December 4, 2024

Bhavana Tv

Its Your Channel

ಭಾವನ ವಾಹಿನಿ ವರದಿಗೆ ಸ್ಪಂದಿಸಿದ ಶಾಸಕ ದಿನಕರ ಶೆಟ್ಟಿ; ಹೊನ್ನಾವರ ಪಟ್ಟಣದಲ್ಲಿ ಪತ್ರಿಕೆ ವಿತರಣೆ ಕಾರ್ಯ ನಿರ್ವಹಿಸುವ ೧೮ ಜನರಿಗೆ ಕುಮುಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ಶುಕ್ರವಾರ ದಿನಸಿ ಕಿಟ್ ವಿತರಣೆ.

ಹೊನ್ನಾವರ: ಪತ್ರಿಕಾ ವಿತರಕರ ಸಮಸ್ಯೆ ಬಗ್ಗೆ ಭಾವನ ವಾಹಿನಿ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿ ಇಂದೇ ಈ ಕಾರ್ಯಕ್ಕೆ ಮುಂದಾಗಿ ಪಟ್ಟಣದ ಎಲ್ಲಾ ೧೮ ವಿತರಕರಿಗೆ ಕಿಟ್ ವಿತರಣೆ ಮಾಡಿದ್ದೆನೆ. ಪತ್ರಿಕಾ ವಿತರಕರು ಬಹುಮುಖ್ಯವಾದವರು. ಪ್ರತಿನಿತ್ಯ ತಮ್ಮ ಕಾಯಕವನ್ನು ಮಾಡುತ್ತಾ ಜೀವನ ನಡೆಸುತ್ತಿದ್ದು ಕರೋನಾ ಸಂಕಷ್ಟದ ಸಮಯದಲ್ಲಿ ತಮ್ಮ ಜೀವನವನ್ನು ಪಣಕಿಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ನೆರವಾಗುವ ದೃಷ್ಟಿಯಿಂದ ಇಂದು ಸಹಕಾರ ನೀಡಿದ್ದೇನೆ. ಕ್ಷೇತ್ರದಲ್ಲಿ ಈ ಹಿಂದಿನಿAದಲೂ ಸಾವಿರಾರು ಜನರಿಗೆ ಕಿಟ್ ಹಾಗೂ ತರಕಾರಿ ವಿತರಿಸಿರುದರಿಂದ ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸಿದ ತೃಪ್ತಿ ನನಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕ ಅಧ್ಯಕ್ಷ ರಾಜೇಶ ಭಂಡಾರಿ, ಮುಖಂಡರಾದ ಎಂ.ಜಿ.ನಾಯ್ಕ, ಎಂ.ಎಸ್.ಹೆಗಡೆ, ದತ್ತಾತ್ರೇಯ ಮೇಸ್ತ, ಸುರೇಶ ಸಾರಂಗ, ಉಲ್ಲಾಸ ನಾಯ್ಕ ಉಪಸ್ಥಿತರಿದ್ದರು.

error: