April 18, 2025

Bhavana Tv

Its Your Channel

ಭಟ್ಟಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆ: ಪತ್ರಕರ್ತರಿಗೆ ಗುರುತಿನ ಚೀಟಿ ಹಾಗೂ ಆರೋಗ್ಯ ಕಾರ್ಡ ವಿತರಣೆ

ಭಟ್ಕಳ: ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯು ತಾಲೂಕಾ ಅಧ್ಯಕ್ಷ ಭಾಸ್ಕರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆಯಿತು. ಸಭೆಯಲ್ಲಿ ಗೌರವ ಉಪಸ್ಥಿತಿಯನ್ನು ಹೊಂದಿದ್ದ ಜಿಲ್ಲಾ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅವರು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಜುಲೈ ೧ರಂದು ಪತ್ರಿಕಾ ದಿನಾಚರಣೆಯನ್ನು ಆಚರಿಸಬೇಕು ಹಾಗೂ ಸಂಪ್ರದಾಯದoತೆ ಓರ್ವ ಉತ್ತಮ, ಸಮಾಜ ಸೇವಕರನ್ನು ಸನ್ಮಾನಿಸಬೇಕು ಎನ್ನುವ ಕುರಿತು ಸಭೆಗೆ ತಿಳಿಸಿದರು. ಸಭೆಯಲ್ಲಿದ್ದ ಸದಸ್ಯರು ಸನ್ಮಾನಕ್ಕೆ ಹೆಸರುಗಳನ್ನು ಸೂಚಿಸಿ, ಚರ್ಚಿಸಿದ ನಂತರ ಈ ಬಾರಿ ಕೋವಿಡ್-೧೯ ನಿಂದಾಗಿ ಜನರು ಭೀತಿಯಿಂದ ಇರುವಾಗ ಸ್ವತಹ ಆಸ್ಪತೆಯಲ್ಲಿದ್ದು ಸದಾ ಸಹಕಾರ ನೀಡಿದ ರುಕ್ನುದ್ದೀನ್ ನಿಸಾರ್ ಅಹಮ್ಮದ್ ಅವರ ಹೆಸರನ್ನು ಸನ್ಮಾನಕ್ಕೆ ಅಂತಿಮಗೊಳಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಂಘದಿoದ ಬಂದಿದ್ದ ಗುರುತಿನ ಚೀಟಿಯನ್ನು ಹಾಗೂ ಉಡುಪಿಯ ಆದರ್ಶ ಆಸ್ಪತ್ರೆಯವರು ಕೊಡ ಮಾಡಿದ ಹೆಲ್ತ್ ಕಾರ್ಡ್ನ ಗಳನ್ನು ಸದಸ್ಯರಿಗೆ ಜಿಲ್ಲಾ ಅಧ್ಯಕ್ಷರು ವಿತರಿಸಿದರು. ಸಭೆಯಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್ ಕೋವಿಡ್-೧೯ ಸಮಯದಲ್ಲಿ ಪತ್ರಕರ್ತರಿಗೆ ತುಂಬಾ ತೊಂದರೆಯಾಗಿದ್ದು ಅರ್ಥಿಕವಾಗಿ ಕೂಡಾ ತೊಂದರೆಯಲ್ಲಿದ್ದಾರೆ. ಸಂಘದ ವತಿಯಿಂದ ಆರ್ಥಿಕ ಸಹಾಯಾ ಮಾಡಲು ಸಾಧ್ಯವಾದಲ್ಲಿ ಸಹಕರಿಸುವಂತೆ ಸಲಹೆ ನೀಡಿದರು. ಕಾರ್ಮಿಕ ಇಲಾಖೆಯ ಅಡಿಯಲ್ಲಿ ನೋಂದಣಿಯಾದ ನಮ್ಮ ಸಂಘದ ಸದಸ್ಯರಿಗೆ ಕಾರ್ಮಿಕ ಇಲಾಖೆ ಕೂಡಾ ನಿರ್ಲಕ್ಷ ಮಾಡಿದೆ. ಈ ಕುರಿತು ಸಚಿವರೊಂದಿಗೆ ಮಾತನಾಡಿ ಸದಸ್ಯರ ಸಹಾಯಕ್ಕೆ ಬರುವಂತೆ ಕೋರಲು ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕಾ ಕಾರ್ಯದರ್ಶಿ ಮೋಹನ ನಾಯ್ಕ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಎಂ.ಆರ್.ಮಾನ್ವಿ, ತಾಲೂಕಾ ಉಪಾಧ್ಯಕ್ಷ ರಿಜ್ವಾನ್ ಗಂಗಾವಳಿ, ಆತಿಕುರ್ರೆಹಮಾನ್ ಶಾಬಂದ್ರಿ, ಪ್ರಸನ್ನ ಭಟ್ಟ, ಶೈಲೇಶ ವೈದ್ಯ, ಉದಯ ನಾಯ್ಕ ರಾಘವೇಂದ್ರ ಮಲ್ಯ, ಅತಿಕುರ್ರೆಹಮಾನ್ ಡಾಂಗಿ, ಸತೀಶಕುಮಾರ್ ನಾಯ್ಕ, ಶಾಹಿದ್ ಮೊಕ್ತೇಸರ್, ಮುಂತಾದವರು ಉಪಸ್ಥಿತರಿದ್ದರು.

error: