December 22, 2024

Bhavana Tv

Its Your Channel

ಭಟ್ಕಳ ರಂಗೀಕಟ್ಟೆಯಲ್ಲಿ ನಿರ್ಮಿಸಲಾಗಿದ್ದ ವಜ್ರೇಶ್ವರ ಟರ‍್ಸ್ ಉದ್ಘಾಟಿನೆ

ಭಟ್ಕಳ ರಂಗೀಕಟ್ಟೆಯಲ್ಲಿ ನಿರ್ಮಿಸಲಾಗಿದ್ದ ವಜ್ರೇಶ್ವರ ಟರ‍್ಸ್ನ್ನು ಹಂಗ್ಯೋ ಐಸ್ ಕ್ರೀಮ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ ಪೈ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವಜ್ರೇಶ್ವರ ಟರ‍್ಸ್ ಇದರ ಮಾಲೀಕರಾದ ಆನಂದ ನಾಯ್ಡು ಅವರು ಒಂದು ಚಿಕ್ಕ ಉಧ್ಯಮವನ್ನು ಆರಂಭಿಸಿ ಶೃದ್ಧೆಯಿಂದ ದುಡಿದು ಒಂದು ದೊಡ್ಡ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಿರುವುದು ಸಂತಸ ತಂದಿದೆ. ಅವರ ಚಿಕ್ಕ ಉಧ್ಯವನ್ನು ಉದ್ಘಾಟಿಸಿದ್ದ ನನಗೆ ಇಂದು ಈ ಬೃಹತ್ ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಲು ಅವಕಾಶ ಮಾಡಿಕೊಟ್ಟಿದ್ದು ಸಂತಸ ತಂದಿದೆ ಎಂದರು.
ವಜ್ರೇಶ್ವರ ಟರ‍್ಸ್ ವಾಣಿಜ್ಯ ಸಂಕೀರ್ಣದಲ್ಲಿ ರಿಲಯನ್ಸ್ ಟ್ರೆಂಡ್ಸ್ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸುನಿಲ್ ನಾಯ್ಕ ಭಟ್ಕಳದಂತಹ ಪ್ರದೇಶದಲ್ಲಿ ಬೃಹತ್ ವಾಣಿಜ್ಯ ಕಟ್ಟಡ ನಿರ್ಮಾಣವಾಗಿರುವುದು ಸಂತಸ ತಂದಿದೆ. ನಾವು ಬ್ರಾಂಡೆಡ್ ಬಟ್ಟೆಗಳು ಬೇಕು ಎಂದರೆ ನಾವು ದೊಡ್ಡ ದೊಡ್ಡ ನಗರಗಳಿಗೆ ಹೋಗಬೇಕಾಗಿತ್ತು. ಆದರೆ ಭಟ್ಕಳದಲ್ಲಿಯೇ ಟ್ರೆಂಡ್ಸ್ ಬಟ್ಟೆಯ ಮಳಿಗೆ ಉದ್ಘಾಟನೆಯಾಗಿರುವುದು ಈ ಭಾಗದ ಜನತೆಗೆ ಅನುಕೂಲವಾಗಿದೆ ಎಂದರು.
ತAಜೀA ಸಂಸ್ಥೆಯ ಅಧ್ಯಕ್ಷ ಎಸ್.ಎಂ. ಪರ್ವೇಜ್ ಮಾತನಾಡಿ ಭಟ್ಕಳದ ಜನತೆಗೆ ಉತ್ತಮ ಬ್ರಾಂಡ್‌ನ ಬಟ್ಟೆಯನ್ನು ಖರೀಧಿಸಲು ಅನುಕೂಲವಾಗುವಂತೆ ಟ್ರೆಂಡ್ಸ್ ಮಳಿಗೆ ಆರಂಭವಾಗಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಬ್ರಾಂಡ್‌ಗಳು ಬರುವುದರಿಂದ ಊರಿನ ಬೆಳವಣಿಗೆಗೂ ಅನುಕೂಲ ಜನತೆಗೂ ಸಹಕಾರಿ ಎಂದರು.
ಭಟ್ಕಳ ಎಜ್ಯಕೇಶನ್ ಟ್ರಸ್ಟ್ನ ಟ್ರಸ್ಟಿ ಮೆನೇಜರ್ ರಾಜೇಶ ನಾಯಕ, ಶಿರಾಲಿಯ ಮಾರುತಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಶೋಕ ಪೈ, ಭಾರತೀಯ ಸ್ಟೇಟ್ ಬ್ಯಾಂಕಿನ ವ್ಯವಸ್ಥಾಕಪ ಪವನ್ ಪೈ, ರಿಲಯನ್ಸ್ ಟ್ರೆಂಡ್ಸ್ನ ಅನಿಲ್ ಮಚ್ಚಾ ಮಾತನಾಡಿದರು.

error: