March 28, 2025

Bhavana Tv

Its Your Channel

ಚಲಿಸುತ್ತಿದ್ದ ಬೈಕ್ ಮೇಲೆ ಉರುಳಿದ ಬಂಡೆಗಲ್ಲು : ಬೈಕ್ ಸವಾರ ಪಾರು

ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ ಹಾದು ಹೋಗಿರುವ ಚಥುಷ್ಪಥ ಹೆದ್ದಾರಿಯಿಂದಾಗಿ ಮಳೆಗಾದ ಆರಂಭದಲ್ಲೇ ಅವಾಂತರ ಆರಂಭವಾಗಲಾರಂಭಿಸಿದೆ. ಇಂದು ಹೆದ್ದಾರಿಗೆ ಉರುಳಿದ ಬೃಹತ್ ಬಂಡೆಗಲ್ಲಿನಿಂದ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೈಕ್ ಸವಾರನೋರ್ವ ಸಿನಿಮೀಯ ರೀತಿಯಲ್ಲಿ ಪ್ರಾಣಾಪಾಯದಲ್ಲಿ ಪಾರಾಗಿರುವ ಘಟನೆ ನಡೆದಿದೆ.

ಗಿರೀಶ ಬುಧವಂತ ನಾಯ್ಕ ಎಂಬಾತ ತನ್ನ ಬೈಕ್ ನಲ್ಲಿ ಹೊನ್ನಾವರದ ಹೊಸಪಟ್ಟಣ ಬಳಿ ಹೋಗುತ್ತಿದ್ದ ವೇಳೆ ಈ ಅವಘಢ ನಡೆದಿದೆ. ಹೆದ್ದಾರಿ ಬದಿಯ ಗುಡ್ಡದಿಂದ ಉರುಳಿ ಬಂದ ಬೃಹತ್ ಬಂಡೆಗಲ್ಲು ಅಪಾಯಕ್ಕೆ ಕಾರಣವಾಗಿದೆ. ಕಲ್ಲು ಉರುಳಿ ಬಿದ್ದ ಪರಿಣಾಮವಾಗಿ ಬೈಕ್ ಸವಾರ ಗಿರೀಶ ನಾಯ್ಕ ಅವರಿಗೆ ಗಾಯವಾಗಿದ್ದು, ಬೈಕ್ ಸಂಪೂರ್ಣ ಜಖಂ ಆಗಿದೆ.

ಈ ಮಳೆಗಾಲದಲ್ಲಿ ಅಂತು ಕರಾವಳಿ ತಾಲೂಕು ಕಾರವಾರದಿಂದ ಭಟ್ಕಳಕ್ಕೆ ಪ್ರಾಣಿಸ ಬೇಕು ಅಂದ್ರೆ ಜೀವವನ್ನ ಕೈಯಲ್ಲಿ ಹಿಡಿದುಕೊಂಡೆ ಪ್ರಯಾಣಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಇಂದು ನಿನ್ನೆ ಆಗುತ್ತಿರುವ ಘಟನೆಯಲ್ಲ. ಹೆದ್ದಾರಿ ಕಾಮಗಾರಿ ಆರಂಭವಾದ ದಿನದಿಂದಲ್ಲೂ ಹೆದ್ದಾರಿ ಉದ್ದಕ್ಕೂ ಇಂತಹ ಘಟನೆಗಳು ನಡೆಯುತ್ತಲೇ ಇದೆ. ಇದಕ್ಕೆ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಯ ನಿರ್ಲಕ್ಷ್ಯ ಕಾರಣ ಎನ್ನುವ ಮಾತು ಜಿಲ್ಲೆಯ ಜನ್ರಿಂದ ಈ ಮೊದಲಿನಿಂದಲ್ಲೂ ಕೇಳಿ ಬರತ್ತಾ ಇದೆ. ಇನ್ನೂ ಮಳೆಗಾಲ ಸರಿಯಾಗಿ ಆರಂಭವಾಲ್ಲ. ಇನ್ನೂ ಮುಂದೆ ಈ ಹೆದ್ದಾರಿಯಲ್ಲಿ ಏನೇಲ್ಲಾ ಕಾದಿದೇಯೋ ಅಂತಾ ಜನ ಇದೀಗ ಆಡಿಕೊಳ್ಳತ್ತಿದ್ದಾರೆ. ಅದು ಏನೆ ಇರಲಿ ಜನರ ಪ್ರಾಣಕ್ಕೆ ಅಪಾಯ ಎದುರಾಗೋ ಮೊದಲು ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಎಚ್ಚೇತ್ತುಕೊಳ್ಳಬೇಕಾಗಿರೋದು ತೀರಾ ಅವಶ್ಯಕವಾಗಿದೆ. ಗುತ್ತಿಗೆ ಪಡೆದ ಕಂಪನಿಗೆ ಜಿಲ್ಲಾಡಳಿತ ಖಡಕ್ ಎಚ್ಚರಿಕೆ ನೀಡುವ ಮೂಲಕ ಅನಾಹುತ ಆಗದಂತೆ ನೋಡಿಕೊಳ್ಳಬೇಕು ಎನ್ನುವುದು ಪ್ರಜ್ಞಾವಂತರ ಮಾತು

error: