October 5, 2024

Bhavana Tv

Its Your Channel

ನಿರ್ದಿಷ್ಟ ದಾಖಲಾತಿ ವತ್ತಾಯಿಸದೇ ಮಂಜೂರಿ ಪ್ರಕ್ರಿಯೇ ಶೀಘ್ರದಲ್ಲಿ ಜರುಗಿಸುವ ಕುರಿತು ಜಿಲ್ಲಧಿಕಾರಿಗಳಿಗೆ ಅರಣ್ಯ ಅತಿಕ್ರಮಣದಾರರು ವೈಯಕ್ತಿಕವಾಗಿ ತಕರಾರು ಅರ್ಜಿ ಸಲ್ಲಿಸುವ ಅಭಿಯಾನ

ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಇಂದು ಕ್ರಿಕೇಟ್ ಅಕಾಡೆಮಿ ಆವರಣದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂಧ್ರ ನಾಯ್ಕ ನೇತ್ರತ್ವದಲ್ಲಿ ಜರುಗಿತು.

  ಉ.ಕ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅತಿಕ್ರಮಣದಾರರ ಅರ್ಜಿಯನ್ನು ೩ ತಲೆಮಾರಿನ ಸಾಗುವಳಿ ದಾಖಲೆಯನ್ನು ಆಧರಿಸಿ ವತ್ತಾಯಿಸುತ್ತಿದ್ದು ಈ ದಿಶೆಯಲ್ಲಿ ೮೫,೭೫೭ ಅರ್ಜಿ ಸಲ್ಲಿಸಿದ್ದು ಅವುಗಳಲ್ಲಿ ೨೪,೨೨೦ ಅರ್ಜಿಗಳು ತೀರಸ್ಕಾರವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ತೀರಸ್ಕರಿಸಿದ ಆದೇಶವು ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿದಿವಿಧಾನವನ್ನು ಅನುಸರಿಸದೇ ಅರ್ಜಿಗಳನ್ನು ತೀರಸ್ಕರಿಸುವುದಕ್ಕೆ ಆಕ್ಷೇಪಿಸಿ ಸದ್ರಿ ಅಭಿಯಾನವನ್ನು ಜರುಗಿಸಿದ್ದು ಇಂದಿನ ಕಾರ್ಯಕ್ರಮದ ವಿಶೇಷವಾಗಿತ್ತು.

   ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ನಿರ್ದಿಷ್ಠ ಪಡಿಸಿದ ದಾಖಲತಿ ಸಾಕ್ಷö್ಯಗಳನ್ನು ಆಧರಿಸಲು ವತ್ತಾಯಿಸತಕ್ಕದಲ್ಲ  ಅಲ್ಲದೇ ಕೇಂದ್ರ ಬುಡಕಟ್ಟು ಮಂತ್ರಾಲಯವು ೨೫ ವರ್ಷದ ಸ್ವಾಧಿನಕ್ಕೆ ಅತಿಕ್ರಮಣದಾರರ ವೈಯಕ್ತಿಕ ದಾಖಲೆ ಪರಿಗಣಿಸದೇ ಅರಣ್ಯ ಅತಿಕ್ರಮಣದಾರರು ಸಾಗುವಳಿಯ ಪ್ರದೇಶ, ಜನವಸತಿ ಪ್ರದೇಶ ಇರುವ ಆಧಾರದ ಮೇಲೆ ಮಂಜೂರಿ ಪ್ರಕ್ರಿಯೇ ಜರುಗಿಸಬೇಕೆಂಬ ಆಕ್ಷೇಪಣೆ ಜಿಲ್ಲಾಧಿಕಾರಿಗಳಿಗೆ ಇಂದು ಸಲ್ಲಿಸಿದ ತಕರಾರು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

   ತಕರಾರು ಅರ್ಜಿಯಲ್ಲಿ ಗುಜರಾತ ಉಚ್ಛ ನ್ಯಾಯಾಲಯವು ಸಹಿತ ನಿರ್ದಿಷ್ಟ ದಾಖಲಾತಿ ಸಾಕ್ಷö್ಯಗಳನ್ನು ವತ್ತಾಯಿಸುವುದು ಕಾನೂನು ಬಾಹಿರ ಎಂದು ಆದೇಶಿಸಿದ ಅಂಶವನ್ನು ತಕರಾರು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೇ ಕಾನೂನಿನಲ್ಲಿ ಉಲ್ಲೇಖಿಸಿರುವಂತೆ ಮೌಖಿಕ ಹಾಗೂ ಪ್ರತ್ಯಕ್ಷ ಸಾಗುವಳಿ ಸಾಕ್ಷಿಯ ಮೇಲೆ ಮಂಜೂರಿ ನೀಡಬೇಕಾಗಿ ಪ್ರತಿಯೊಬ್ಬ ಅತಿಕ್ರಮಣದಾರರ ತಕರಾರು ಅರ್ಜಿಯಲ್ಲಿ ಉಲ್ಲೇಖಿಸಲ್ಪಟ್ಟಿದೆ.

ತಕರಾರು ಅರ್ಜಿ ಸಲ್ಲಿಸುವ ಅಭಿಯಾನದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೊಂಡ, ಪಾಂಡುರAಗ ನಾಯ್ಕ, ಮಹಮ್ಮದ ಅಲಿ, ಮಾದೇವ ನಾಯ್ಕ, ಕರಿಮ ಸಾಬ, ದತ್ತ ನಾಯ್ಕ, ನಾರಾಯಣ ಮರಾಠಿ, ಇರಶಾದ ಮುಂತಾದವರು ನೇತ್ರತ್ವ ವಹಿಸಿದ್ದರು.

     ಸ್ಥಳೀಯ ತಹಶಿಲ್ದಾರ ನೇತ್ರತ್ವದಲ್ಲಿ ೧೦ ವಿಶೇಷ  ಕೌಂಟರಗಳನ್ನು ಮಾಡಿ ತಾಲೂಕಾ ದಂಡಾಧಿಕಾರಿ ಕಛೇರಿಯ ಸಿಬ್ಬಂಧಿಗಳು ಅರ್ಜಿ ಸ್ವಿಕರಿಸಲು ವ್ಯವಸ್ಥೆಯನ್ನು ಜರುಗಿಸಲಾಗಿತ್ತು. ಸಿ.ಪಿ.ಐ , ಪಿ.ಎಸ.ಐ ಗಳು ಕಾನೂನು ಪಾಲನೆ ಜರುಗಿಸಿದರು.
error: