September 14, 2024

Bhavana Tv

Its Your Channel

ಶಾಲೆಗಳಲ್ಲಿ ಮುಟ್ಟಿನ ನೈರ್ಮಲ್ಯ ನಿರ್ವಹಣೆ ಕಾರ್ಯಗಾರ

ಅರಿವಿನ ಕೊರತೆಯಿಂದ ಮುಟ್ಟಿನ ನೈರ್ಮಲ್ಯ ನಿರ್ವಹಣೆಯನ್ನು ಸರಿಯಾಗಿ ಮಾಡದೆ ಇರುವುದರಿಂದ ಅನೇಕ ಯುವತಿಯರು ಹಾಗೂ ಮಹಿಳೆಯರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಎಳೆಯ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ಮುಟ್ಟಿನ ಅವಧಿಯಲ್ಲಿ ನೈರ್ಮಲ್ಯ ನಿರ್ವಹಣೆಯನ್ನು ಸರಿಯಾಗಿ ಹೇಗೆ ಮಾಡಬೇಕೆಂಬುದನ್ನು ತಿಳಿಸಿಕೊಟ್ಟರೆ ಮುಂದೆ ಅವರು ಅನೇಕ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು ಎಂದು ಡಾ. ಗಾಯತ್ರಿ ಗುನಗಾ ಹೇಳಿದರು.

ಹೊನ್ನಾವರದ ರೋಟರಿ ಕ್ಲಬ್ ೬ ನೇ ತರಗತಿಯಿಂದ ೧೦ ನೇ ತರಗತಿಯವರೆಗಿನ ಹೆಣ್ಣು ಮಕ್ಕಳಿಗೆ ಮುಟ್ಟಿನ ನೈರ್ಮಲ್ಯ ನಿರ್ವಹಣೆ ಕುರಿತು ವಿವರವಾದ ಮಾಹಿತಿ ನೀಡಲು ಅವರವರ ಶಾಲೆಗಳಲ್ಲಿ ತಜ್ಞ ವೈದ್ಯರುಗಳಿಂದ ಕಾರ್ಯಾಗಾರಗಳನ್ನು ಎರ್ಪಡಿಸುತ್ತು. ರೋಟರಿ ಕ್ಲಬ್ ನ ಸದಸ್ಯರಾದ ರೋ. ಡಾ. ಗಾಯತ್ರಿ ಗುನಗಾ ಅವರು ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆ, ಹಳದಿಪುರದ ಆರ್.ಇ.ಎಸ್. ಸಂಯುಕ್ತ ಪದವಿ ಪೂರ್ವ ಕಾಲೇಜು, ಹೊನ್ನಾವರದ ಸೇಂಟ್ ಥಾಮಸ್ ಶಾಲೆ ಮತ್ತು ಕವಲಕ್ಕಿಯ ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಗಳ ಸುಮಾರು ೪೨೫ ವಿದ್ಯಾರ್ಥಿನಿಯರಿಗೆ ಈ ವಿಷಯದಲ್ಲಿ ವಿವರವಾದ ಮಾಹಿತಿಗಳನ್ನು ಒದಗಿಸಿದರು. ಕ್ಲಬ್‌ನ ಇನ್ನೊಬ್ಬ ಸದಸ್ಯರಾದ ರೊ. ಡಾ. ಪ್ರತಿಭಾ ಬಳಕೂರ ರವರು ಹೊನ್ನಾವರದ ಎಂ.ಪಿ.ಇ ಸೊಸೈಟಿಯ ಸೆಂಟ್ರಲ್ ಸ್ಕೂಲ್, ನ್ಯೂ ಇಂಗ್ಲೀಷ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಹಡಿನಬಾಳದ ಸರಕಾರಿ ಪೌಢ ಶಾಲೆಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿ ಸುಮಾರು ೪೩೫ ವಿದ್ಯಾರ್ಥಿನಿಯರಿಗೆ ಉಪಯುಕ್ತ ಮಾಹಿತಿ ಒದಗಿಸಿದರು. ರೋ. ಡಾ. ಗೌತಮ ಬಳಕೂರ ಅವರ ಧರ್ಮಪತ್ನಿ ಡಾ. ಅಮೃತಾ ಬಳಕೂರ ಅವರು ಹೊನ್ನಾವರದ ಸರಕಾರಿ ಪ್ರೌಢ ಶಾಲೆ, ಮಾರ್ಥೊಮಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಾಸರಕೋಡಿನ ಜನತಾ ವಿದ್ಯಾಲಯಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿ ಸುಮಾರು ೨೮೫ ವಿದ್ಯಾರ್ಥಿನಿಯರಿಗೆ ಮುಟ್ಟಿನ ನೈರ್ಮಲ್ಯ ನಿರ್ವಹಣೆಯ ಕುರಿತು ವಿವರವಾದ ಮಾಹಿತಿಗಳನ್ನು ಒದಗಿಸಿದರು. ಹೀಗೆ ೧೦ ಶಾಲೆಗಳ ೧೧೪೫ ವಿದ್ಯಾರ್ಥಿನಿಯರಿಗೆ ಮುಟ್ಟಿನ ನೈರ್ಮಲ್ಯ ನಿರ್ವಹಣೆಯ ಕುರಿತು ಕಾರ್ಯಾಗಾರಗಳನ್ನು ನಡೆಸಿ ಉಪಯುಕ್ತ ಮಾಹಿತಿಗಳನ್ನು ಒದಗಿಸಲಾಯಿತು. ರೋಟರಿ ಕ್ಲಬ್‌ನ ಅಧ್ಯಕ್ಷ ರೋ. ದಿನೇಶ ಕಾಮತ್ ಮತ್ತು ಕಾರ್ಯದರ್ಶಿ ರೋ. ಎಸ್.ಎನ್.ಹೆಗಡೆ ಅವರು ಈ ಹತ್ತು ಶಾಲೆಗಳಲ್ಲಿ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದರು.

error: