April 15, 2024

Bhavana Tv

Its Your Channel

ಸಿಆರ್ ಪಿಎಫ್ ಯೋಧನ ಮೇಲಿನ ಹಲ್ಲೆ ಪ್ರಕರಣ: ಸದಲಗಾ ಪಿಎಸ್ಐ ಸಸ್ಪೆಂಡ್

ಬೆಳಗಾವಿ – ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಿಆರ್ ಪಿಎಫ್ ಯೋಧನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಠಾಣೆಯ ಪಿಎಸ್ಐ ಅನೀಲ ಕಂಬಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ ಮಾಸ್ಕ್ ಧರಿಸಿರಲಿಲ್ಲ ಎನ್ನುವ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಮಾರಾಮಾರಿ ಹಂತಕ್ಕೆ ಹೋಗಿತ್ತು. ನಂತರ ಯೋಧನನ್ನು ಅಮಾನವೀಯವಾಗಿ ಠಾಣೆಗೆ ಕರೆದೊಯ್ದು ಹಿಂಸಿಸಲಾಗಿದೆ ಎಂದು ಆರೋಪಿಸಲಾಗಿತ್ತು.

ಯೋಧನಿಗೆ ಕೊಳ ತೊಡಿಸಿ ಕೂಡ್ರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯೋಧನ ಮೈಮೇಲೆ ಬಾಸುಂಡೆ ಏಳುವಂತೆ ಹೊಡೆದಿರುವ ಫೋಟೋಗಳು ಕೂಡ ವೈರಲ್ ಆಗಿವೆ.

ಈ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದಲ್ಲದೆ ಪ್ರಕರಣದ ತನಿಖೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಆದೇಶಿಸಿದ್ದರು. ಬೆಳಗಾವಿ ಐಜಿಯಿಂದ ತನಿಖೆಗೆ ಆದೇಶಿಸಲಾಗಿದೆ.

ತನಿಖೆ ಮುಂದುವರಿದಿದ್ದು, ಪಿಎಸ್ಐ ಅನಿಲ ಕಂಬಾರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ಪೊಲೀಸ್ ಮತ್ತು ಸಿಆರ್ ಪಿಎಫ್ ಯೋಧ ಇಬ್ಬರ ನಡುವೆ ನಡೆದ ಪ್ರಕರಣ ಕುರಿತು ಎರಡೂ ಇಲಾಖೆಗಳು ತಮ್ಮನ್ನು ಸಮರ್ಥಿಸಿಕೊಳ್ಳುತ್ತಿವೆ. ತನಿಖೆಯ ನಂತರ ನಿಜಾಂಶ ಹೊರಬರಬೇಕಿದೆ.

source : ಪ್ರಗತಿವಾಹಿನಿ ಸುದ್ದಿ,

error: