December 19, 2024

Bhavana Tv

Its Your Channel

ಕುಮಟಾ ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ

ಕುಮಟಾ:
ಮೊಘಲರ ದಾಳಿಯಿಂದ ಅವನತಿಯ ಹಾದಿಯಲ್ಲಿದ್ದ ಹಿಂದೂ ಧರ್ಮವನ್ನು ರಕ್ಷಿಸಿ ಬೆಳೆಸಲು ಶ್ರಮಿಸಿದ ವ್ಯಕ್ತಿ ಛತ್ರಪತಿ ಶಿವಾಜಿ. ದೇಶದಲ್ಲಿ ಹಿಂದೂ ಧರ್ಮದ ಕೀರ್ತಿ ಪತಾಕೆಯನ್ನು ಹಾರಿಸಿದ ಕೀರ್ತಿ ಶಿವಾಜಿ ಮಹಾರಾಜನಿಗೆ ಸಲ್ಲುತ್ತದೆ ಎಂದು ತಹಶೀಲ್ದಾರರಾದ ಮೆಘರಾಜ ನಾಯ್ಕ ತಾಲೂಕ ಆಡಳಿತ ಹಾಗೂ ತಾಲೂಕ ಪಂಚಾಯತ್ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ಕುಮಟಾ ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂದು ಮೋಘಲರು ಹಿಂದೂ ಧರ್ಮವನ್ನು ಕಡೆಗಣೆಸಿ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದ್ದ ಸಂದರ್ಭದಲ್ಲಿ ಹಿಂದೂ ಧರ್ಮ ರಕ್ಷಣೆಗಾಗಿ ಧರ್ಮೋದ್ದಕರಾಗಿ ಹಿಂದೂಗಳಿಗಾಗಿ ಹೋರಾಡಿದ ಮಹಾನ್ ಪುರುಷರು ಛತ್ರಪತಿ ಶಿವಾಜಿ ಮಹಾರಾಜರು. ಇಂದು ಅವರನ್ನು ಸ್ಮರಿಸಿಕೊಳ್ಳುತ್ತ ಅವರ ತತ್ವ ಸಿದ್ದಾಂತಗಳು ಪ್ರತಿಯೊಬ್ಬರಲ್ಲಿಯೂ ರೂಢಿಗತವಾಗಬೇಕು ಎಂದರು.
ಛತ್ರಪತಿ ಶಿವಾಜಿ ಕುರಿತು ವಿಶೇಷ ಉಪನ್ಯಾಸರಾಗಿ ಆಗಮಿಸಿದ ಡಾ.ಎ.ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕಾಲೇಜಿನ ಉಪನ್ಯಾಸಕ ಎಮ್.ಜಿ.ನಾಯ್ಕ ಮಾತನಾಡಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಶಿವಾಜಿಯ ಆದರ್ಶ, ಚಿಂತನೆಗಳು ಸದಾ ಮೂಡುತ್ತಿರಬೇಕು. ದೇಶದ ಸ್ವಾಭಿಮಾನಕ್ಕೆ ತೊಂದರೆಯಾದಾಗ ಸ್ವಾಭಿಮಾನಿ ನಾಗರಿಕರು ರಕ್ಷಣೆಗೆ ಬರಬೇಕು. ಶಿವಾಜಿ ಮಹಾರಾಜರು ಭಾರತೀಯ ಸಮಾಜದ ಮೌಲ್ಯಗಳನ್ನು ಮನೆ ಮತ್ತು ಮನಗಳಿಗೆ ತಲುಪಿಸಿದ ಮಹಾನ್ ವ್ಯಕ್ತಿ ಎಂದು ಶಿವಾಜಿ ಮಹಾರಾಜರ ಕುರಿತು ಉಪನ್ಯಾಸ ನೀಡಿದರು.
ಕಾರ್ಯನಿರ್ವಹಣಾಧಿಕಾರಿ ಸಿ.ಟಿ ನಾಯ್ಕ ಮಾತನಾಡಿ.ಹಿಂದೂ ಧರ್ಮದ ಏಳಿಗೆಗಾಗಿ ಮಹಾರಾಷ್ಟ್ರದ ಏಕಿಕರಣದಲ್ಲಿ ಶಿವಾಜಿ ಮಹಾರಾಜರ ಪಾತ್ರ ಬಹುಮುಖ್ಯ. ಧೈರ್ಯ ಸಾಹಸಕ್ಕೆ ಹೆಸರುವಾಸಿಯಾಗಿದ್ದ ಅವರು ಹಿಂದುತ್ವದ ಚಿಂತನೆಗಳಗಳನ್ನು ಹೊಂದಿದ್ದರು. ಇಂದಿನ ಯುವ ಪೀಳಿಗೆ ಶಿವಾಜಿಯವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡು ಹೋಗಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಅಭಿಯಂತರರಾದ ಆರ್ ಜಿ ಗುನಗಿ,ತಾಲೂಕಾ ಆರೋಗ್ಯಾಧಿಕಾರಿ ಆಜ್ಞಾ ನಾಯಕ್,ಕ್ರೈಂ ಪಿ.ಎಸ್.ಐ ಸುಧಾ ಅಘನಾಶಿನಿ, ಕೃಷಿ ಇಲಾಖಾ ಅಧಿಕಾರಿ ಶಂಕರ ಹೆಗಡೆ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು,ವಿಧ್ಯಾರ್ಥಿಗಳು ಹಾಜರಿದ್ದರು.

error: