March 27, 2025

Bhavana Tv

Its Your Channel

ಜಿಲ್ಲಾ ಪಂಚಾಯತ್ ವತಿಯಿಂದ ಟೂಲ್ ಕಿಟ್ ವಿತರಣೆ

ಹೊನ್ನಾವರ ; ಜಿಲ್ಲಾ ಪಂಚಾಯತ್ ವತಿಯಿಂದ ನೀಡಲಾಗುವ ಟೂಲ್ ಕಿಟ್ ಗಳನ್ನು ಹೊನ್ನಾವರದಲ್ಲಿಂದು ಜಿಲ್ಲಾ ಪಂಚಾಯತ್ ಸದಸ್ಯರು ವಿತರಿಸಿದರು.
ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಕೈಗಾರಿಕಾ ಇಲಾಖಾ ವತಿಯಿಂದ ನೀಡಲಾಗುವ ಹೊಲಿಗೆ ಯಂತ್ರ ಮತ್ತು ಟೂಲ್ ಕಿಟ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿ ಪಂ ಸದಸ್ಯರಾದ ಶಿವಾನಂದ ಹೆಗಡೆ ಕಡತೊಕಾ,ಪುಷ್ಪಾ ನಾಯ್ಕ್ ಮತ್ತು ಶ್ರೀಮತಿ ಸವಿತಾ ಗೌಡ ಫಲಾನುಭವಿಗಳಿಗೆ ಶುಭ ಕೋರಿದರು.ಹೊನ್ನಾವರದ ಸಾಮರ್ಥ್ಯ ಸೌಧದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಒಟ್ಟೂ 42 ಫಲಾನುಭವಿಗಲಿಗೆ ಟೂಲ್ ಕಿಟ್ ವಿತರಣೆ ಮಾಡಲಾಯಿತು. ಕೈಗಾರಿಕಾ ಇಲಾಖಾಧಿಕಾರಿ ಹನುಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: