December 22, 2024

Bhavana Tv

Its Your Channel

ಮೀನುಗಾರಿಕೆಯನ್ನು ಜೂನ್ ಎರಡನೇ ವಾರದವರೆಗೆ ಮುಂದುವರಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಭಟ್ಕಳ: ಲಾಕ್ ಡೌನ್‌ನಿಂದಾಗಿ ಮಾರ್ಚ್ ೨೪ರಿಂದ ಏಪ್ರಿಲ್ ೧೦ರ ವರೆಗೆ ೧೭ ದಿನಗಳ ವರೆಗೆ (ಕೆಲವು ಕಡೆಗಳಲ್ಲಿ ಎರಡು ತಿಂಗಳ ವರೆಗೆ ನಿಷೇಧವಿತ್ತು) ಮೀನುಗಾರಿಕೆ ನಿಷೇಧವಿತ್ತು. ಮೀನುಗಾರಿಕೆಯ ಮೇಲಿರುವ ಏಕರೂಪದ ನಿಷೇಧದ ಬಗ್ಗೆ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು ತಜ್ಞರು, ಕರಾವಳಿಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸಮಾಲೋಚನೆ ನಡೆಸಿ ಮಾರ್ಚ್ ೨೦ರಂದು ಹೊರಡಿಸಿದ ಆದೇಶವನ್ನು ಹಿಂದಕ್ಕೆ ಪಡೆದಿದೆ.

ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಅವಧಿಯನ್ನು ೧೫ ದಿನಗಳವರೆಗೆ ಮೀನುಗಾರಿಕೆಗೆ ಅವಕಾಶ ನೀಡಲಾಗಿದ್ದು, ಮೀನುಗಾರಿಕೆ ನಿಷೇಧದ ಅವಧಿಯನ್ನು ಜೂನ್ ೧೫ರಿಂದ ಜುಲೈ ೩೧ರ ವರೆಗೆ, ಪೂರ್ವ ಕರಾವಳಿಯಲ್ಲಿ ಏಪ್ರಿಲ್ ೧೫ರಿಂದ ಮೇ ೩೧ರ ವರೆಗೆ ಮೀನುಗಾರಿಕೆ ನಿಷೇಧಿಸಲಾಗಿದೆ.

ಈ ಆದೇಶದಿಂದಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಮೀನುಗಾರರು ನಿಟ್ಟುಸಿರುವ ಬಿಡುವಂತಾಗಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮೀನುಗಾರಿಕೆ ವೃತ್ತಿಯನ್ನು ಅವಲಂಬಿಸಿದವರಿಗೆ ಈ ದೇಶದಿಂದ ತುಸು ನೆಮ್ಮದಿ ತಂದಿದೆ

error: