ಭಟ್ಕಳ: ಪಟ್ಟಣದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಈಗಾಗಲೇ ಕಂಟೋನ್ಮೆಂಟ್ ಝೋನ್ ಹಾಗೂ ಬಫರ್ ಝೋನ್ ವ್ಯಾಪ್ತಿಯನ್ನು ಗುರುತಿಸಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶ ಹೊರಡಿಸಿದ್ದಾರೆ.
ಪಟ್ಟಣದ ಪೂರ್ವ ಭಾಗದಲ್ಲಿ ರೈಲ್ವೆ ನಿಲ್ದಾಣ ರಸ್ತೆ, ಬೆಳಲಖಂಡದವರೆಗೆ, ಪಶ್ಚಿಮದಲ್ಲಿ ತಲಗೇರಿ ರಸ್ತೆ, ಉತ್ತರದಲ್ಲಿ ವೆಂಕಟಾಪುರ ನದಿ ಹಾಗೂ ದಕ್ಷಿಣದಲ್ಲಿ ಮುಂಡಳ್ಳಿ ಗ್ರಾಮದ ಗಡಿಯವರೆಗೆ ಸಂಪೂರ್ಣ ಕಂಟೈನ್ಮೆಂಟ್ ಝೋನ್ ಎಂದು ಗುರುತಿಸಲಾಗಿದೆ. ಈ ವ್ಯಾಪ್ತಿಯಲ್ಲಿ 10,806 ಮನೆಗಳಿದ್ದು, 2,057 ಅಂಗಡಿಗಳು ಹಾಗೂ 65 ಕಚೇರಿಗಳಿವೆ. 51 ಸಾವಿರ ಜನಸಂಖ್ಯೆ ಇದೆ.
ಕಂಟೈನ್ಮೆಂಟ್ ಝೋನ್‍ನಿಂದ 5 ಕಿ.ಮೀ. ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಗುರುತಿಸಲಾಗಿದ್ದು, ಪೂರ್ವ ಭಾಗದಲ್ಲಿ ಕೋಣಾರ ಗ್ರಾಮ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಉತ್ತರದಲ್ಲಿ ಶಿರಾಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ದಕ್ಷಿಣದಲ್ಲಿ ಹಡೀನ್‍ನ ಬೆಳಕೆ ಗ್ರಾಮ ಪಂಚಾಯತಿ ಕಚೇರಿಯವರೆಗೆ ಒಳಪಡಲಿದೆ.
ಪ್ರಮುಖವಾಗಿ ಈ ಗ್ರಾಮದವರು ಎಚ್ಚರದಿಂದಿರಿ
ಕೋಕ್ತಿ, ಮದೀನಾ ಕಾಲನಿ, ಗುಡ್ ಲಕ್ ರೋಡ್, ನವಾಯತ್ ಕಾಲನಿಯವರು ಹೆಚ್ಚಿನ ಜಾಗೃತೆ ವಹಿಸಬೇಕಿದೆ.
ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಗ್ರಾಮಗಳು, ತಲಗೋಡ, ಕರಿಕಲ್, ಹನುಮಾನನಗರ, ಮಾವಿನಕುರ್ವಾ, ಬೆಳ್ನಿ, ಚೌಥನಿ, ಮುಂಡಳ್ಳಿ, ಪುರವರ್ಗ, ಹಡೀನ್, ಬೆಳಕೆ, ಯಲ್ವಡಿಕವೂರ, ಹೇರೂರ್, ಹಡೀಲ್, ಕೋಣಾರ, ಕೋಟಖಂಡ, ತಲಾನ್, ಮುಟ್ಟಳ್ಳಿ, ಮೂಡಭಟ್ಕಳ, ಬೇಹಳ್ಳಿ, ಬೆಳಲ್ಕಂಡ, ಕಿತ್ರೆ, ಶಿರಾಲಿ ವ್ಯಾಪ್ತಿಯಲ್ಲಿ ಜನರು ಎಚ್ಚರಿಕೆ ವಹಿಸಬೇಕಿದೆ. ಯಾರೂ ಮನೆಯಿಂದ ಹೊರ ಬರದಂತೆ ಜಾಗೃತೆ ವಹಿಸಬೇಕಿದೆ
More Stories
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.
ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಭಟ್ಕಳವತಿಯಿಂದ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಮೆರವಣಿಗೆ ಮೂಲಕ ಬಂದು ಸಹಾಯಕ ಆಯುಕ್ತರಿಗೆ ಮನವಿ.
ತುಳುನಾಡಿನ ಕಾರಣೀಕ ಮೆರೆದ ಕಲ್ಜಿಗ ಸಿನೇಮಾ, ಕಾಂತಾರದ ಬೆನ್ನಿಗೇ ಮತ್ತೊಂದು ಕಲಾತ್ಮಕ ಚಿತ್ರ ಕೊಟ್ಟ ಕರಾವಳಿ