December 22, 2024

Bhavana Tv

Its Your Channel

ಕೃಷ್ಣರಾಜಪೇಟೆ ತಾಲ್ಲೂಕಿನ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ವಕೀಲರಾದ ಎಂ.ಆರ್.ಪ್ರಸನ್ನಕುಮಾರ್

ಅಧ್ಯಕ್ಷ ಸ್ಥಾನಕ್ಕೆ ಹಿರಿಯ ವಕೀಲರಾದ ಎನ್.ಆರ್.ರವಿಶಂಕರ್ ಮತ್ತು ಎಂ.ಆರ್.ಪ್ರಸನ್ನಕುಮಾರ್ ಸ್ಪರ್ಧಿಸಿದ್ದರು….ಅಂತಿಮವಾಗಿ ಪ್ರಸನ್ನಕುಮಾರ್ ಅವರು ರವಿಶಂಕರ್ ಅವರನ್ನು ಪರಾಭವಗೊಳಿಸಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಕೆ.ಜೆ.ನಿರಂಜನ ಘೋಷಿಸಿದರು…
ಉಳಿದಂತೆ ಸಂಘದ ಪದಾಧಿಕಾರಿಗಳಾಗಿ ಉಪಾಧ್ಯಕ್ಷರಾಗಿ ಕೆ.ಆರ್.ಇಂದ್ರಕುಮಾರ್, ಕಾರ್ಯದರ್ಶಿಯಾಗಿ ಬಿ.ಆರ್.ಮೋಹನ್, ಖಜಾಂಚಿಯಾಗಿ ಬಿ.ಕೆ.ಯೋಗೇಶ್, ಜಂಟಿ ಕಾರ್ಯದರ್ಶಿಯಾಗಿ ಎಂ.ಎನ್. ಅನ್ವೇಶ್ ಆಯ್ಕೆಯಾದರು…. ಮಹಿಳಾ ನಿರ್ದೇಶಕರಾಗಿ ಹೆಚ್.ವಿ.ಆಶಾ, ಮಂಜುಳಾ, ಆಡಳಿತ ಮಂಡಳಿಯ ನೂತನ ನಿರ್ದೇಶಕರಾಗಿ ಡಿ.ಕೆ.ಗೋವಿಂದೇಗೌಡ, ಎಸ್.ಪಿ.ಗಿರೀಶ್, ವಿ.ಪ್ರಸನ್ನಕುಮಾರ್, ಸಂತೋಷಕುಮಾರ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಜೆ.ನಿರಂಜನ ತಿಳಿಸಿದರು….

ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಆರ್.ಪ್ರಸನ್ನಕುಮಾರ್ ಪತ್ರಕರ್ತರೊಂದಿಗೆ ಮಾತನಾಡಿ ವಕೀಲರ ಸಂಘವನ್ನು ಸಮರ್ಥವಾಗಿ ಮುನ್ನಡೆಸುವ ಜೊತೆಗೆ ಪ್ರಕರಣಗಳ ಶೀಘ್ರ ಇತ್ಯರ್ಥ ಹಾಗೂ ವಿಲೇವಾರಿಗೆ ಸಂಘವು ಬದ್ಧತೆಯಿಂದ ಕೆಲಸ ಮಾಡಲಿದೆ…ನಮ್ಮ ತಂಡದ ಮೇಲೆ ವಿಶ್ವಾಸವನ್ನಿಟ್ಟು ಭಾರೀ ಮತಗಳ ಅಂತರದಿಂದ ಗೆಲುವು ತಂದುಕೊಟ್ಟ ವಕೀಲ ಮಿತ್ರರಿಗೆ ಆಭಾರಿಯಾಗಿರುವುದಾಗಿ ತಿಳಿಸಿದರು…..

ವಕೀಲರ ಸಂಘದ ಮಾಜಿಅಧ್ಯಕ್ಷರಾದ ಜಿ.ಆರ್.ಅನಂತರಾಮಯ್ಯ ಮತ್ತು ಹೆಚ್.ರವಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಸನ್ನಕುಮಾರ್ ಮತ್ತು ಇತರೆ ಪದಾಧಿಕಾರಿಗಳನ್ನು ಅಭಿನಂದಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು…..

error: