March 22, 2023

Bhavana Tv

Its Your Channel

ಭಟ್ಕಳದಲ್ಲಿ ಕರೋನಾ ಸೊಂಕು ದೃಡವಾದ ಹಿನ್ನಲೆಯಲ್ಲಿ ಭಟ್ಕಳ ಪಟ್ಟಣ ಸೀಲಡೌನ್ ಮಾಡುವಂತೆ ಶಾಸಕ ದಿನಕರ ಶೆಟ್ಟಿ ಮನವಿ

ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ಸ್ವಲ್ಪ ದಿನಗಳ ಕಾಲ ಕರೋನಾ ಪ್ರಕರಣ ನಿಟ್ಟುಸಿರು ಬಿಟ್ಟಿದ್ದು ಇದೀಗ ಮೇ ೬ರ ನಂತರ ಯುವತಿಗೆ ಸೊಂಕು ದೃಡಪಟ್ಟಿತ್ತು. ಇಂದು ೧೨ ಹೊಸ ಸೊಂಕಿತ ಪ್ರಕರಣ ದೃಡವಾದ ಹಿನ್ನಲೆಯಲ್ಲಿ ಭಟ್ಕಳ ಜೊತೆ ಹೊನ್ನಾವರ ಸೇರಿದಂತೆ ವಿವಿಧ ತಾಲೂಕಿಗೆ ಆತಂಕ ಎದುರಾಗಿದೆ. ಈ ಆತಂಕವನ್ನು ದೂರ ಮಾಡಲು ಸಂಪೂರ್ಣ ಭಟ್ಕಳ ಸೀಲ್ ಡೌನ್ ಮಾಡುವ ಜೊತೆ ಜಿಲ್ಲಾ ಗಡಿಯನ್ನು ಬಂದ್ ಮಾಡಿ ಅಗತ್ಯವಸ್ತುಗಳು, ಪಾಸ್ ಇರುವ ವಾಹನಗಳು, ತುರ್ತು ಚಿಕಿತ್ಸೆ ವಾಹನಗಳಿಗೆ ಮಾತ್ರ ಪ್ರವೇಶ ನೀಡಲು ಆದೇಶ ಮಾಡಬೇಕು. ಉಳಿದಂತೆ ಭಟ್ಕಳ ಪಟ್ಟಣದಲ್ಲಿ ಸಂಪೂರ್ಣ ಸಾರ್ವಜನಿಕರ ಸಂಚಾರ ನಿರ್ಬಂದನೆ ಮಾಡಿ ಆದೇಶಿಸುವಂತೆ ಜಿಲ್ಲಾ ಉಸ್ತುವಾರಿ ಸಚೀವರಾದ ಶಿವರಾಮ ಹೆಬ್ಬಾರ ಮತ್ತು ಜಿಲ್ಲಾಧಿಕಾರಿಗಳಿಗೆ ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಮನವಿ ಮಾಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಮತ್ತೆ ಆತಂಕದ ಛಾಯೆಯನ್ನು ದೂರ ಮಾಡಲು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದಾರೆ.

About Post Author

error: