
ಭಟ್ಕಳ: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ತಾಲ್ಲೂಕಿನಯಾದ್ಯಂತ ಶನಿವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬೆಳಿಗ್ಗೆಯೇ ಮಾಸ್ಕ್‌ಧಾರಿ ಜನರು ನಾಗರ ಕಲ್ಲುಗಳಿಗೆ ಪೂಜೆ ಸಲ್ಲಿಸಿ ಹಾಲು ಎರೆಯುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಕೋವಿಡ್ ಕಾರಣಕ್ಕೆ ಈ ಬಾರಿ ಪಂಚಮಿ ಹಬ್ಬದಲ್ಲಿ ಸಡಗರ ತೋರದೆ ಸರಳವಾಗಿ ಆಚರಿಸಲಾಯಿತು. ಅದೇರೀತಿ
ಮುಟ್ಟಳ್ಳಿ ರೈಲ್ವೆ ನಿಲ್ದಾಣ ಸಮೀಪದಲ್ಲಿ ಇರುವ
ನಾಗ ಮಾಸ್ತಿ ದೇವಸ್ಥಾನ ದಲ್ಲಿ ಪಂಚಮಿ ಹಬ್ಬದ ಆಚರಣೆಗಳು ಗೋಚರಿಸಿದವು ಶ್ರದ್ಧಾಭಕ್ತಿಯಿಂದ ಭಕ್ತಾದಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ನಾಗರ ಕಲ್ಲುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಹಾಲು ಎರೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದರು.ಅದೇರೀತಿ
ತಾಲೂಕಿನ ಬೆಳಲಖಂಡದ ಮೂರುಬಾಗಿಲ ನಾಗದೇವಸ್ಥಾನ, ಮುರ್ಡೇಶ್ವರದ ನಾಗದೇವಸ್ಥಾನಗಳಲ್ಲಿ ಭಕ್ತರು ಕಿಕ್ಕಿರಿದು ಸೇರಿದ್ದರು. ಗ್ರಾಮೀಣ ಭಾಗಗಳಲ್ಲಿಯೂ ನಾಗದೇವರ ವಿಗ್ರಹಗಳಿಗೆ ಸಾರ್ವಜನಿಕರು ಮುಂಜಾನೆಯಿಂದಲೆ ಪೂಜೆ ಸಲ್ಲಿಸುತ್ತಿರುವದು ಕಂಡುಬಂತು. ಕರೊನಾ ಬೀತಿ ಹಿನ್ನಲೆ ಶ್ರಾವಣ ಮಾಸದ ಮೊದಲ ಹಬ್ಬವನ್ನು ಸರಳವಾಗಿ ಆಚರಿಸುವಂತಾಯಿತು.
More Stories
ಎಐಟಿಎಮ್ ಕೋಡ್ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಎಐಟಿಎಮ್ ಭಟ್ಕಳದಲ್ಲಿ ಉದ್ಘಾಟನೆ
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ