December 22, 2024

Bhavana Tv

Its Your Channel

ಭಟ್ಕಳ ಪುರಸಭೆ ಸಂಪೂರ್ಣ ಮತ್ತು ಪಟ್ಟಣ ಪಂಚಾಯಿತ್ ಹೆಬಳೆ ಸಂಪೂರ್ಣ ಸೀಲ್ ಡೌನ್ ?

ಭಟ್ಕಳ: ಭಟ್ಕಳದಲ್ಲಿ ಶುಕ್ರವಾರ ಬೆಳಕಿಗೆ ಬಂದಿರುವ ನೂತನ ೧೨ ಪ್ರಕರಣಗಳಿಂದಾಗಿ ಜಿಲ್ಲಾಡಳಿತವಷ್ಟೆ ಅಲ್ಲದೆ ಸಾಮಾಜಿಕ ಸಂಘ ಸಂಸ್ಥೆಗಳು ಕೂಡ ದಿಗ್ಭ್ರಮೆಗೊಳಗಾಗಿವೆ. ಇದರಿಂದ ಭಟ್ಕಳ ಪುರಸಭೆ ಸಂಪೂರ್ಣ ಮತ್ತು ಪಟ್ಟಣ ಪಂಚಾಯಿತ್ ಹೆಬಳೆ ಸಂಪೂರ್ಣ ಸೀಲ್ ಡೌನ್ ಮಾಡುವ ನಿರ್ಧಾರ ಆಡಳಿತ ಕೈಗೊಂಡಿದೆ. ಶಾಸಕ ಸುನೀಲ್ ನಾಯ್ಕ ಖುದ್ದು ಸೀಲ್ ಡೌನ್ ಆಗುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಯಾವುದೇ ಒತ್ತಡಕ್ಕೆ ಮಣಿಯದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹಾಗೂ ಪೋಲಿಸ್ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ, ಈವರೆಗೆ ನೀಡಿರುವ ಎಲ್ಲಾ ಪಾಸ್ ಗಳನ್ನು ಹಿಂಪಡಿದು ಸ್ಥಳೀಯ ಆಡಳಿತದಿಂದಲೇ ಅಗತ್ಯ ವಸ್ತುಗಳನ್ನು ಪೂರೈಸುವ ಕುರಿತು ಜಿಲ್ಲಾಡಳಿತ ಇಂದು ಚರ್ಚಿಸಿ ತೀರ್ಮಾನಕ್ಕೆ ಬರಲಾಗಿದೆ ಎಂದು ಶಾಸಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.

error: