March 28, 2025

Bhavana Tv

Its Your Channel

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ – ಕೋವಿಡ್ ೧೯ ಮಾಹಿತಿ ಪತ್ರ .ಜಿಲ್ಲಾಧಿಕಾರಿ ಬಿಡುಗಡೆ


ಹೊನ್ನಾವರ: ಜಗತ್ತಿನೆಲ್ಲಡೆಯಂತೆ ದೇಶದಲ್ಲಿಯೂ ಅಬ್ಬರಿಸುತ್ತಿರುವ ಕರೋನಾ ಬಗ್ಗೆ ಸಾರ್ವಜನಿಕರಲ್ಲಿ ಭಯದ ವಾತವರಣ ಮೂಡಿರುದರಿಂದ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಮದ ಮಾಹಿತಿ ಪತ್ರ ಹೊರತಂದಿದ್ದು ಇದನ್ನು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಬಿಡುಗಡೆಗೊಳಿಸಿದರು. ಕರೋನಾ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲಗಳಿದ್ದು ಈ ತಿಂಗಳಿನಾದ್ಯoತ ಜಿಲ್ಲೆಯಲ್ಲಿ ಕರೋನಾ ಜಾಗೃತಿ ಅಭಿಯಾನ ನಡೆಸಲು ಯೋಜನೆ ಮುಂದಾಗಿದೆ. ಜಿಲ್ಲೆಯ ೬ ಯೋಜನಾ ಕಚೇರಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಆಯೋಜಿಸುವ ಮೂಲಕ ಕರೋನಾ ಸುರಕ್ಷತಾ ಕ್ರಮದ ಬಗ್ಗೆ ಅರಿವು ಮೂಡಿಸಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ೧೬೫೩೭ ಗ್ರಾಮಾಭಿವೃದ್ದಿ ಯೋಜನೆಯ ಸಂಘಗಳಿದ್ದು, ೧೩೧೬೬೭ ಸದಸ್ಯರು ಇದ್ದಾರೆ. ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಜಿಲ್ಲೆಯಲ್ಲಿ ೫೨೬೭ ಕಾರ್ಯಕ್ರಮ ಸಂಘಟಿಸಿ ೧೩೧೬೬೭ ಜನರಿಗೆ ಮಾಹಿತಿ ನೀಡಲಾಗುವುದು. ರೋಗದ ಲಕ್ಷಣ, ಹರಡುವ ವಿಧಾನ, ಸೊಂಕು ತಡೆಯುವ ವಿಧಾನದ ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮದ ಕುರಿತು ಮಾಹಿತಿ ಪತ್ರವನ್ನು ನೀಡಲಾಗುವುದು ಎಂದು ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೆಶಕರಾದ ಶಂಕರ ಶೆಟ್ಟಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ವಿವೇಕ ಶೇಣ್ವಿ, ಸಿ.ಪಿಐ ವಸಂತ ಆಚಾರಿ, ಆಡಳಿತ ವೈದ್ಯಾಧಿಕಾರಿ ಉಷಾ ಹಾಸ್ಯಗಾರ, ತಾಲೂಕ ಕಾರ್ಯನಿರ್ವಹಣಾಧಿಕಾರಿ ಕರೀಂ ಅಸದಿ ಯೋಜನೆಯ ಜಿಲ್ಲಾ ನಿರ್ದೆಶಕರಾದ ಯೋಜನಾಧಿಕಾರಿ ಎಂ.ಎಸ್.ಈಶ್ವರ್, ಮೇಲ್ವಿಚಾರಕರಾದ ರಮೇಶ, ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

error: