March 28, 2025

Bhavana Tv

Its Your Channel

ನಿರ್ಮಾಣ ಹಂತದ ಶಡ್‌ನಲ್ಲಿ ಅಕ್ರಮವಾಗಿ ಕದ್ದ ಗೋವು ಇಟ್ಟು ಕಸಾಯಿಖಾನೆಗೆ ಸಾಗಿಸುವ ಮೊದಲೇ ಪತ್ತೆ ಹಚ್ಚಿ ರಕ್ಷಿಸಿದ ಆರಕ್ಷಕರು.

ಹೊನ್ನಾವರ :- ತಾಲೂಕಿನ ಮಂಕಿ ಹಳೆಮಠ ರಸ್ತೆಯಲ್ಲಿರುವ ನಾವಯತ್ ಕಾಲೋನಿಯಲ್ಲಿ ಬದ್ರುದುಜಾ ಪಕರ್ಜಿ ಹೆಸರಿನ ವ್ಯಕ್ತಿಗೆ ಸೇರಿದ್ದೆಂದು ಹೇಳಲಾದ ನಿರ್ಮಾಣ ಹಂತದಲ್ಲಿರುವ ಕಟ್ಟಡ ಹಿಂಬಾಗದಲ್ಲಿ ಜಾನುವಾರುಗಳನ್ನು ಕದ್ದು ತಂದು ಕಟ್ಟಿಹಾಕಿ ಇಟ್ಟಿದ್ದರು., ಈ ಬಗ್ಗೆ ಖಚಿತ ಮಾಹಿತಿಯ ದೊರೆತ ಹಿನ್ನಲೆಯಲ್ಲಿ ಕೂಡಲೇ ದಾಳಿ ನಡೆಸಿದ ಹೊನ್ನಾವರ ಹಾಗೂ ಮಂಕಿ ಠಾಣೆಯ ಪೊಲೀಸರು ೧೧ ಜಾನುವಾರುಗಳನ್ನು ಪತ್ತೆಹಚ್ಚಿ ಮನೆಯ ಮಾಲಿಕ ಹಾಗೂ ಕಾವಲುಗಾರನ ಮೇಲೆ ಕೇಸು ದಾಖಲಿಸಿಕೊಂಡಿದ್ದಾರೆ. ಗುರುವಾರ ತಡರಾತ್ರಿ ಹೊನ್ನಾವರ ಹಾಗೂ ಮಂಕಿ ಪೋಲಿಸರು ಜಂಟಿಯಾಗಿ ಈ ಕಾರ್ಯಕ್ಕೆ ಮುಂದಾಗಿ ಗೋವುಗಳ ರಕ್ಷಣೆ ಮಾಡಿರುದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಟ್ಕಳ ವಿಭಾಗದ ಎ.ಎಸ್ಪಿ ನಿಖಿಲ್ ಬುಳ್ಳಾವರ್ ಮಾರ್ಗದರ್ಶನದಲ್ಲಿ ಹೊನ್ನಾವರ ಸಿ.ಪಿ.ಐ ವಸಂತ ಆಚಾರಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಹೊನ್ನಾವರ ಠಾಣೆಯ ಕಿರಿಯ ಪಿ.ಎಸ್.ಐ ಅಶೋಕ ಲಮಾಣಿ, ಮಂಕಿ ಠಾಣೆಯ ಪಿ.ಎಸ್.ಐ ಪರಮಾನಂದ ಬಿ ಕೊಣ್ಣೂರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ೧೧ ಜಾನುವಾರುಗಳನ್ನು ವಶಕ್ಕೆ ಪಡೆದಿದ್ದು ಇವುಗಳ ಮಾರುಕಟ್ಟೆ ಮೌಲ್ಯ ಸುಮಾರು ೪೬೦೦೦ ರುಪಾಯಿ ಎಂದು ಅಂದಾಜಿಸಲಾಗಿದೆ.

error: