March 26, 2024

Bhavana Tv

Its Your Channel

ಮತ್ತೆ ಬುಗಿಲೆದ್ದ ಮೀನು ಮಾರಾಟಗಾರ ಮಹಿಳೆಯರ ಪ್ರತಿಭಟನೆ,

ಭಟ್ಕಳ ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ತಿಂಗಳುಗಳಿAದ ಮೀನು ಮಾರಾಟಗಾರ ಮಹಿಳೆಯರು ಮಿನು ಮಾರಿಕಟ್ಟೆಯ ಮುಂಬಾಗದಲ್ಲಿ ಅನದಿಕ್ರತವಾಗಿ ಮಿನು ಮಾರಾಮಾಡುತ್ತಿರುವ ಬಗ್ಗೆ ಪ್ರತಿಭಟನೆ ನಡೆಸುತ್ತಲೆ ಬಂದಿದ್ದರು ಇದಕ್ಕೆ ಗ್ರಾಮ ಪಂಚಾಯತ್ ಸರಿಯಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಬುದುವಾರ ಗ್ರಾಮ ಪಂಚಾಯತ್ ಮುಂಬಾಗದಲ್ಲಿ ಮೀನು ಮಾರಾಟ ಮಾಡುವುದರ ಮೂಲಕ ಪ್ರತಿಭಟನೆ ಇಳಿದ್ದಿದ್ದರು ಆದರೆ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗು ಜನಪ್ರತಿನಿದಿಗಳು ಯಾವುದೇ ಸ್ಪಂದನೆಯನ್ನು ನೀಡದೆ ಬೆಜವಬ್ದಾರಿತನ ಪ್ರದರ್ಶಿಸಿದ ಘಟನೆ ನಡೆದಿದೆ

ತಿಂಗಳುಗಳ ಹಿಂದೆ ಸ್ಥಳಿಯ ಮಿನುಮಾರಾಟಗಾರ ಮಹಿಳೆಯರು ಗ್ರಾಮ ಪಂಚಾಯತ್ ಸುಪರ್ದಿಯಲ್ಲಿರುವ ಮೀನು ಮಾರಿಕಟ್ಟೆಯ ಮುಂಬಾಗದಲ್ಲಿ ಗ್ರಾಮ ಪಂಚಾಯತ್ ಸ್ವತಃ ತಾನೆ ಖಾಸಗಿ ವ್ಯಕ್ತಿಯೊಬ್ಬರಿಗೆ ಮೀನು ಮಾರಾಟ ಮಾಡಲು ಅನುಮತಿಯನ್ನು ಕೊಟ್ಟಿತ್ತು ಈ ಹಿನ್ನೆಯಲ್ಲಿ ಸ್ಥಳಿಯ ಮಹಿಳಾ ಮಿನು ಮಾರಾಟಗಾರರು ಪಂಚಾಯತ್ ಮುಂಬಾಗದಲ್ಲಿ ಮೀನು ಮಾರಾಟ ಮಾಡುವುದರ ಮೂಲಕ ಪ್ರತಿಭಟನೆಗೆ ಮುಂದಾಗಿದ್ದರು ಇದರಿಂದ ಎಚ್ಚೆತ್ತ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟೆಶ ನಾಯ್ಕ ಖಾಸಗಿಯವರಿಗೆ ಕೊಟ್ಟ ಅನಿಮತಿ ಪತ್ರವನ್ನು ರದ್ದುಗೊಳಿಸಿ ಆಗಿರುವ ತಪ್ಪನ್ನು ಸರಿ ಮಾಡಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದರು ಆದರೆ ಆ ಖಾಸಗಿ ವ್ಯಕ್ತಿ ಮಿನು ಮಾರಿಕಟ್ಟೆಯ ಮುಂಬಾಗದಲ್ಲಿ ಮೀನು ಮಾರಾಟ ಮಾಡುವುದನ್ನು ನಿಲ್ಲಿಸದ ಕಾರಣ ಬುದವಾರ ಮಹಿಳಾ ಮೀನು ಮಾರಾಟಗಾರ ಮಹಿಳೆಯರು ಗ್ರಾಮ ಪಂಚಾಯತ್ ಮುಂಬಾಗದಲ್ಲಿ ಮೀನು ಮಾರಾಟ ಮಾಡುವುದರ ಮೂಲಕ ಪ್ರತಿಭಟನೆಗೆ ಮುಂದಾದದರು ಆದರೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಲಿ , ಪಿ ಡಿ ಓ ಆಗಲಿ ಇವರ ಈ ಪ್ರತಿಭಟನೆ ಲೆಕ್ಕಿಸದೆ ಉರಿಯುವ ಗಾಯಕ್ಕೆ ಉಪ್ಪು ತುಂಬುವ ಕೆಲಸಕ್ಕೆ ಕೈ ಹಾಕುವುದ ಮೂಲಕ ಮಹಿಳಾ ಮೀನು ಮಾರಾಟಗಾರರ ಆಕ್ರೋಶಕ್ಕೆ ಬಲಿಯಾಗಿದ್ದಾರೆ. ಒಂದು ಕಡೆ ಗ್ರಾಮ ಪಂಚಾಯತ್ ಬಿದಿಗಳಲ್ಲಿ ಮೀನು ಮಾರಾಟ ಮಾಡಬೇಡಿ ಮೀನು ಮಾರುಕಟ್ಟೆಯಲ್ಲೆ ಮೀನು ಮಾರಾಟ ಮಾಡಿ ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನಿನ ಮಾತನಾಡಿ ಈಗ ಖಾಸಗಿ ವ್ಯಕ್ತಿಯೊಬ್ಬರಿಗೆ ಮಿನು ಮಾರುಕಟ್ಟೆಯ ಮುಂಬಾಗದಲ್ಲಿ ಮೀನು ಮಾರಾಟ ಮಾಡಲು ಅನುಮತಿ ಪತ್ರವನ್ನು ನೀಡಿ ನಂತರ ರದ್ದು ಪಡಿಸಿದೆ ಆದರೆ ಖಾಸಗಿ ವ್ಯಕ್ತಿಯನ್ನು ಮೀನು ಮಾರಾಟ ಮಾಡುವುದನ್ನು ತಡೆಯು ಪ್ರಯತ್ನವನ್ನು ಮಾಡುತ್ತಿಲ್ಲಾ ಇದು ಸಾರ್ವಜನಿಕ ವಲಯದಲ್ಲಿ ಒಂದು ರೀತಿಯ ಸಂಶಯ ಹುಟ್ಟುಹಾಕಿದೆ ಎಂದರೆ ತಪ್ಪಾಗಲಿಕ್ಕಿಲ್ಲಾ

ಈ ಬಗ್ಗೆ ಮೀನು ಮಾರಾಟಗಾರ ಮಹಿಳೆಯೊಬ್ಬರು ಮಾತನಾಡಿ ಗ್ರಾಮ ಪಂಚಾಯತ್ ನಮಗೆ ಮೀನು ಮಾರುಕಟ್ಟೆಯ ಮುಂಬಾಗದಲ್ಲಿ ಮೀನುಮಾರಾಟ ಮಾಡಬಾರದು ಎಂಬ ಕಾನೂನು ಮಾತನಾಡಿ ಈಗ ಬೈಂದೂರಿನ ಖಾಸಗಿ ವ್ಯಕ್ತಿಯೊಬ್ಬರು ಮಾರಿಕಟ್ಟೆಯ ಮುಂಬಾಗದಲ್ಲೆ ಮೀನು ಮಾರಾಟ ಮಾಡಿದರೆ ಯಾವುದೆ ಕಾನೂನಿನ ಮಾತನಾಡುತ್ತಿಲ್ಲಾ ಈ ಕಾರಣ ನಾವು ಇಂದು ಪ್ರತಿ ಭಟನೆಗೆ ಮುಂದಾಗಿದ್ದೆವೆ ಆದರೆ ಇಲ್ಲಿಯ ಯಾವುದೆ ಅಧಿಕಾರಿಗಳು ನಮಗೆ ಸ್ಪಂದಿಸುತ್ತಿಲ್ಲಾ ಬೀಸಿಲಲ್ಲಿ ಪ್ರತಿಭಟನಾ ನೀರತ ಮಹಿಳೆಯರು ತಲೆ ಸುತ್ತು ಬಂದು ಬಿದ್ದಿದ್ದಾರೆ ಆದರೆ ನಮ್ಮನ್ನು ಯಾರು ಕೇಳುವವರೆ ಇಲ್ಲವಾಗಿದ್ದಾರೆ ಇದು ಹೀಗೆ ಮುಂದುವರಿದಲ್ಲಿ ನಮ್ಮ ಪ್ರತಿಭಟನೆ ಉಗ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದು ಹೇಳಿದರು.

error: