May 4, 2024

Bhavana Tv

Its Your Channel

ರಾಜ್ಯದಲ್ಲಿ ಇಂದು161ಕರೋನಾ ಸೊಂಕಿತರು: 164 ಸೊಂಕಿತರು ಒಂದೇ ದಿನ ಡಿಸ್ಚಾರ್ಜ.

ಬೆಂಗಳೂರು : ರಾಜ್ಯದಲ್ಲಿ ಇಂದು ಕೂಡ ಕೊರೋನಾ ಸೋಂಕಿತರ ಸರಮಾಲೆ ಮುಂದುವರೆದಿದ್ದು, 161 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5921ಕ್ಕೆ ಏರಿಕೆಯಾಗಿದೆ. ಇವರಲ್ಲಿ ೨೬೦೫ ಜನರು ಸಂಪೂರ್ಣವಾಗಿ ಗುಣಮುಖರಾಗುವ ಮೂಲಕ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಕೂಡಾ 164 ಜನರು ಡಿಸ್ಚಾರ್ಜ ಆಗುವ ಮೂಲಕ ಸೊಂಕಿತರ ಸಂಖ್ಯೆಗಿoತ ಅಧಿಕ ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸಕ್ರೀಯವಾಗಿರುವ ಕೊರೋನಾ ಸೋಂಕಿತರ ಸಂಖ್ಯೆ 3248 ಆಗಿದೆ. ರಾಜ್ಯದಲ್ಲಿ ಇಂದು ಇಬ್ಬರು ಕೊರೋನಾಗೆ ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 66ಕ್ಕೆ ಏರಿಕೆಯಾಗಿದೆ
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಜಿಲ್ಲಾವಾರು ನೋಡುವುದಾದರೆ, ಯಾದಗಿರಿ -೬೧, ಬೆಂಗಳೂರು ನಗರ – ೨೯, ದಕ್ಷಿಣ ಕನ್ನಡ -೨೩, ಕಲಬುರ್ಗಿ -೧೦, ಬೀದರ್ -೦೯, ದಾವಣಗೆರೆ -೦೮, ಕೊಪ್ಪಳ-೦೬, ಶಿವಮೊಗ್ಗ – ೦೪, ವಿಜಯಪುರ, ಚಿಕ್ಕಬಳ್ಳಾಪುರ, ಧಾರವಾಡ ಮತ್ತು ಮೈಸೂರು ತಲಾ ಎರಡು ಸೊಂಕಿತರು, ಬಾಗಲಕೋಟೆ, ತುಮಕೂರು ಮತ್ತು ಚಾಮರಾಜನಗರ ತಲಾ ಒಂದು ಕೊರೋನಾ ಕೇಸ್ ಪತ್ತೆಯಾಗುವ ಮೂಲಕ ಇಂದು ೧೬೧ ಜನರಿಗೆ ಕೊರೋನಾ ದೃಢಪಟ್ಟಿದೆ.

error: