March 28, 2025

Bhavana Tv

Its Your Channel

ಹೊನ್ನಾವರದ ಕರೋನಾ ವಾರಿಯರ್ಸ ಕಾರ್ಯ ಪ್ರಶಂಸೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಹರೀಶ ಕುಮಾರ್.

ಹೊನ್ನಾವರ; ಕರೋನಾ ನಿಭಾಯಿಸುವಲ್ಲಿ ಸ್ಥಳಿಯಮಟ್ಟದ ಅಧಿಕಾರಿಗಳು, ತಾಲೂಕಿನ ಅಧಿಕಾರಿಗಳು ಪರಿಶ್ರಮ ಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈ ಮಟ್ಟಿಗೆ ಕರೋನಾ ನಿಯಂತ್ರಣದಲ್ಲಿರಲು ನಿಮ್ಮೆಲ್ಲರ ಸಹಕಾರವೇ ಕಾರಣ. ಮುಂದೆಯು ಅಗ್ನಿಪರಿಕ್ಷೆ ಇದ್ದು, ಎಲ್ಲರೂ ಜಾಗೃತರಾಗಿರುವಂತೆ ಶುಕ್ರವಾರ ಹೊನ್ನಾವರದ ಪ್ರತಿಭೋದಯದಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು ಸಲಹೆ ನೀಡಿದರು. ಕರೋನಾ ಸೊಂಕು ತಗಲಿದ ವ್ಯಕ್ತಿ ಹಾಗೂಆ ಕುಟುಂಬ ಕ್ವಾರಂಟೈನ್‌ನಲ್ಲಿರುವ ಕುಟುಂಬವನ್ನು ಸಮಾಜದಲ್ಲಿ ನೋಡುವ ಸ್ಥಿತಿ ಬದಲಾಗಿದೆ. ಈ ಬಗ್ಗೆ ನಾವು ಅರಿವು ಮೂಡಿಸುವ ಕಾರ್ಯ ಮಾಡಬೇಕಿದೆ ಎಂದರು.
ವೇದಿಕೆಯಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ, ತಾಲೂಕ ಕಾರ್ಯನಿರ್ವಹಣಾಧಿಕಾರಿ ಕರೀಂ ಅಸದಿ, ಸಿ.ಪಿ.ಐ ವಸಂತ ಆಚಾರಿ, ತಾಲೂಕ ಆರೊಗ್ಯಧಿಕಾರಿ ಉಷಾ ಹಾಸ್ಯಗಾರ, ಪಂಚಾಯತ ಅಭಿವೃದ್ದಿ ಅಧಿಕಾರಿ, ಗ್ರಾಮ ಲೆಕ್ಕಧಿಕಾರಿ, ಪಟ್ಟಣ ಪಂಚಾಯತಿ ,ಕಂದಾಯ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: