ಬಂದಿಯನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೊಸ್ಕರ ಸೈನಿಕನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ವಿವಿಧ ಕೇಸ್ ಗಳನ್ನು ಹಾಕುವುದರ ಮೂಲಕ ತಮ್ಮ ಪವರ್ ಬಳಸಿ ಸೈನಿಕನನ್ನು ತೇಜೋವಧೆ ಮಾಡುತ್ತಿರುವುದು ಎಲ್ಲರಿಗೂ ಅರ್ಥವಾಗುತ್ತದೆ. ನಾವೆಲ್ಲ ಗೊತ್ತಾಗದ ಮುರ್ಖರಲ್ಲ. ಬೆಳಗಾವಿ ಪೊಲೀಸರ ದೌರ್ಜನ್ಯ ಕ್ಕೆ ಅವಮಾನಕ್ಕೆ ಒಳಗಾದ ಸೈನಿಕ ಮತ್ತು ಆತನ ಪರಿವಾರ ಮಾತ್ರ ನಿಜವಾಗಲೂ ಅಸಹಾಯಕತೆಯಿಂದ ಒದ್ದಾಡುತ್ತಿರುವುದನ್ನು ಗಮನಿಸಿದರೆ ನಮ್ಮ ರಾಜ್ಯದಲ್ಲಿ ಪೊಲೀಸರು ಮಾತ್ರ ಎನೂ ಬೇಕಾದರೂ ಮಾಡಿಯೂ ತಮಗೆ ಬೇಕಾದ ಕಥೆಯನ್ನು ಸೃಷ್ಟಿಸಿ ಹಿರಿಯ ಅಧಿಕಾರಿಗಳ ಸಹಾಯದಿಂದ ಪಾರಾಗಬಹುದು ಎನ್ನುವುದನ್ನು ತೋರಿಸುತ್ತದೆ.
ಇಷ್ಟೆಲ್ಲಾ ಆದಾಗ್ಯೂ, ಇದರ ತನಿಖೆ ಪೊಲೀಸ್ ಇಲಾಖೆ ಮಾಡಿದರೆ, ತನಿಖೆ ಯಾರ ಪರವಾಗಿ ನಡೆಯಬಹುದು ಹಾಗೂ ನಮ್ಮ ಸೈನಿಕನಿಗೆ ನ್ಯಾಯ ಸಿಗಬಹುದೇ?
ಇದರ ತನಿಖೆ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕಾಗಿರುವುದು ಅನಿವಾರ್ಯ ಹಾಗೂ ನಮ್ಮ ಬೇಡಿಕೆಯು ಸಹ ಅದೆ ಆಗಿದೆ ಎಂದು ಭಟ್ಕಳ ಮಾಜಿ ಸೈನಿಕ ಸಂಘದ ಕಾರ್ಯದರ್ಶಿ ಶ್ರೀಕಾಂತ ತಿಳಿಸಿದ್ದಾರೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.