December 22, 2024

Bhavana Tv

Its Your Channel

ಕಾಶಿ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ರಾಜ್ಯದ ಪೌರಾಢಳಿತ, ತೋಟಗಾರಿಕೆ ಹಾಗೂ ರೇಷ್ಮೆ ಖಾತೆಯ ಸಚಿವರಾದರ ಡಾ.ನಾರಾಯಣಗೌಡ ದಂಪತಿಗಳ ಭೇಟಿ …

ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ವಿಶೇಷಪೂಜೆ ಸಲ್ಲಿಸಿದ ಸಚಿವರು…. ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಶ್ರೀಗಳಿಗೆ ಶಾಲುಹೊದಿಸಿ ಸನ್ಮಾನಿಸಿ ಗುರುವಂದನೆ ಸಲ್ಲಿಸಿದ ಸಚಿವ ನಾರಾಯಣಗೌಡ ದಂಪತಿಗಳು… ಸಚಿವರಿಗೆ ಜಿಲ್ಲಾ ಪಂಚಾಯತಿ ಮಾಡಿ ಉಪಾಧ್ಯಕ್ಷ ಎಸ್.ಅಂಬರೀಶ್ ಸಾಥ್…

ಮಹಾಶಿವರಾತ್ರಿಯ ಅಂಗವಾಗಿ ಶ್ರೀ ತ್ರಿನೇತ್ರ ಮಹಂತ ಶಿವಯೋಗಿಗಳ ನೇತೃತ್ವದಲ್ಲಿ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಸಚಿವ ನಾರಾಯಣಗೌಡ ದಂಪತಿಗಳು ಭಾಗಿ….ನ್ಯಾಯ, ನೀತಿ, ಧರ್ಮ ಹಾಗೂ ಸತ್ಯದ ಮಾರ್ಗದಲ್ಲಿಯೇ ಸಾಗಿ ಯಶಸ್ಸುಗಳಿಸುವಂತೆ ಶ್ರೀಗಳ ಕರೆ…

ಸತತವಾದ ಜನಪರವಾದ ಹೋರಾಟ ಹಾಗೂ ಪರಿಶ್ರಮದ ಫಲವಾಗಿ ದೊರೆತಿರುವ ಅಧಿಕಾರವನ್ನು ಜನತೆಯ ಕಲ್ಯಾಣಕ್ಕೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಬಳಕೆ ಮಾಡಿ, ಅಧಿಕಾರ ಶಾಶ್ವತವಲ್ಲ…ಮಂತ್ರಿ ಪದವಿ ನೀರಮೇಲಿನ ಗುಳ್ಳೆಯಿದ್ದಂತೆ..ಆದ್ದರಿಂದ ಅಧಿಕಾರದಲ್ಲಿದ್ದಷ್ಟೂ ಸಮಯವನ್ನು ಜನತೆಯ ಸೇವೆಗೆ ಹಾಗೂ ನೊಂದ ಜನರ ಕಣ್ಣೀರನ್ನು ಒರೆಸಲು ಮೀಸಲಿಡಿ, ಕೃಷ್ಣರಾಜಪೇಟೆ ತಾಲ್ಲೂಕನ್ನು ಜಿಲ್ಲೆಯಲ್ಲಿಯೇ ಮಾದರಿ ತಾಲೂಕನ್ನಾಗಿ ಅಭಿವೃದ್ಧಿಪಡಿಸಿ ಜನತೆಯ ವಿಶ್ವಾಸ ನಂಬಿಕೆ ಉಳಿಸಿಕೊಂಡು ಮತ್ತೊಮ್ಮೆ ಶಾಸಕರಾಗಿ ಮಂತ್ರಿಗಳಾಗಿ ಎಂದು ಆಶೀರ್ವದಿಸಿದ ಚಂದ್ರವನ ಶ್ರೀಗಳು.. ‌

error: