ಹೊನ್ನಾವರ: ವಾಟರ್ ಸಪ್ಲೆಯರ್ ಕಾರ್ಯ ನಿರ್ವಹಿಸಲು ತೆರಳುತ್ತಿರುವಾಗ ಮೂವರು ಯುವಕರು ಸೇರಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಘಟನೆ ತಾಲೂಕಿನ ಶಿರೂರಿನ ಹೈಂಗೇರಿಯಲ್ಲಿ ಸಂಭವಿಸಿದೆ.
ಶಿರೂರಿನ ವಾಟರ್ ಸಪ್ಲಾಯರ್ ಮಂಜುನಾಥ ಮಹಾದೇವ ನಾಯ್ಕ (೪೦) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಇವರು ಶಿರೂರು ಕಣಿವೆ ಸಮೀಪದ ಹೈಂಗೇರಿಯಲ್ಲಿ ಪಂಚಾಯತ ಮಟ್ಟದ ವಾಟರ್ ಸಪ್ಲೆಯರ್ ಮಾಡುತ್ತಿರುವಾಗ, ಈ ವೇಳೆ ಹೊದ್ಕೆ ಗ್ರಾಮದ ಸಚಿನ್ ಮಧುಕರ ನಾಯ್ಕ, ಗಣೇಶ ಶ್ರೀಧರ ನಾಯ್ಕ ಹಾಗೂ ಸುನೀಲ್ ಸೀತಾರಾಮ ನಾಯ್ಕ ಎಂಬ ಮೂವರು ಆರೋಪಿತರೆಲ್ಲರೂ ಸೇರಿ ಏಕಾಏಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಮುಖದ ಮೇಲೆ ಬಲವಾಗಿ ಹೊಡೆದಿದ್ದಾರೆ. ಇದಲ್ಲದೆ ಆರೋಪಿ ಸಚಿನ್ ನಾಯ್ಕ ಎಂಬಾತ ತನ್ನ ಕೈಯಲ್ಲಿದ್ದ ಕಟ್ಟಿಗೆಯ ದೊಣ್ಣೆಯಿಂದ ತಲೆಯ ಮೇಲೆ ಹೊಡೆದು ಗಾಯಗೊಳಿಸಿದ್ದಾನೆ. ಈ ವೇಳೆ ಮಂಜುನಾಥ ಅವರಿಗೆ ಹೊಡೆಯುತ್ತಿರುವುದನ್ನು ನೋಡಿ ಬಿಡಿಸಲು ಬಂದ ಗಣೇಶ ಗೌಡ ಈತನಿಗೂ ಮೂವರು ಆರೋಪಿತರು ಅವಾಚ್ಯ ಶಬ್ಧಗಳಿಂದ ನಿಂದಿಸಿ ತಲೆಗೆ ಮತ್ತು ಕೈಗಳಿಗೆ ಗುದ್ದಿ ಹಲ್ಲೆ ನಡೆಸಿದ್ದಾರೆ. ನಂತರ ಹಲ್ಲೆಗೊಳಗಾದ ಮಂಜುನಾಥ ನಾಯ್ಕ ಹಾಗೂ ಗಣೇಶ ಗೌಡ ಇಬ್ಬರಿಗೂ ನಿಮ್ಮನ್ನು ಇನ್ನೊಮ್ಮೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿ ಅಲ್ಲಿಂದ ಹೊರಟು ಹೋಗಿದ್ದಾರೆ ಎನ್ನಲಾಗಿದೆ. ಈ ಕುರಿತು ಮಂಜುನಾಥ ಮಹಾದೇವ ನಾಯ್ಕ ಅವರು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆಕಾರ್ಯ ಕೈಗೊಂಡಿದ್ದಾರೆ.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.