
ಭಟ್ಕಳ: ಹಾಟ್ ಸ್ಪಾಟ್ ಆಗಿದ್ದ ಭಟ್ಕಳದಲ್ಲಿ ಕೊರೋನಾ ಪ್ರಕರಣ ಕಡಿಮೆಯಾಗುತ್ತಿರುವುದರಿಂದ ಜಿಲ್ಲಾಡಳಿತ ಸೋಮವಾರದಿಂದ ಇನ್ನಷ್ಟು ಸಡಿಲಿಕೆಯನ್ನು ನೀಡಿದ್ದು, ಅಂಗಡಿ ತೆರೆಯುವ ಅವಧಿಯನ್ನು ವಿಸ್ತರಣೆ ಮಾಡಿದೆ. ಬೆಳಿಗ್ಗೆ 7ರಿಂದ ಸಂಜೆ 7ರ ತನಕ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.
ಕೋರೋನಾ ಲಾಕ್ ಡೌನ್ ನಿಂದ ಮನೆಯಲ್ಲಿಯೇ ಬಂಧಿಯಾಗಿದ್ದ ಜನರಿಗೆ ಸರಕಾರ ಸಡಿಲಿಕೆಯನ್ನು ನೀಡುತ್ತಿದ್ದು, ಇದರಂತೆ ಭಟ್ಕಳದಲ್ಲಿ ಸಡಿಲಿಕೆ ಮಾಡಲಾಗುತ್ತಿದೆ. ಕಳೆದ ಒಂದು ವಾರದಿಂದ ಭಟ್ಕಳದಲ್ಲಿ ಆಯ್ದ ಅಂಗಡಿಗಳನ್ನು ತೆರೆಯಲು ಮೊದಲ ಹಂತದಲ್ಲಿ ಸಡಿಲಿಕೆಗೆ ಅನುವು ಮಾಡಿಕೊಟ್ಟಿದ್ದು, ನಂತರ ಜೂನ್ 1ರಿಂದ ಇನ್ನಷ್ಟು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿ ಜನರಿಗೆ ಲಾಕ್ ಡೌನ್ ನಿಂದ ಮುಕ್ತಗೊಳಿಸಿ ನಿಗದಿತ ಸಮಯದವರೆಗೆ ಜನರ ಓಡಾಟ, ವ್ಯಾಪಾರ- ವಹಿವಾಟಿಗೆ ಅವಕಾಶ ನೀಡಿ ಆದೇಶ ಮಾಡಿದ್ದರು.
ಇಷ್ಟು ದಿನ ಬೆಳಿಗ್ಗೆ 8 ರಿಂದ 2 ಗಂಟೆಯವರೆಗೆ ಇದ್ದ ಸಮಯ ನಾಳೆ, ಅಂದರೆ ಸೋಮವಾರದಿಂದ ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೆ ಪುರಸಭೆ ಹಾಗೂ ಜಾಲಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸಡಿಲಿಕೆಯ ಆದೇಶವನ್ನು ಜಿಲ್ಲಾಧಿಕಾರಿಗಳು ಘೋಷಿಸಿದ ಬೆನ್ನಲ್ಲೇ ಉಪವಿಭಾಗಾಧಿಕಾರಿ ಭರತ್ ಎಸ್. ತಿಳಿಸಿದ್ದಾರೆ.
ಈಗಾಗಲೇ ಸರಕಾರದ ಆದೇಶದಂತೆ ದೇವಾಲಯ ಹಾಗೂ ಮಸೀದಿ ಚರ್ಚಗಳನ್ನು ತೆರೆಯಲು ಅವಕಾಶ ನೀಡಿದ್ದು, ಇದು ಭಟ್ಕಳದಲ್ಲಿಯೂ ಜಾರಿಯಾಗಲಿದೆ. ಅದರಂತೆ ಎಲ್ಲಾ ಹೋಟೆಲಗಳು ತೆರೆಯಲು ಅವಕಾಶ ನೀಡಿ ನಿಗದಿತ ಸಮಯವನ್ನು ಹೇರಲಾಗಿದ್ದು, ಯಾವುದೇ ಗ್ರಾಹಕರನ್ನು ಹೋಟೆಲೊಳಗೆ ಕುಳಿತು ತಿಂಡಿ ಊಟ ತಿನ್ನಲು ಅವಕಾಶ ಇಲ್ಲವಾಗಿದ್ದು ಕೇವಲ ಪಾರ್ಸಲಗೆ ಅವಕಾಶ ನೀಡಿದ್ದು ಅದರಂತೆ ಎಲ್ಲಾ ಹೋಟೆಲ್ ಮಾಲಕರು ಕಾನೂನನ್ನು ಪಾಲನೆ ಮಾಡಿದ್ದರು. ನಾಳೆಯ ಸಡಿಲಿಕೆಯಲ್ಲಿ ಹೋಟೆಲಗಳಿಗೆ ಯಾವುದೇ ಸಡಿಲಿಕೆಯಿಲ್ಲದೇ ಈ ಹಿಂದಿನಂತೆ ಪಾರ್ಸಲ ವ್ಯವಸ್ಥೆಯನ್ನು ಮುಂದುವರೆಸಬೇಕಿದೆ ಎಂದು ತಾಲೂಕಾಡಳಿತ ಸೂಚಿಸಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.