May 5, 2024

Bhavana Tv

Its Your Channel

ಕಾಲೇಜು ಉಪನ್ಯಾಸಕಿ ಸೇರಿದಂತೆ ಹೊನ್ನಾವರದಲ್ಲಿ ರವಿವಾರ ಐವರಲ್ಲಿ ಸೋಂಕು ಧೃಡ ಸಾಧ್ಯತೆ

ಹೊನ್ನಾವರ: ರವಿವಾರವು ಕೊರೋನಾ ಸೊಂಕಿತ ಪ್ರಕರಣ ಮುಂದುವರೆದಿದ್ದು ಪ್ರಾಥಮಿಕ ಸಂಪರ್ಕ ಸೇರಿದಂತೆ ಒಟ್ಟು ೫ ಜನರಲ್ಲಿ ಸೋಂಕು ಧೃಡವಾಗಿದೆ.
ಸಾಲ್ಕೋಡ್ ಗ್ರಾಮದ ಕಾನಕ್ಕಿಯ ೯ ವರ್ಷದ ಬಾಲಕಿ, ಖಾಸಗಿ ಲಾಡ್ಜನಲ್ಲಿ ಕ್ವಾರಂಟೈನ್ ಆಗಿದ್ದ ೯ ವರ್ಷದ ಬಾಲಕ, ಹೊನ್ನಾವರ ಪಟ್ಟಣದ ೨೫ ವರ್ಷದ ಯುವಕ , ಮುಗ್ವಾ ಗ್ರಾಮದ ಆರೋಳ್ಳಿಯ ೬೮ ವರ್ಷದ ಮಹಿಳೆ, ಕಾಲೇಜಿನಲ್ಲಿ ಉಪನ್ಯಾಸಕಿ ಆಗಿ ಕಾರ್ಯನಿರ್ವಹಿಸುವ ೩೫ ವರ್ಷದ ಮಹಿಳೆಯಲ್ಲಿ ರವಿವಾರ ಸೋಂಕು ಪತ್ತೆಯಾಗಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ೧೨೧ಕ್ಕೆ ಏರಿಕೆಯಾಗಿದ್ದು, ಸಕ್ರೀಯ ಪ್ರಕರಣದ ಸಂಖ್ಯೆ ೩೭ಕ್ಕೆ ಏರಿಕೆಯಾಗಿದೆ. ವಿವರ ಹೆಲ್ತ ಬುಲೆಟಿನ್ ಬಳಿಕ ಧೃಡವಾಗಲಿದೆ.

error: