November 14, 2024

Bhavana Tv

Its Your Channel

ಲಾಕ್ ಡೌನ್‌ನಿಂದ ತೊಂದರೆ ಅನುಭವಿಸುತ್ತಿರುವ ಶಿಲ್ಷಕಲಾ ಕಾರ್ಮಿಕರ ಪರವಾಗಿ ಸರಕಾರಕ್ಕೆ ಮನವಿ

ಭಟ್ಕಳ ತಾಲೂಕಿನಲ್ಲಿ ಮುಜರಾಯಿ ಮತ್ತು ಹಿಂದೂ ದೇವಾಲಯದ ಸರಿಸುಮಾರು ೨೦೦೦ ಸಾವಿರ ಶಿಲ್ಪಕಲಾ ಕೆಲಸ ಮಾಡುವ ಅಸಂಘಟಿತ ವಲಯದ ಕಾರ್ಮಿಕರಿದ್ದು ಈ ಕೋವಿಡ್-೧೯ ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಪರಿತಪಿಸುವಂತಾಗಿದ್ದು ಇದರಿಂದ ಶಿಲ್ಪಕಲಾ ಕಾರ್ಮಿಕರಿಗೆ ತುಂಬಾ ತೊಂದರೆ ಆಗುವುದನ್ನು ಇಲ್ಲಿಯವರೆಗೆ ಯಾರು ಸಹ ಸರ್ಕಾರದ ಗಮನ ಸೆಳೆಯಲು ಪ್ರಯತ್ನ ಪಡೆಯದೆ ಇದ್ದದ್ದು ಮನಗಂಡ ಮುರ್ಡೇಶ್ವರದ ಶ್ರೀ ಸಂದೀಪ್ ನಾಯ್ಕ್ ಚಂದ್ರಹಿತ್ಲ ಇವರು ಬಿಜೆಪಿ ಮುಖಂಡರಾದ ದತ್ತಾತ್ರೇಯ ಜೆ ನಾಯ್ಕ್ ಅವರ ಮುಖಾಂತರ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಾನ್ಯ ಶ್ರೀ ಶಿವರಾಮ ಹೆಬ್ಬಾರ.ಹಾಗೂ ಮುಜರಾಯಿ ಮತ್ತು ಮೀನುಗಾರಿಕೆ ಸಚಿವ, ಕೋಟಾ ಶ್ರೀನಿವಾಸ ಪೂಜಾರಿ ಕರ್ನಾಟಕ ಸರ್ಕಾರ ಇವರಿಗೆ,ಶಿಲ್ಪಕಲಾ ಕಾರ್ಮಿಕರು ಅಸಂಘಟಿತರೆAದು ಪರಿಗಣಿಸಿ ಪರಿಹಾರ ನೀಡಬೇಕೆಂದು ಈ ಮೇಲ್ ಮೂಲಕ ಸರ್ಕಾರಕ್ಕೆ ಶಿಲ್ಪಕಲಾ ಕಾರ್ಮಿಕರ ಪರವಾಗಿ ಮನವಿ ಸಲ್ಲಿಸಿರುತ್ತಾರೆ.

error: