April 26, 2024

Bhavana Tv

Its Your Channel

ಚರ್ತುಸ್ಪದ ಹೆದ್ದಾರಿಯನ್ನು ಸಮರ್ಪಕವಾಗಿ ಪೂರ್ತಿ ಕಾಮಗಾರಿ ಮಾಡದೆ, ಸರಿಯಾದ ವ್ಯವಸ್ಥೆ ಕಲ್ಪಿಸದೆ ಟೋಲ್ ಸಂಗ್ರಹ ಸಾರ್ವಜನಿಕರಿಂದ ಆರೋಪ

ಉತ್ತರ ಕನ್ನಡ ಜಿಲ್ಲೆ ಬಹುತೇಕ ಕರಾವಳಿ ತೀರ ಪ್ರದೇಶದಿಂದ ಕೂಡಿದೆ.ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿದೆ.ಜಿಲ್ಲೆಗೆ ದೇಶದ ನಾನಾ ಭಾಗಗಳಿಂದ ಪ್ರವಾಸಿಗರು ಬರುತ್ತಾರೆ.ಆದರೆ ಜಿಲ್ಲೆಯಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳ ಕೊರತೆಯಿಂದ ಪ್ರವಾಸಿಗರು,ಜೊತೆಗೆ ಸ್ಥಳೀಯರು ತೊಂದರೆ ಅನುಭವಿಸುವಂತಾಗಿದೆ.ಕರಾವಳಿ ತೀರದುದ್ದಕ್ಕೂ ಚತುಷ್ಪತ ಕಾಮಗಾರಿ ಗುತ್ತಿಗೆ ಪಡೆದಿರುವ ಆಯ್ ಅರ್ ಬಿ ಕಂಪನಿ ತನ್ನ ಮನಸೋ ಇಚ್ಚೆ ಕಾಮಗಾರಿ ನಡೆಸುತ್ತಿರುವುದು ಸಾರ್ವಜನಿಕರು ಸಂಕಟ ಪಡುವಂತಾಗಿದೆ.ಚತುಷ್ಪತ ಕಾಮಗಾರಿ ಆರಂಭAದಿAದಲೂ ಸಾರ್ವಜನಿಕ ವಲಯದಿಂದ ಆರೋಪ ಪ್ರತ್ಯಾರೋಪ,ಪ್ರತಿಭಟನೆಗಳು ನಡೆಯುತ್ತಲೆ ಇದೆ.ಆಯ್ ಆರ್ ಬಿ ಕಂಪನಿಯ ರಸ್ತೆ ಕಾಮಗಾರಿಯಲ್ಲಿಯೂ ಕೂಡ ಲೋಪದೋಷಗಳು ಕಂಡುಬAದಿರುವುದರಿAದ ಸಾರ್ವಜನಿಕರಿಗೆ ಪ್ರತಿಭಟನೆ ಅನಿವಾರ್ಯವಾಗಿದೆ.ಜಿಲ್ಲೆಯಲ್ಲಿ ಕುಮಟಾ ತಾಲೂಕಿನ ಹೊಳೆಗದ್ದೆ ಹಾಗೂ ಅಂಕೊಲಾದ ಬೇಲೆಕೇರಿ ಬಳಿ ಟೋಲ್ ಗೇಟ್ ನಿರ್ಮಿಸಿ ಟೋಲ್ ಸಂಗ್ರಹ ಮಾಡುತ್ತಿದೆ.ಆದರೆ ಸಾರ್ವಜನಿಕರ ವಿರೋಧದ ನಡುವೆಯೂ ಟೋಲ್ ಸಂಗ್ರಹಕ್ಕೆ ನಿಂತಿರುವ ಆಯ್.ಆರ್.ಬಿ ಕಂಪನಿ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಕೆಲ ವ್ಯವಸ್ಥೆ ಕಲ್ಪಿಸದೆ ಟೋಲ್ ಸಂಗ್ರಹಕ್ಕೆ ಮುಂದಾಗಿರುವ ಕಂಪನಿ ವಿರುದ್ದ ಜನ ಆಕ್ರೋಶರಾಗಿದ್ದಾರೆ.ಕುಮಟಾದಿಂದ ಹೊನ್ನಾವರ ಹೋಗುವ ಮಾರ್ಗದಲ್ಲಿ ಸರ್ವಿಸ್ ರಸ್ತೆ ಇದ್ದು,ಹೊನ್ನಾವರದಿಂದ ಕುಮಟಾ ಮಾರ್ಗದಲ್ಲಿ ಸಂಚರಿಸುವ ಪಾದಾಚಾರಿಗಳಿಗೆ ಇಲ್ಲಿ ಯಾವುದೇ ಸರ್ವಿಸ್ ರಸ್ತೆ ಇಲ್ಲದೆ ಇರುವುದರಿಂದ ಪಾದಾಚಾರಿಗಳು ಕಷ್ಟಪಡುವಂತಾಗಿದೆ.ಜೊತೆಗೆ ಜಿಲ್ಲೆಯಲ್ಲಿ ಯಾವುದೇ ಅಪಘಾತವಾದರೆ ತುರ್ತು ಆಸ್ಪತ್ರೆ ಇಲ್ಲಿ ಇರದ ಕಾರಣ ದೂರದ ಮಣಿಪಾಲ ಮಂಗಳೂರು ಹೋಗುವ ಪರಿಸ್ಥಿತಿ ಇದೆ.ತುರ್ತಾಗಿ ಅಂಬುಲೆನ್ಸ್ ಲ್ಲಿ ದೂರದ ಆಸ್ಪತ್ರೆ ಗೆ ಸಾಗುವಾಗ ಇಲ್ಲಿನ ಟೋಲ್ ಗೇಟ್ ದಾಟಿಯೇ ಸಾಗಬೇಕಿದೆ.ಆದರೆ ತುರ್ತಾಗಿ ಸಾಗಬೇಕಾದ ಕಾರಣದಿಂದ ಅಂಬುಲೆನ್ಸ್ ನ ವೇಗ ಹೆಚ್ಚಾಗಿರುತ್ತದೆ.ಆದರೆ ಟೋಲ್ ಬಳಿ ಹಾಕಲಾದ ಅವೈಜ್ಞಾನಿಕ ಹಂಪಗಳಿAದ ಅಂಬುಲೆನ್ಸ್ ನ ವೇಗ ಕಡಿಮೆ ಆಗಲಿದೆ.ಜೊತೆಗೆ ಅಂಬುಲೆನ್ಸ್ ನಲ್ಲಿರುವ ರೋಗಿಗೆ ಇದರಿಂದಾಗಿ ತೊಂದರೆಯಾಗುವ ಸಾದ್ಯತೆ ಹೆಚ್ಚಾಗಿರುತ್ತದೆ.ಅಪಘಾತವಾಗಿರುವ ವ್ಯಕ್ತಿಯನ್ನು ಸಾಗಿಸುವ ವೇಳೆ ಹಂಪ್ ದಾಟುವಾಗ ಅಂಬುಲೆನ್ಸ್ ನ ವೇಗಕ್ಕೆ ರೋಗಿಯ ಸ್ಥಿತಿ ಮತ್ತಷ್ಟೂ ಗಂಬೀರವಾಗಲಿದೆ ಹೀಗಾಗಿ ಅಂಬುಲೆನ್ಸ್ ಗೆ ದಾರಿ ಸುಗಮವಾಗಿಸಲು ಒಂದು ಕಡೆ ಹಂಪ್ ತೆಗೆಯಬೇಕು ಎಂದು ಸ್ಥಳೀಯರ ಆರೋಪವಾಗಿದೆ.

error: