December 22, 2024

Bhavana Tv

Its Your Channel

ಸಾರಿಗೆ ಸಿಬ್ಬಂದಿಗೆ ಹೂಮಳೆಗೈದ ಜಿಲ್ಲಾಧಿಕಾರಿ

ಕಾರವಾರ: ಕೊರೊನಾ ಸೋಂಕಿನ ಆತಂಕದ ನಡುವೆಯೂ ವಲಸೆ ಕಾರ್ಮಿಕರನ್ನು ತವರು ಜಿಲ್ಲೆಗಳಿಗೆ ತಲುಪಿಸಿದ ಕಾರವಾರ ಹಾಗೂ ಅಂಕೋಲ ಭಾಗದ ಕೆಎಸ್​​ಆರ್​​​ಟಿಸಿ ಸಿಬ್ಬಂದಿಗೆ ಹೂಮಳೆಗೈಯುವ ಮೂಲಕ ಜಿಲ್ಲಾಧಿಕಾರಿ ಡಾ.ಕೆ.ಹರೀಶ್​​​ ಕುಮಾರ್ ಅಭಿನಂದಿಸಿದರು.
ಲಾಕ್​​​ಡೌನ್​​​ನಿಂದಾಗಿ 40 ದಿನಗಳಿಗೂ ಹೆಚ್ಚು ಕಾಲ ಜಿಲ್ಲೆಯಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ತಲುಪಿಸಿದ್ದರು. ಅಲ್ಲದೆ, ರೆಡ್​​​ ಝೋನ್ ಪ್ರದೇಶಗಳಿಗೂ ತೆರಳಿ ಕಾರ್ಮಿಕರನ್ನು ಮನೆ ಸೇರುವಂತೆ ಮಾಡಿದ್ದರು. ಈ ಕಾರಣದಿಂದ ಕಾರವಾರದಲ್ಲಿ ಇಂದು 15 ಸಿಬ್ಬಂದಿಗೆ ಪುಷ್ಪವೃಷ್ಠಿಗೈಯ್ಯುವ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು.

error: