April 25, 2024

Bhavana Tv

Its Your Channel

ರಸ್ತೆ ತಕ್ಷಣ ಪ್ರಾರಂಭಿಸಿ ಹಳ್ಳಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ನಾಗರಾಜ ನಾಯ್ಕ ಆಗ್ರಹ

ಸಿದ್ದಾಪುರ ; ಸಿದ್ದಾಪುರದಿಂದ ಹೊನ್ನಾವರ ರಸ್ತೆ ಮಧ್ಯದಲ್ಲಿ ಸಿಗುವ ವಾಟೆಹಳ್ಳ ಬಸ್ ನಿಲ್ದಾಣ(ತವಥ) ದಿಂದ ಸಂತೆಗದ್ದೆ ವರೆಗೆ ೬ ಕಿಲೊ ಮೀಟರ್ ಕಾಂಕ್ರೇಟ್ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ೦೪/೦೩/೨೦೧೪ ರಂದು ಪ್ರಾರಂಭಿಸಿದ್ದರು. ಕಾಂಕ್ರೀಟ್ ರಸ್ತೆಯನ್ನು ೦೩/೧೨/೨೦೧೪ರಂದು ಪೂರ್ಣಗೊಳಿಸಬೇಕಿತ್ತು. ಆದರೆ ಈ ರಸ್ತೆಯು ಪೂರ್ಣಗೊಳ್ಳದೆ ನಿಂತುಹೋಗಿ ಸಾರ್ವಜನಿಕರು ತೊಂದರೆ ಪಡುವಂತಾಗಿದೆ.
ಮಟ್ಟಿನ ಗದ್ದೆ, ದುಂಡಮಾವು, ಹುಳಿಗೆಬಿಳು ಶಾಲೆ, ಶಸಿಗುಳಿ, ಮಾಳಗಲ್, ಕೆಂದಿಗೆ ಕುಳಿ, ಶಾಲೆಗದ್ದೆ, ಜಲಗುಳಿ, ಹಾಲಸಳ್ಳಿ ಹೀಗೆ ಹಲವು ಹಳ್ಳಿಗಳ ಜನರು ಈ ರಸ್ತೆಯನ್ನೆ ಅವಲಂಬಿಸಿದ್ದಾರೆ. ಈ ರಸ್ತೆಯು ಸುಮಾರು ೮೦ ಮನೆಗಳ ಅಂದಾಜು ನಾಲ್ಕು ನೂರಕ್ಕೂ ಅಧಿಕ ಜನರಿಗೆ ನಿತ್ಯ ಓಡಾಟದ ಮಾರ್ಗವಾಗಿದೆ. ಇದನ್ನು ಮನಗೊಂಡು ೨೦೧೪ರಲ್ಲಿ ೪. ೭೭ ಕೋಟಿಯ ಕಾಂಕ್ರಿಟ್ ರಸ್ತೆ ಮಂಜೂರಿ ಮಾಡಲಾಗಿತ್ತು. ಆದರೆ ಗುತ್ತಿಗೆದಾರರು ಆ ರಸ್ತೆಯನ್ನು ಅಗಿದು ಹೋಳೆಯ ಜಲ್ಲಿ ಗೊಜ್ಜನ್ನು ಹಾಕಿ ರೋಲರ್ ಹೊಡೆದು ಕೆಲಸವನ್ನು ನಿಲ್ಲಿಸಿದ್ದರು. ಸ್ಥಳಿಯರು ಇವತ್ತು ಪ್ರಾರಂಬವಾಗುತ್ತದೆ, ನಾಳೆ ಪ್ರಾರಂಬವಾಗುತ್ತದೆ ಎನ್ನುವ ಆಶಾಭಾವನೆಯಲ್ಲಿ ಕಾಯುತ್ತಿದ್ದಾರೆ. ಅಧಿಕಾರಿಗಳಲ್ಲಿ ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಿ ಮಾಡಿ ಸುಸ್ತಾಗಿದ್ದಾರೆ. ಬೇಸಿಗೆಯಲ್ಲಿ ಕಷ್ಟಪಟ್ಟು ಈ ರಸ್ತೆಯಲ್ಲಿ ಬೈಕ್ ಗಳಲ್ಲಿ ಓಡಾಡುವ ನಾಗರಿಕರು ಮಳೆಗಾಲದಲ್ಲಿ ಮನೆಯಲ್ಲೇ ಇರಬೇಕಾದ ಸ್ಥಿತಿ ಉದ್ಭವವಾಗಿದೆ. ಮಳೆಗಾಲದಲ್ಲಿ ಈ ರಸ್ತೆಯು ನಡೆದಾಡಲು ಆಗದ ಸ್ಥಿತಿಯಲ್ಲಿದೆ. ಕೆಸರು ಗದ್ದೆ ಯಾಗುವ ರಸ್ತೆ ಮೇಲೆ ಕಾಲಿಟ್ಟರೆ ಕಾಲು ಹುಗಿದು ಹೋಗುತ್ತದೆ. ಇನ್ನು ಮಳೆಗಾಲ ಪ್ರಾರಂಭವಾದ ಮೇಲೆ ನಾಲ್ಕೈದು ತಿಂಗಳು ಈ ರಸ್ತೆಯ ಮೇಲೆ ಯಾವುದೇ ವಾಹನಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಇನ್ನು ಯಾರಿಗಾದರೂ ಅನಾರೋಗ್ಯ ಸಂಭವಿಸಿದರೆ ಅವರನ್ನು ಕಂಬಳಿಯಲ್ಲಿ ಸುತ್ತಿ ಕೋಲಿಗೆ ಕಟ್ಟಿಕೊಂಡು ಹೆಗಲಮೇಲೆ ಹೊತ್ತುಕೊಂಡು ವಾಂಟೆ ಹಳ್ಳ ಬಸ್ ನಿಲ್ದಾಣದವರೆಗೆ ತರಬೇಕಾದ ಸ್ಥಿತಿ ಇದೆ. ಪ್ರತಿವರ್ಷ ಜನರು ಇದೇ ಕಷ್ಟವನ್ನು ಅನುಭವಿಸುತ್ತಿದ್ದಾರೆ.


ಇನ್ನೂ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದರು ಇಲ್ಲಿ ಅಳವಡಿಸಿರುವ ಕೆಬಲ್ ಕಳಪೆ ಗುಣಮಟ್ಟದಿಂದ ಕೂಡಿರುವದರಿಂದ ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಬಂದರೆ ಕೇಬಲ್ ಗಳು ಸುಟ್ಟು ಹೋಗುತ್ತದೆ ಎನ್ನುವ ಕಾರಣಕ್ಕೆ ಅತ್ಯಂತ ಕಡಿಮೆ ವೋಲ್ಟೇಜ್ ವಿದ್ಯುತ್ತನ್ನು ಈ ಕೇಬಲ್ ಮೂಲಕ ಪೂರೈಸುತ್ತಿದ್ದು ಇದರಿಂದ ಯಾವುದೇ ಉಪಕರಣಗಳು ಕೂಡ ಉಪಯೋಗಿಸಲಾಗುತ್ತಿಲ್ಲಾ ಎಂದು ಇಲ್ಲಿಯ ನಾಗರಿಕರು ಆರೋಪಿಸಿದ್ದಾರೆ.
ಇನ್ನು ಈ ಹಳ್ಳಿಗರು ರೇಷನ್ ತರಲು ಪ್ರತಿ ತಿಂಗಳು ಗೇರುಸೊಪ್ಪಕ್ಕೆ ಹೋಗಬೇಕಾದ ಪರಿಸ್ಥಿತಿ ಇದ್ದು, ಸುಮಾರು ೨೨ ಕಿಲೋಮೀಟರ್ ದೂರ ಹೋಗಿ ರೇಷನ್ ತರಬೇಕಾಗಿತ್ತದೆ. ವಾಂಟೆಹಳ್ಳ ಬಸ್ ನಿಲ್ದಾಣದವರೆಗೆ ಸುಮಾರು ಆರರಿಂದ ಎಂಟು ಕಿಲೋಮೀಟರ್ ನಡೆದು ಬಂದು ಅಲ್ಲಿಂದ ವಾಹನದ ಮೂಲಕ ಗೆರುಸೋಪ್ಪ ಕ್ಕೆ ಹೋಗಿ ಅಲ್ಲಿ ರೇಷನ್ ತೆಗೆದುಕೊಳ್ಳಬೇಕು ಮತ್ತು ರೇಷನ್ ತೆಗೆದುಕೊಂಡ ಮೇಲೆ ವಾಪಸ್ ಯಾವುದಾದರು ವಾಹನದ ಮೂಲಕ ವಾಂಟೆಹಳ್ಳ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಮತ್ತೆ ಊರಿಗೆ ನಡೆದುಕೊಂಡು ಹೋಗಬೇಕಾದ ಸ್ಥಿತಿ ಈ ಜನರದಾಗಿದೆ.
ಹೊನ್ನಾವರ ತಾಲೂಕಿನ ಉಪ್ಪೋಣಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಈ ಹಳ್ಳಿಗರು ಗ್ರಾಮ ಪಂಚಾಯತಿಗೆ ಹೋಗಬೇಕಾದರೆ ಸುಮಾರು ೩೦ ಕಿಲೊ ಮೀಟರ್ ದೂರ ಹೋಗಬೇಕಾದ ಸ್ಥಿತಿ ಇದೆ. ಹೀಗಾಗಿ ಇಲ್ಲಿಯವರೆಗೂ ಗ್ರಾಮ ಪಂಚಾಯಿತಿಯಿAದ ಕೂಡ ಯಾವುದೇ ಸೌಲಭ್ಯಗಳು ದೊರೆತಿಲ್ಲ ಎಂದು ಇಲ್ಲಿಯ ಸ್ಥಳೀಯರು ಆರೋಪಿಸುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಓಟಿಗಾಗಿ ಬರುವ ರಾಜಕಾರಣಿಗಳು ಜನಪ್ರತಿನಿದಿಗಳಾದ ನಂತರ ಈ ಕಡೆ ಮುಖ ತೋರಿಸುವುದಿಲ್ಲ ಎನ್ನುವುದು ಸ್ಥಳಿಯರ ಆರೋಪ.
ಇಲ್ಲಿ ಇರುವ ಅಂದಾಜು ೮೦ ಮನೆಗಳಲ್ಲಿ ಒಂದು ಬ್ರಾಹ್ಮಣ, ೨ ಶೇಟ್ಟಿ ಜಾತಿಗರ ಮನೆ ಬಿಟ್ಟರೆ ಉಳಿದ ಎಲ್ಲರು ನಾಯ್ಕ ಹಾಗೂ ಗೌಡ ಜಾತಿಯ ಹಿಂದುಳಿದ ವರ್ಗದ ಜನರೆ ಈ ಹಳ್ಳಿಗಳಲ್ಲಿ ವಾಸವಾಗಿದ್ದು ಶಿಕ್ಷಣದ ಕೊರತೆ ಹಾಗೂ ತಿಳುವಳಿಕೆಯ ಕೊರತೆಯಿಂದಾಗಿ ಸರಕಾರದ ಸೌಲಭ್ಯದಿಂದ ವಂಚಿತರಾಗಿದ್ದಾರೆ.
ತಕ್ಷಣಕ್ಕೆ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಹಳ್ಳಿಗಳಿಗೆ ಆಗಮಿಸಿ ಜನರ ಪರಿಸ್ಥಿತಿ, ಮಹಿಳೆಯರ, ಮಕ್ಕಳ, ರೋಗಿಗಳ ಸ್ಥಿತಿ ಗತಿಗಳನ್ನು ಪರಿಶೀಲನೆ ನಡೆಸಿ ಅವರಿಗೆ ಸರಕಾರದಿಂದ ಸಿಗಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಬೇಕೆಂದು ನಾನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಆಗ್ರಹಿಸುತ್ತಿದ್ದೇನೆ. ಹಾಗೂ ನಿಂತುಹೋಗಿರುವ ರಸ್ತೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು, ಬಿಡುಗಡೆ ಆದ ಅನುದಾನದಲ್ಲಿ ಎಷ್ಟು ಹಣವನ್ನು ಬಳಸಲಾಗಿದೆ, ಎಷ್ಟು ಹಣ ಸರ್ಕಾರಕ್ಕೆ ವಾಪಸ್ ಹೋಗಿದೆ, ಎಷ್ಟು ಹಣ ನಿಜವಾಗಿಯೂ ಆ ರಸ್ತೆಗೆ ಖರ್ಚು ಮಾಡಿದ್ದಾರೆ ಎನ್ನುವ ಸಮಗ್ರ ತನಿಖೆ ನಡೆಸಬೇಕು. ಉಳಿದ ಕಾಮಗಾರಿಯನ್ನು ಈ ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ತಕ್ಷಣ ಪ್ರಾರಂಭಿಸಿ ಈ ಹಳ್ಳಿಗರಿಗೆ ಅನುಕೂಲ ಮಾಡಿಕೊಡಬೇಕೆಂದು ನಾಗರಾಜ ನಾಯ್ಕ, ಜಿಲ್ಲಾಧ್ಯಕ್ಷರು , ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಉತ್ತರಕನ್ನಡ ಇವರು ಆಗ್ರಹಿಸಿರುತ್ತಾರೆ.

error: