December 4, 2024

Bhavana Tv

Its Your Channel

ಭಟ್ಕಳದಲ್ಲಿ ಮತ್ತೆ ೧೨ ಜನರಿಗೆ ಕೊರೊನಾ ಸೋಂಕು ದೃಢ ೯ ಮಹಿಳೆಯರು, ಓರ್ವ ಬಾಲಕಿಗೆ ತಗುಲಿದ ಸೋಂಕು

ಮಂಗಳೂರು ಫಸ್ರ‍್ಟ ನ್ಯೂರೋ ಆಸ್ಪತ್ರೆ ತಂದ ದೌರ್ಭಾಗ್ಯ

ಭಟ್ಕಳ: ಭಟ್ಕಳದಲ್ಲಿ ಶುಕ್ರವಾರ ಮತ್ತೆ ೧೨ ಕೊರೊನಾ ಸೋಂಕು ಪ್ರಕರಣ ದಾಖಲಾಗುವುದರೊಂದಿಗೆ ಭಟ್ಕಳ ತಲ್ಲಣಗೊಂಡಿದೆ.
ಕೊರೊನಾ ಸೋಂಕಿತ ಯುವತಿ ಪಿ ೬೫೯ ಕುಟುಂಬದ ಸದಸ್ಯರು ಹಾಗೂ ಆಕೆಯ ಇಬ್ಬರು ಸ್ನೇಹಿತೆಯರು ಸೋಂಕಿಗೆ ತುತ್ತಾಗಿದ್ದಾರೆ. ಇವರುಗಳಲ್ಲಿ ಸೋಂಕಿತೆಯ ಅಜ್ಜ ಹಾಗೂ ಭಾವ ಸೇರಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದೆ. ಕಳೆದ ಏ.೨೦ರಂದು ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸೀಲ್ ಡೌನ್ ಗೊಂಡ ಮಂಗಳೂರು ಫಸ್ರ‍್ಟ ನ್ಯೂರೋ ಆಸ್ಪತ್ರೆಗೆ ಸೋಂಕಿತ ಯುವತಿಯ ಭಾವ, ಅಕ್ಕ ಹಾಗೂ ಬಾಲಕ ಭೇಟಿ ನೀಡಿದ್ದು, ಭಟ್ಕಳದ ಯುವತಿ ಮನೆಯಲ್ಲಿಯೇ ಇದ್ದರೂ ಮಂಗಳೂರಿಗೆ ತೆರಳಿದ್ದ ಕುಟುಂಬದ ಸದಸ್ಯರ ಕಾರಣದಿಂದ ಸೋಂಕಿತರ ಪಟ್ಟಿಯನ್ನು ಸೇರಿದ್ದಳು. ಆಗಲೇ ಮಂಗಳೂರಿಗೆ ಹೋಗಿ ಬಂದವರು ಹಾಗೂ ಉಳಿದ ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ಇರುವುದು ಬಹುತೇಕ ಖಚಿತವಾಗಿತ್ತಾದರೂ, ಪರೀಕ್ಷಾ ವರದಿಗಾಗಿ ಕಾಯಲಾಗಿತ್ತು. ಇದೀಗ ನಿರೀಕ್ಷೆಯಂತೆಯೇ ಆಕೆಯ ಕುಟುಂಬದ ಸದಸ್ಯರು ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ.
ಮೊನ್ನೆ ಕರೊನಾ ಪತ್ತೆಯಾಗಿದ್ದ ಯುವತಿಯ ಕುಟುಂಬದ ಹಾಗೂ ಅಕ್ಕಪಕ್ಕದ ಮನೆಯ ಆರು ಮಂದಿ, ಪಕ್ಕದ ಬೀದಿಯ ಓರ್ವ, ಹೆದ್ದಾರಿ ಬಳಿಯಲ್ಲಿ ಮನೆ ಹೊಂದಿರುವ ಓರ್ವನಿಗೆ ಹಾಗೂ ಇನ್ನೊಂದು ಬೀದಿಯ ೪ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ೫ ತಿಂಗಳ ಹೆಣ್ಣುಮಗು, ೩ ವರ್ಷದ ಬಾಲಕ, ೮೩ ಹಾಗೂ ೬೦ ವರ್ಷದ ವೃದ್ಧ, ೭೫ ವರ್ಷದ ವೃದ್ಧೆ, ೩೯ ವರ್ಷದ ಮಹಿಳೆ, ೩೩ ಹಾಗೂ ೩೦ ವರ್ಷದ ಪುರುಷ, ೨೫, ೨೨, ೧೧ ಹಾಗೂ ೧೨ ವರ್ಷದ ಯುವತಿಯರಲ್ಲಿ ಸೋಂಕು ದೃಢಪಟ್ಟಿದೆ. ಭಟ್ಕಳದ ಈ ಸೋಂಕಿತ ಯುವತಿಯ ಅಕ್ಕ, ಬಾವ ತಮ್ಮ ಮಗುವಿಗೆ ಅನಾರೋಗ್ಯದ ಕಾರಣ ಪಾಸ್ ಪಡೆದು ಮಂಗಳೂರಿಗೆ ಏ.೧೯ಕ್ಕೆ ತೆರಳಿದ್ದರು. ಪರಿಚಯಸ್ಥರೊಬ್ಬರ ಮನೆಯಲ್ಲಿ ಉಳಿದು, ಏ.೨೦ರಂದು ಮಗುವಿಗೆ ಚಿಕಿತ್ಸೆ ಕೊಡಿಸಿ ಭಟ್ಕಳಕ್ಕೆ ವಾಪಸ್ಸಾಗಿದ್ದರು. ಹೀಗಾಗಿ ಇವರ ಸಂಪರ್ಕದಲ್ಲಿದ್ದ ಯುವತಿಗೆ ಸೋಂಕು ಹರಡಿದೆ..

ಇಫ್ತಾರ್ ಕೂಟದಲ್ಲಿ ಸ್ನೇಹಿತೆಯರು ಭಾಗಿ:
ಪ್ರಸಕ್ತವಾಗಿ ಇಲ್ಲಿನ ಮುಸ್ಲೀಮ್ ಧರ್ಮೀಯರು ರಮಜಾನ್ ಮಾಸಾಚರಣೆಯಲ್ಲಿ ತೊಡಗಿಕೊಂಡಿರುವುದರಿoದ ಕೊರೊನಾ ಸೊಂಕಿತ ಯುವತಿಯ ಮನೆಯಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಭಾಗಿಯಾಗಿರುವುದು ಆಕೆಯ ಇಬ್ಬರು ಸ್ನೇಹಿತರಿಗೆ ಮುಳುವಾಗಿದೆ. ಆ ಇಬ್ಬರು ಯುವತಿಯರು ಕೊರೊನಾ ಸೋಂಕಿತ ಅಕ್ಕಪಕ್ಕದ ಮನೆಯವರು ಎಂದು ತಿಳಿದು ಬಂದಿದೆ. ಆರೋಗ್ಯಾಧಿಕಾರಿಗಳು ಆ ಕೂಟದಲ್ಲಿ ಭಾಗಿಯಾದ ಉಳಿದವರ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

error: