December 20, 2024

Bhavana Tv

Its Your Channel

ಹಣ ಕೇಳಿದಕ್ಕೆ ಕೊಲೆ ಬೆದರಿಕೆ

ಭಟ್ಕಳ: ಬೋಟ್ ಬಲೆ ದುರಸ್ತಿಗೆಂದು ವ್ಯಕ್ತಿಯಿಬ್ಬರಿಂದ ೪೫ ಲಕ್ಷ ರೂ. ಪಡೆದು ವಾಪಸ ಕೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಠಾಣೆಯಲ್ಲಿ ಮ್ರತ್ಯುಂಜಯ ಆಚಾರಿ ದೂರು ನೀಡಿದ್ದಾರೆ.

ಆರೋಪಿಗಳು ಯಲ್ವಡಿಕವೂರು ಹಡಿನ್ ಗ್ರಾಮದ ರ‍್ಷಾದ್ ರಜಾಕ್ ಶೇಖ್, ಹಾಗೂ ರಜಾಕ್ ಶೇಖ್ ಎಂದು ತಿಳಿದು ಬಂದಿದೆ.
ಆರೋಪಿಗಳು ಬೋಟ್ ದುರಸ್ಥಿ ಮಾಡುವ ಸಲುವಾಗಿ ಹಾಗೂ ಬೇರೆ ಬಲೆಯನ್ನು ಖರೀದಿಸುವ ಸಲುವಾಗಿ
ದೂರುದಾರರಾದ ಮ್ರತ್ಯುಂಜಯ ಆಚಾರಿ ಹಾಗೂ ಅವರ ತಮ್ಮ ಅರವಿಂದ ಆಚಾರಿ ರವರಿಂದ ೪೫ ಲಕ್ಷ ರೂಪಾಯಿಗಳನ್ನು ತಕ್ಷಣ ವಾಪಾಸ್ ಕೊಡುವುದಾಗಿ ಹೇಳಿ ಪಡೆದುಕೊಂಡಿದ್ದಾರೆ. ಕೊಟ್ಟ ಹಣ ವಾಪಾಸ್ ಕೊಡದೇ ಮೋಸ ಮಾಡಿದ್ದಲ್ಲದೇ, ಫೆಬ್ರವರಿ ೧೫ ರಂದು ಗಂಟೆಯ ಸುಮಾರಿಗೆ ಆರೋಪಿ ರಜಾಕ್ ಶೇಖ್ ಎಂಬುವನು ಇನ್ನುಳಿದ ೫-೬ ಜನರೊಂದಿಗೆ ಗುಂಪು ಕಟ್ಟಿಕೊಂಡು ದೂರುದಾರ ಮ್ರತ್ಯುಂಜಯ ಹಾಗೂ ಅವರ ತಮ್ಮ ಅರವಿಂದ ಆಚಾರಿ ಅವರ ಮನೆಯಾದ ಚೌಥಣಿ ಮುಖ್ಯ ರಸ್ತೆಯ ಕಾಳಿಕಾಂಬಾ ದೇವಸ್ಥಾನದ ಎದುರು ಇರುವ ಮನೆಗೆ ಹೋಗಿ ಅಕ್ರಮ ಪ್ರವೇಶ ಮಾಡಿ ದೂರುದಾರರಿಬ್ಬರಿಗೂ ಕೊಲೆ ಮಾಡುವದಾಗಿ ಬೆದರಿಸಿ ಹಾಕಿರುವ ಕುರಿತು ಭಟ್ಕಳ ನಗರ ಠಾಣೆಯಲ್ಲಿ ದೂರುದಾರ ಮೃತ್ಯುಂಜಯ ಆಚಾರಿ
ಫೆಬ್ರವರಿ ೧೮ರಂದು ದೂರನ್ನು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.‌

error: