December 22, 2024

Bhavana Tv

Its Your Channel

ಪರಂಪರೆಯ ರಕ್ಷಣೆ ಅಗತ್ಯ:ಪ್ರೊ.ಆರ್.ವಿ ಹೆಗಡೆ

ಹೊನ್ನಾವರ:ಆಧುನಿಕಕತೆಯ ಭರಾಟೆಯಲ್ಲಿ ನಮ್ಮ ಪರಂಪರೆ ಕಳೆದುಹೋಗದಂತೆ ಅಗತ್ಯ ಜಾಗೃತಿ ವಹಿಸಬೇಕಿದೆ’ ಎಂದು ಎಸ್.ಡಿ.ಎಂ.ಕಾಲೇಜಿನ ಭೂಗೋಳಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ.ಆರ್.ವಿ.ಹೆಗಡೆ ಸಲಹೆ ನೀಡಿದರು.

ಕಾಲೇಜಿನಲ್ಲಿ ಪರಂಪರೆ ಕೂಟದ ಪ್ರಸಕ್ತ ಸಾಲಿನ ಕಾರ್ಯ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ‘ಬದುಕಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಿದೆ.ಆಧುನಿಕ ಯುಗದಲ್ಲಿ ಹಲವಾರು ಮಹತ್ವದ ಆವಿಷ್ಕಾರಗಳಾಗಿವೆ.ಮನಷ್ಯನ ಸುಖ ಜೀವನಕ್ಕೆ ಆಧುನಿಕ ಸೌಲಭ್ಯಗಳ ಅಗತ್ಯವಿದೆ.ಪರಂಪರೆಯ ಹಿನ್ನೆಲೆಯಲ್ಲಿ ಸಮಕಾಲೀನ ಬದುಕಿಗೆ ಅಗತ್ಯವಾದ ಆಧುನಿಕತೆಯನ್ನು ಅಳವಡಿಸಿಕೊಳ್ಳುವ ಜಾಣ್ಮೆ ತೋರುವುದು ಅಗತ್ಯ’ ಎಂದು ಅವರು ಹೇಳಿದರು.
‘ಹೊನ್ನಾವರ ತಾಲ್ಲೂಕಿನ ಸ್ಮಾರಕಗಳು’ ವಿಷಯದ ಕುರಿತು ಉಪನ್ಯಾಸ ನೀಡಿದ ಪ್ರೊ.ಎಂ.ಜಿ.ಹೆಗಡೆ,’ಶಾಸನ ಮೊದಲಾದ ಐತಿಹಾಸಿಕ ಸ್ಮಾರಕಗಳ ಕುರಿತು ಯಾವುದೇ ಪೂರ್ವಾಗ್ರವಿಲ್ಲದೆ ಅಧ್ಯಯನ ನಡೆಸಿ ಸ್ಥಳೀಯ ಇತಿಹಾಸದ ಕುರಿತು ಇತಿಹಾಸ ವಿದ್ಯಾರ್ಥಿಗಳು ಬೆಳಕು ಚೆಲ್ಲಬೇಕು’ ಎಂದು ಹೇಳಿದರು.
‘ಹೊನ್ನಾವರ ತಾಲ್ಲೂಕಿನ ಸಾಂಸ್ಕೃತಿಕ ಪರಂಪರೆ’ ವಿಷಯದ ಕುರಿತು ಉಪನ್ಯಾಸ ನೀಡಿದ ಪ್ರೊ.ನಾಗರಾಜ ಹೆಗಡೆ ಅಪಗಾಲ,’ಯಕ್ಷಗಾನ ಹಾಗೂ ಇನ್ನುಳಿದ ಜಾನಪದ ಕಲಾಪ್ರಕಾರಗಳಲ್ಲಿ ಹೊನ್ನಾವರ ತಾಲ್ಲೂಕು ಶ್ರೀಮಂತ ಪರಂಪರೆ ಹೊಂದಿದ್ದು ನಾಡಿನ ಸಾಹಿತ್ಯ ಹಾಗೂ ಸಂಸ್ಕೃತಿಗೆ ಈ ತಾಲ್ಲೂಕಿನ ವ್ಯಕ್ತಿಗಳು ಕೊಡುಗೆ ಅನನ್ಯ’ ಎಂದು ಹೇಳಿದರು.
ಪ್ರಾಚಾರ್ಯರಾದ ಡಾ.ವಿಜಯಲಕ್ಷಿö್ಮ ಎಂ. ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಂಪರೆ ಕೂಟದ ಸಂಚಾಲಕ ಪ್ರೊ.ಜಿ.ಎಸ್.ಹೆಗಡೆ ವಂದಿಸಿದರು.

error: