ಕೆರೆಮನೆ ಶಂಭು ಹೆಗಡೆ ರಾಷ್ಟಿçÃಯ ನಾಟ್ಯೋತ್ಸವದ ನಾಲ್ಕನೇ ದಿನದ ಸಭಾ ಕಾರ್ಯಕ್ರಮ ಮಾನ್ಯ ಧರ್ಮದರ್ಶಿ ಶ್ರೀ ಹರಿಕೃಷ್ಣಾ ಪುನರೂರು ಇವರ ಅಧ್ಯಕ್ಷತೆಯಲ್ಲಿ ಯಕ್ಷಗಾನ ಶೈಲಿಯಲ್ಲಿ ಗಣಪತಿ ಪೂಜೆಯೊಂದಿಗೆ ಶುಭಾರಂಭಗೊAಡಿತು.
ಕಾರ್ಯಾಧ್ಯಕ್ಶರಾದ ಶ್ರೀ ಲಕ್ಷಿ÷್ಮÃನಾರಾಯಣ ಕಾಶಿಯವರು ಪ್ರಸ್ತಾವನೆಯೊಂದಿಗೆ ಸಭಾಸದರನ್ನು ಸ್ವಾಗತಿಸಿ ಇಂದಿನ ಕಾರ್ಯಕ್ರಮವನ್ನು ದಿ. ಡಾ. ಡಿ.ಕೆ. ಚೌಟರವರಿಗೆ ಸಂಪೂರ್ಣವಾಗಿ ಅರ್ಪಿಸಿದ ಅಗತ್ಯತೆಯನ್ನು ವಿವರಿಸಿದರು.
ವೇದಮೂರ್ತಿ ಹರಿನಾರಾಯಣ ದಾಸ ಅಸ್ರಣ್ಣ, ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಕಟೀಲು ಇವರಿಂದ ದೀಪ ಬೆಳಗುವುದರ ಮೂಲಕ ಸಭಾಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಯಕ್ಷಗಾನ ಕ್ಷೇತ್ರದ ಕಲಾವಿದರು, ಸಂಘಟಕರು ಮತ್ತು ಕಲಾಪೋಷಕರಾದ ಶ್ರೀ ಪ್ರಭಾಕರ ಹೆಗಡೆ, ಚಿಟ್ಟಾಣಿ, ಶ್ರೀ ಕೆ.ಎಸ್. ರಾಜಾರಾಮ್ ಕಿಲಾರ, ಶ್ರೀ ನಾಗೇಶ ಭಂಡಾರಿ, ಇಡಗುಂಜಿ ಇವರಿಗೆ ರಾಷ್ಟಿçÃಯ ನಾಟ್ಯೋತ್ಸವ ಸಮ್ಮಾನ ಸರ್ವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶ್ರೀ ಪ್ರಭಾಕ ಚಿಟ್ಟಾಣಿಯವರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾ ಸನ್ಮಾನ ತನ್ನ ವೃತ್ತಿಯ ಜವಾಬ್ದಾರಿಯನ್ನು ಹೆಚ್ಚಿಸಿ, ಕಲಾಲೋಕಕ್ಕೆ ಇನ್ನಷ್ಟು ಕೊಡುಗೆಗಳನ್ನು ನೀಡಲು ಪ್ರೇರೇಪಿಸುತ್ತದೆ ಎಂದರು. ಶ್ರೀ ್ರÃ ಕೆ.ಎಸ್. ರಾಜಾರಾಮ್, ಕಿಲಾರ ಇವರು ಮಾತನಾಡಿ ಕಲಾಪ್ರಪಂಚದ ವಿಸ್ತರಣೆಗೂ, ಭಾವನಾತ್ಮಕ ಅಭಿವ್ಯಕ್ತಿಗೂ ಪೂರಕವಾದ ಛಾಯಾಗ್ರಾಹಕನಾದ ನನಗೆ ನೀಡಿರುವ ಸಮ್ಮಾನ ಛಾಯಾಗ್ರಹಣ ಕ್ಷೇತ್ರಕ್ಕೆ ಸಂದಾಯವಾದ ಗೌರವವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ವೇದಮೂರ್ತಿ ಹರಿನಾರಾಯಣ ದಾಸ ಅಸ್ರಣ್ಣರವರು ಮಾತನಾಡುತ್ತ ವೈವಿಧ್ಯಮಯ ಕಲಾಕ್ಷೇತ್ರದಲ್ಲಿ, ವಿಭಿನ್ನ ಅಭಿರುಚಿಯ ಪ್ರೇಕ್ಷಕರ ಮಧ್ಯೆ ಭಾರತೀಯ ಪರಂಪರೆಯ ಸಂಸ್ಕöÈತಿಯನ್ನು ವಿಸ್ತರಿಸುವ ಕಲಾಪ್ರಕಾರಗಳನ್ನು ಮಾತ್ರ ಬಿಂಬಿಸುವ ನಾಟ್ಯೋತ್ಸವ ಭಾರತೀಯತೆಯನ್ನು ಪ್ರದರ್ಶಿಸುತ್ತದೆ ಎಂದು ಅಭಿಪ್ರಾಯಪಟ್ಟರು. ನಾಟ್ಯ ಮಾರ್ಗ, ಕಾವ್ಯ ಮಾರ್ಗವನ್ನು ಉಳಿಸಿ ಬೆಳೆಸುವ ಈ ನಾಟ್ಯೋತ್ಸವ ಇತರರಿಗೂ ಸ್ಪೂರ್ತಿ ಆಗಲಿ ಎಂದರು.
ಡಾ. ಮೋಹನ್ ಆಳ್ವಾರವರು ಅಭಿಪ್ರಾಯ ವ್ಯಕ್ತಪಡಿಸುತ್ತಾ ಅಷ್ಟ ರೀತಿಯ ಭಾರತೀಯ ನಾಟ್ಯಗಳು, ಹಲವು ರೀತಿಯ ಪಕ್ಕ ವಾದ್ಯಗಳು, ಜಾನಪದ ಕಲೆಗಳು, ಯಕ್ಷಗಾನ ಪರಂಪರೆಗಳು ಇವೆಲ್ಲಾ ಋಷಿ ಸಂಸ್ಕöÈತಿಯ ಭಾಗಗಳಾಗಿ ಮಾನಸಿಕ ಸಂತೋಷವನ್ನು ನೀಡುವ ಭಾರತೀಯ ಸಂಸ್ಕöÈತಿಯ ವಿನ್ಯಾಸಗಳಾಗಿವೆ. ಶಿಕ್ಷಣ ಪಡೆಯುವ ದಾರಿಯಲ್ಲಿ ಈ ಭಾರತೀಯ ಸಂಸ್ಕöÈತಿಯ ಅಂಗೋಪಾಯಗಳನ್ನು ಪಠ್ಯವಾಗಿ ಕಲಿತರೆ ಇದನ್ನು ಉಳಿಸಿ ಬೆಳೆಸಲು ಸಾಧ್ಯ ತನ್ಮೂಲಕ ಸುಂದರ ಮನಸ್ಸನ್ನು ಕಟ್ಟಿಕೊಳ್ಳಲು ಪೂರಕವಾಗಿರುತ್ತದೆ. ಸೌಂದರ್ಯ ಪ್ರಜ್ಞೆಯನ್ನು ಗಳಿಸಿದ ಮನುಷ್ಯ ಭಾರತವನ್ನು ಪ್ರೀತಿಸುತ್ತಾನೆ. ಜಾಗತಿಕ ಮಟ್ಟದಲ್ಲಿ ಗೌರವ ಪಡೆಯುವ ಮುಕ್ತ ಅವಕಾಶಗಳು ಪ್ರಸ್ತುತ ಇದೆ ಎಂದರು.
ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ಹರೀಶಕುಮಾರರವರು ಮುಖ್ಯ ಅತಿಥಿಗಳಾಗಿ ಮಾತನಾಡುತ್ತ ಉತ್ಸವಗಳು ಕಲೆಯನ್ನು ಬೆಳೆಸುವ, ಭಾರತೀಯತೆಯನ್ನು ಬಿಂಬಿಸುವ ತನ್ಮೂಲಕ ಸಂಸ್ಕöÈತಿಯ ಆರಾಧನೆಗೆ ಪೂರಕವಾಗಿರಬೇಕು ಎಂದರು. ಸ್ವಾತಂತ್ರ÷್ಯ ಮತ್ತು ಸ್ವೇಚ್ಛೆಯ ಮಧ್ಯೆ ಕಲೆಯ ಪ್ರತಿಭೆಯನ್ನು ಬೆಳೆಸುವ ಸೂಕ್ಷ÷್ಮತೆ ಎಲ್ಲರೂ ಅರಿತು ಸಮನ್ವಯತೆಯಲ್ಲಿ ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು.
ಶ್ರೀ ಸಾಯಿ ವೆಂಕಟೇಶರವರು ಮಾತನಾಡುತ್ತ ಯಕ್ಷಗಾನ ಜನಮಾನಸದಲ್ಲಿ ಸಮೀಕರಿಸಲು ಇನ್ನಷ್ಟು ವಿನ್ಯಾಸಗಳ ಅವಶ್ಯಕತೆ ಇದೆ ಎಂದರು. ಶ್ರೀ ಸೂರಾಲು ದೇವಿಪ್ರಸಾದ ತಂತ್ರಿಯವರು ಮಾತನಾಡುತ್ತ ಕೆರೆಮನೆ ಗಂಧರ್ವ ಲೋಕ. ಕಾರಣ ಯಕ್ಷಲೋಕಕ್ಕೆ ವಿಭಿನ್ನತೆಯನ್ನು ನೀಡಿ, ಆಂಗಿಕ ಅಭಿನಯಕ್ಕೆ ವಿಶಿಷ್ಟತೆಯನ್ನು ನೀಡಿದ ಮಹನೀಯರು ಕೆರೆಮನೆ ಕುಟುಂಬದ ಯಕ್ಷಲೋಕದ ತಾರೆಯರು ಎಂದರು. ಕೊನೆಯಲ್ಲಿ ಶ್ರೀ ಗಣಪಯ್ಯ ಗೌಡರು ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಹರಿಕೃಷ್ಣ ಪುನರೂರು ಮಾತನಾಡುತ್ತಾ ಯಕ್ಷಗಾನ ಅಂತರಾಷ್ಟಿçÃಯ ಕಲೆ. ಇದನ್ನು ಉಳಿಸಿ ಬೆಳೆಸಲು ನಾವೆಲ್ಲ ಪ್ರೋತ್ಸಾಹ ನೀಡುವುದು ನಮ್ಮ ಆದ್ಯ ಕರ್ತವ್ಯ ಎಂದರು. ದೇಶ ವಿದೇಶಗಳಿಂದ ಕಲಾಪ್ರಕಾರಗಳನ್ನು ಆಮಂತ್ರಿಸಿ ಮಾಡುವ ನಾಟ್ಯೋತ್ಸವ ನಿಜವಾದ ಅರ್ಥದಲ್ಲಿ ರಾಷ್ಟಿçÃಯ ನಾಟ್ಯೋತ್ಸವ ಎಂದು ಅಭಿಪ್ರಾಯಪಟ್ಟರು.
ಶ್ರೀ ಶಿವಾನಂದ ಹೆಗಡೆಯವರು ಸರ್ವರನ್ನೂ ವಂದಿಸಿದರು. ಶ್ರೀ ಸುದೀಶ್ ನಾಯ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.