
ಭಟ್ಕಳ: ಬೋಟ್ ಬಲೆ ದುರಸ್ತಿಗೆಂದು ವ್ಯಕ್ತಿಯಿಬ್ಬರಿಂದ ೪೫ ಲಕ್ಷ ರೂ. ಪಡೆದು ವಾಪಸ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಠಾಣೆಯಲ್ಲಿ ಮ್ರತ್ಯುಂಜಯ ಆಚಾರಿ ದೂರು ನೀಡಿದ್ದಾರೆ.
ಆರೋಪಿಗಳು ಯಲ್ವಡಿಕವೂರು ಹಡಿನ್ ಗ್ರಾಮದ ರ‍್ಷಾದ್ ರಜಾಕ್ ಶೇಖ್, ಹಾಗೂ ರಜಾಕ್ ಶೇಖ್ ಎಂದು ತಿಳಿದು ಬಂದಿದೆ.
ಆರೋಪಿಗಳು ಬೋಟ್ ದುರಸ್ಥಿ ಮಾಡುವ ಸಲುವಾಗಿ ಹಾಗೂ ಬೇರೆ ಬಲೆಯನ್ನು ಖರೀದಿಸುವ ಸಲುವಾಗಿ
ದೂರುದಾರರಾದ ಮ್ರತ್ಯುಂಜಯ ಆಚಾರಿ ಹಾಗೂ ಅವರ ತಮ್ಮ ಅರವಿಂದ ಆಚಾರಿ ರವರಿಂದ ೪೫ ಲಕ್ಷ ರೂಪಾಯಿಗಳನ್ನು ತಕ್ಷಣ ವಾಪಾಸ್ ಕೊಡುವುದಾಗಿ ಹೇಳಿ ಪಡೆದುಕೊಂಡಿದ್ದಾರೆ. ಕೊಟ್ಟ ಹಣ ವಾಪಾಸ್ ಕೊಡದೇ ಮೋಸ ಮಾಡಿದ್ದಲ್ಲದೇ, ಫೆಬ್ರವರಿ ೧೫ ರಂದು ಗಂಟೆಯ ಸುಮಾರಿಗೆ ಆರೋಪಿ ರಜಾಕ್ ಶೇಖ್ ಎಂಬುವನು ಇನ್ನುಳಿದ ೫-೬ ಜನರೊಂದಿಗೆ ಗುಂಪು ಕಟ್ಟಿಕೊಂಡು ದೂರುದಾರ ಮ್ರತ್ಯುಂಜಯ ಹಾಗೂ ಅವರ ತಮ್ಮ ಅರವಿಂದ ಆಚಾರಿ ಅವರ ಮನೆಯಾದ ಚೌಥಣಿ ಮುಖ್ಯ ರಸ್ತೆಯ ಕಾಳಿಕಾಂಬಾ ದೇವಸ್ಥಾನದ ಎದುರು ಇರುವ ಮನೆಗೆ ಹೋಗಿ ಅಕ್ರಮ ಪ್ರವೇಶ ಮಾಡಿ ದೂರುದಾರರಿಬ್ಬರಿಗೂ ಕೊಲೆ ಮಾಡುವದಾಗಿ ಬೆದರಿಸಿ ಹಾಕಿರುವ ಕುರಿತು ಭಟ್ಕಳ ನಗರ ಠಾಣೆಯಲ್ಲಿ ದೂರುದಾರ ಮೃತ್ಯುಂಜಯ ಆಚಾರಿ
ಫೆಬ್ರವರಿ ೧೮ರಂದು ದೂರನ್ನು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
More Stories
ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ
ಪ್ರಸಿದ್ಧ ವೈದ್ಯ ಡಾ. ವೆಂಕಟರಮಣ ಹೆಗಡೆ ಹಾಗೂ ಸಂಗೀತಾ ಹೆಗಡೆ ಅವರಿಗೆ ಹುಕ್ಕೇರಿ ಶ್ರೀಗಳಿಂದ ಗೌರವ.
ಭಟ್ಕಳ: ಚುನಾವಣೆ ಎದುರಿಸಲು ನನ್ನ ಬಳಿ ಹಣ ಇದ್ದಿಲ್ಲ. ಮಹೀಳೆಯರು ತಮ್ಮಲ್ಲಿರುವ ಚಿನ್ನವನ್ನು ಅಡವು ಇಟ್ಟು ನನಗೆ ಹಣ ತಂದುಕೊಟ್ಟಿದ್ದಾರೆ. ನಾನು ಯಾವತ್ತೂ ಹಣವನ್ನು ಪ್ರೀತಿಸಲಿಲ್ಲ, ಮನುಷ್ಯರನ್ನು ಪ್ರೀತಿಸಿದ್ದೇನೆ ಎಂದು ನೂತನವಾಗಿ ನೇಮಕಗೊಂಡಿರುವ ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ ಹೇಳಿದರು