December 4, 2024

Bhavana Tv

Its Your Channel

ಮರ್ಕಝಿ ಜಮಾತುಲ್ ಮುಸ್ಲಿಮೀನ್ ಇದರ ಪ್ರಧಾನ ಕಾಜಿ ಮೌಲನ ಮೋಹಮ್ಮದ್ ಇಕ್ಬಾಲ್ ಮುಲ್ಲಾ ಅವರ ಮೇಲೆ ದಾಳಿ ಯತ್ನ

ಈ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ನೂರಾರು ಮಂದಿ ಪೊಲೀಸ್ ಸ್ಟೇಷನ್ ಮುಂದೆ ಜಮಾಯಿಸಿದ್ದರು. ಮಹಮ್ಮದ್ ಇಕ್ಬಾಲ್ ಮುಲ್ಲಾರ ಮೇಲೆ ನಡೆದಂತಹ ಹಲ್ಲೆ ಪ್ರಯತ್ನದ ಪ್ರಕರಣವು ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದ್ದು ಪೊಲೀಸರು ಕೂಡಲೇ ಘಟನೆಯ ತನಿಖೆ ಸಂಬAಧಪಟ್ಟAತೆ ತನಿಖೆ ನಡೆಸಿ ಆರೋಪಿಯನ್ನು ಕೂಡಲೇ ಬಂಧಿಸಬೇಕೆAದು ಆಗ್ರಹಿಸಿದ್ದಾರೆ.
ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಬಂದ ಪ್ರಭಾರಿ ಡಿವೈಎಸ್ಪಿ ಅರವಿಂದ ಕಲ್ಗುಜ್ಜಿ ಹಾಗೂ ಅವರ ತಂಡದ ಪೊಲೀಸರು ಮನೆ ಮಂದಿಯಿAದ ಘಟನೆಯ ಸಂಬAದ ಮಾಹಿತಿ ಕಲೆ ಹಾಕಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಇದೇ ಮೌಲಾನ ಅವರನ್ನು ಶಿರೂರು ಬಳಿ ಇವರ ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಇವರನ್ನು ನಿಂದಿಸಿದ್ದು ಘಟನೆ ಮತ್ತು ಇಂದು ನಡೆದ ಘಟನೆಗೆ ಏನಾದರೂ ಸಂಬAಧವಿದೆಯೇ ಎನ್ನುವ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಪೊಲೀಸರು ಈ ಕುರಿತಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ. ಹೆಚ್ಚಿನ ವಿಷಯ ಪೊಲೀಸರ ತನಿಖೆಯಿಂದ ತಿಳಿದುಬರಬೇಕಾಗಿದೆ.

error: