
ಹೊನ್ನಾವರ: ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರೋಟರಿ ಕ್ಲಬ್ ಹೊನ್ನಾವರ ಇವುಗಳ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಕರ್ನಲ್ ಹಿಲ್ ನಲ್ಲಿರುವ ಡಾ.ರೋಹಿತ್ ಭಟ್ ರೋಟರಿ ಸಭಾಭವನದಲ್ಲಿ ಜುಲೈ ೨೭ರಂದು ಮಧ್ಯಾಹ್ನ ೩-೩೦ಕ್ಕೆ ನಡೆಯಲಿದೆ.
ತಹಶೀಲ್ದಾರ ವಿವೇಕ ಶೇಣ್ವಿ,ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಅತಿಥಿಗಳಾಗಿ ಪಾಲ್ಗೊಳ್ಳುವರು.ಹಿರಿಯ ಪತ್ರಕರ್ತ ಜಿ.ಯು.ಭಟ್ ಅವರನ್ನು ಸನ್ಮಾನಿಸಲಾಗುವುದು.ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆಯ್ದ ಕೆಲವರನ್ನು ಮಾತ್ರ ಆಮಂತ್ರಿಸಲಾಗಿದ್ದು ಉಳಿದವರಿಂದ ಕಾರ್ಯಕ್ರಮಕ್ಕೆ ಶುಭಾಶಯ ಕೋರಲಾಗಿದೆ.
ಪತ್ರಿಕಾ ದಿನಾಚರಣೆಯ ಅಂಗವಾಗಿ ಅದೇ ದಿನ ಬೆಳಿಗ್ಗೆ ೧೦ಕ್ಕೆ ಪ್ರಭಾತನಗರದ ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ತಾಲ್ಲೂಕು ಸರ್ಕಾರಿ ಆಸ್ಪತ್ರೆ,ಆರೋಗ್ಯ ಇಲಾಖೆ,ಜಿಲ್ಲಾ ರಕ್ತನಿಧಿ ಕೇಂದ್ರ ಕಾರವಾರ,ಸೇಂಟ್ ಇಗ್ನೇಷಿಯಸ್ ಆಸ್ಪತ್ರೆ,ರೋಟರಿ ಕ್ಲಬ್ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಈ ಶಿಬಿರ ಸಂಘಟಿಸಿದ್ದು ಸಾರ್ವಜನಿಕರು ರಕ್ತದಾನ ಮಾಡಬಹುದು’ ಎಂದು ಪ್ರಕಟಣೆ ತಿಳಿಸಿದೆ.
More Stories
ಎಐಟಿಎಮ್ ಕೋಡ್ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಎಐಟಿಎಮ್ ಭಟ್ಕಳದಲ್ಲಿ ಉದ್ಘಾಟನೆ
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ