May 18, 2024

Bhavana Tv

Its Your Channel

ಮೀನುಗಾರ ಮಹಿಳೆಯರಿಗೆ ಪ್ರಯೋಜನವಾಗದ ಸರ್ಕಾರದ ೬೦ ಕೋಟಿ ಸಾಲ ಮನ್ನಾ: ಜಿಲ್ಲೆಯ ಉಸ್ತುವಾರಿ ಸಚಿವರು ಶಾಸಕರು ನ್ಯಾಯ ದೊರಕಿಸಲು ಮುಂದಾಗಲಿ: ಜಯಶ್ರೀ ಮೋಗೇರ

ಹೊನ್ನಾವರ :ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ಘೋಷಣೆ ಮಾಡಿದ ಸಾಲಮನ್ನದ ಹಣ ಈಗ ಬಿಡುಗಡೆಯಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮಹಿಳೆಯರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಮೊಗೇರ ತಿಳಿಸಿದ್ದಾರೆ.
ಈ ಬಗ್ಗೆ ಅಂಕೋಲದಲ್ಲಿ ಮೀನುಗಾರಿಕಾ ಸಚಿವ ಶ್ರೀನಿವಾಸ ಪೂಜಾರಿಯವರು ಹೇಳಿಕೆ ನೀಡಿರುವುದು ಮೀನುಗಾರ ಮಹಿಳೆಯರಿಗೆ ನಿರಾಶೆ ಉಂಟುಮಾಡಿದೆ. ಯಾಕೆಂದರೆ ಸರ್ಕಾರದ ೨೩ ಸಾವಿರ ಮಹಿಳೆಯರಿಗೆ ೬೦ ಕೋಟಿ ಸಾಲ ಮನ್ನಾ ಮಾಡಿದ ಹಣದಲ್ಲಿ ಜಿಲ್ಲೆಯ ಮೀನುಗಾರರಿಗೆ ಕೇವಲ ಎರಡುವರೆ ಕೋಟಿ ದೊರೆತಿದೆ.ಯಾಕೆಂದರೆ ಸಾಲಮನ್ನಾ ಮಾಡಿದ ಸರ್ಕಾರದ ಮಾನದಂಡ ಅಸಮರ್ಪಕವಾಗಿದ್ದು ಇದರಿಂದ ಜಿಲ್ಲೆಯ ಮೀನುಗಾರ ಮಹಿಳೆಯರಿಗೆ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೀನುಗಾರ ಮಹಿಳೆಯರು ಸಾಮಾನ್ಯವಾಗಿ ಸ್ಥಳೀಯವಾಗಿ ಇರುವ ಮೀನುಗಾರಿಕಾ ಸಹಕಾರಿ ಸಂಘಗಳಲ್ಲಿ ಹಾಗೂ ಇನ್ನಿತರ ಖಾಸಗಿ ಬ್ಯಾಂಕುಗಳಲ್ಲಿ ವ್ಯವಹಾರ ಮಾಡುತ್ತಾರೆ. ಅಲ್ಲದೆ ಇದರೊಂದಿಗೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸ್ವಸಾಯ ಸಂಘಗಳ ಮೂಲಕ ಸಹ ಸಾಲ ಪಡೆದಿರುತ್ತಾರೆ. ಆದರೆ ಸರ್ಕಾರ ಇದನ್ನು ಯಾವುದೇ ಪರಿಗಣಿಸದೆ ರಾಷ್ಟ್ರೀಕೃತ ಬ್ಯಾಂಕುಗಳ ಸ್ಕೀಮಿನ ಅಡಿಯಲ್ಲಿ ಕೇವಲ ಶೇಕಡಾ ಎರಡರ ಬಡ್ಡಿದರದಲ್ಲಿ ನೀಡಿದ ಸಾಲ ಮಾತ್ರ ಮನ್ನಾ ಮಾಡಿದೆ.ಇದರಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರಿಗೆ ಮಾತ್ರ ಅನುಕೂಲವಾಗಿದ್ದು ಉತ್ತರಕನ್ನಡಜಿಲ್ಲೆಯ ಮೀನುಗಾರ ಮಹಿಳೆಯರಿಗೆ ಅನ್ಯಾಯವಾಗಿದೆ .
ಯಾಕೆಂದರೆ ಮೀನುಗಾರ ಮಹಿಳೆಯರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನವರು ತುಂಬಾ ಅನಾನೂಕೂಲವಂತವರಾಗಿದ್ದಾರೆ. ಇದರಿಂದ ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ರಾಷ್ಟ್ರೀಕೃತ ಬ್ಯಾಂಕುಗಳು ಮೀನುಗಾರರ ಮಹಿಳೆಯರಿಗೆ ಹೆಚ್ಚಿನ ಸಾಲವನ್ನು ನೀಡಿಲ್ಲ. ಸಾಮಾನ್ಯವಾಗಿ ಮೀನುಗಾರರಿಗೆ ಮಹಿಳೆಯರಿಗೆ ಸಹಾಯ ವಾಗಬೇಕಾದರೆ ಸರ್ಕಾರವು ಮೀನುಗಾರಿಕಾ ಸಂಘಗಳಲ್ಲಿ ಹಾಗೂ ಇನ್ನಿತರ ಬ್ಯಾಂಕುಗಳಲ್ಲಿ ನೀಡಿದ ಸಾಲವನ್ನು ಮನ್ನಾ ಮಾಡಬೇಕಾಗಿದೆ .
ಆದರೆ ಸರಕಾರ ಕೇವಲ ಉಡುಪಿ ಜಿಲ್ಲೆಗೆ ಅನುಕೂಲವಾಗುವಂತೆ ಐವತ್ತೈದುಕೋಟಿ ಅಲ್ಲಿಯೇ ಮಹಿಳೆಯರಿಗೆ ಸಾಲ ಮನ್ನಾ ಮಾಡಿದೆ.
ಉತ್ತರಕನ್ನಡ ಜಿಲ್ಲೆಯ ಮೀನುಗಾರರ ಮಹಿಳೆಯರು ಸಹಕಾರಿ ಸಂಘಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳ ಸ್ವಸಹಾಯ ಸಂಘಗಳ ಮೂಲಕ ಪಡೆದಿರುವ ಈ ಸೌಲಭ್ಯದಿಂದ ವಂಚಿತವಾಗಿರುವ ಇದು ಬೇಸರದ ಸಂಗತಿಯಾಗಿದೆ ಆದ್ದರಿಂದ ಈ ಬಗ್ಗೆ ಅನ್ಯಾಯದ ಕುರಿತು ನ್ಯಾಯ ದೊರಕಿಸಲು ಹಲವು ಮೀನುಗಾರರ ಸಂಘಟನೆಗಳು ಮೀನುಗಾರರ ಸಚಿವರ ಗಮನಕ್ಕೆ ತಂದರು ಈ ಬಗ್ಗೆ ಯಾವುದೇ ಪ್ರಯೋಜನವಾಗಿಲ್ಲ ತಾಲೂಕು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಮೀನುಗಾರರು ಮೀನುಗಾರ ಮಹಿಳೆಯರಿಗೆ ಮಹಿಳೆಯರ ರಸ್ತೆ ರಸಿಕತೆ ರಾಷ್ಟ್ರೀಕೃತ ಬ್ಯಾಂಕುಗಳ ಸ್ವಸಹಾಯ ಸಂಘಗಳ ಮೂಲಕ ಹಾಗೂ ಮೀನುಗಾರಿಕೆ ಸಹಕಾರಿ ಸಂಘಗಳ ಮೂಲಕ ಪಡೆದ ಸಾಲವನ್ನು ಮನ್ನಾ ಮಾಡಬೇಕೆಂದು ವಿನಂತಿಸಿಕೊoಡಿದ್ದೆ ಜಿಲ್ಲಾ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯಮಂತ್ರಿಗಳಿಗೆ ಹಾಗೂ ಮೀನುಗಾರಿಕಾ ಸಚಿವರಿಗೆ ಜಿಲ್ಲೆಯ ಮೀನುಗಾರರ ಮಹಿಳೆಯರ ಸಮಸ್ಯೆಗಳನ್ನು ಗಮನಕ್ಕೆ ತಂದು ನ್ಯಾಯ ದೊರಕಿಸಿ ಕೊಡಬೇಕಾಗಿದೆ ದೇಶದಲ್ಲೆಡೆ ಕರೋನಾ ಇಂದ ಮೀನುಗಾರ ಕುಟುಂಬಗಳು ಕೂಡ ತೀವ್ರ ತೀವ್ರ ಸಂಕಷ್ಟ ಅನುಭವಿಸಿದ್ದು ಮೀನುಗಾರಿಕಾ ಸಹಕಾರಿ ಸಂಘಗಳಿoದ ಹಾಗೂ ರಾಷ್ಟ್ರೀಕೃತ ರಾಷ್ಟ್ರೀಕೃತ ಬ್ಯಾಂಕುಗಳಿoದ ಸೊಸೆಯ ಸ್ವಸಹಾಯ ಸಂಘಗಳ ಮೂಲಕ ಪಡೆದ ಸಾಲವನ್ನು ಮರುಪಾವತಿ ಮಾಡದೆ ಸರಕಾರದ ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದಾರೆ ಆದ್ದರಿಂದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮೀನುಗಾರಿಕೆ ಸಚಿವರು ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ಮಹಿಳೆಯರು ಮೀನುಗಾರಿಕಾ ಸಹಕಾರಿ ಸಂಘಗಳಿoದ ಹಾಗೂ ರಾಷ್ಟ್ರದ ಬ್ಯಾಂಕುಗಳಿoದ ಸ್ವಸಹಾಯ ಸಂಘಗಳಿoದ ಪಡೆದ ಸಾಲವನ್ನು ೫೦೦೦೦ ಹೊರಗಿನ ಸಾಲವನ್ನು ತಕ್ಷಣ ಮನ್ನಾ ಮಾಡಿ ಆದೇಶ ಹೊರಡಿಸಿ ನ್ಯಾಯ ದೊರಕಿಸಿ ಕೊಡಬೇಕೆಂದು ಅವರು ವ್ಯಕ್ತಪಡಿಸಿದ್ದಾರೆ

error: