ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ದ ಕ್ಷೇತ್ರವಾದ ಶ್ರೀ ಕ್ಷೇತ್ರ ಇಡಗುಂಜಿಯಲ್ಲಿ ಇಂದಿನಿoದ ಸಾರ್ವಜನಿಕರಿಗೆ ದರ್ಶನ ಆರಂಭಗೊoಡಿದ್ದು ಮೊದಲ ದಿನ ಹಲವರು ದರ್ಶನ ಪಡೆದರು. ಕರೋನಾ ಸುರಕ್ಷತೆಗಾಗಿ ಹಲವು ನಿಯಮವಳಿಗಳ ಜಾರಿಗೆ ತಂದಿದ್ದು, ಥರ್ಮಲ್ ಸ್ಕಾö್ಯನರ್, ಸೈನಿಟೈಜರ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬ್ಯಾರಿಕೇಟ್ ಅಳವಡಿಸುವ ಜೊತೆ ಸಾಮಾಜಿಕ ಅಂತರಕ್ಕಾಗಿ ಚೌಕಕಾರದ ಗುರುತು ಅಳವಡಿಸಲಾಗಿದೆ. ದೇವಾಲಯದ ಆವರಣ ಸುತ್ತಲೂ ಪೋಲಿಸ್ ಬಿಗ್ ಬಂದವಸ್ತ ಕಲ್ಪಿಸಿದ್ದು, ಜನಸಂದಣೆ ಉಂಟಾಗದoತೆ ಮುನ್ನೆಚ್ಚರಿಕೆ ಅನುಸರಿಸ ಬೇಕಾದ ಕ್ರಮದ ಕುರಿತು ಮಾಹಿತಿ ನಿಡುತ್ತಿದ್ದಾರೆ. ಇಂದು ಸಂಕಷ್ಟಿ ಆಗಿರುದರಿಂದ ಭಕ್ತರು ಆಗಮಿಸುತ್ತಿದ್ದು ಯಾವುದೇ ಸೇವೆಗೆ ಅವಕಾಶವಿಲ್ಲ. ಕೇವಲ ದರ್ಶನ ಹೊರತುಪಡಿಸಿ ಹಣ್ಣು ಕಾಯಿ ಸೇವೆಗೂ ಅವಕಾಶವಿಲ್ಲ ಎಂದು ದೇವಾಲಯದ ಹೊರಗಡೆ ನಾಮಫಲಕ ಅಳವಡಿಸಲಾಗಿದೆ.
ಇಂದಿನಿoದ ದರ್ಶನ ಸಮಯ ಬದಲಿಸಿದ್ದು ಬೆಳಿಗ್ಗೆ ೮ರಿಂದ ೧೧. ಮಧ್ಯಾಹ್ನ
೩ ರಿಂದ ೬:೩೦ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿದೆ. ಪ್ರತಿದಿನ ನಡೆಯುತ್ತಿದ್ದ ಪ್ರಸಾದ ಭೋಜನದ ವ್ಯವಸ್ಥೆ ಕೂಡಾ ರದ್ದುಪಡಿಸಲಾಗಿದೆ.
More Stories
ಅಕ್ರಮವಾಗಿ ಗಾಂಜಾ ಮಾರಾಟ, ಭಟ್ಕಳ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ
ಭಟ್ಕಳ ಕರಾವಳಿ ಕಾವಲು ಪೊಲೀಸ್ ಠಾಣೆಯವರು ನಡೆಸಿದ ಅಣಕು ಕಾರ್ಯಾಚರಣೆಯಲ್ಲಿ ಆರು ಜನ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿ
ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ.